ಹೆಣ್ಣು ಜನ್ಮ .

ತಾಯ್ತನದ ಹಂಬಲ.

ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು।

ಬಾಳಿನ ಪಲ್ಲವಿ ಜೋಗುಳವಾಗಲು ತಾಯ್ತನ ಬರಬೇಕು।

ಮಡಿಲಲಿ ಕಂದನು ನಗಬೇಕು।

ಹಣ್ಣನು ಕೊಡುವಾ ಮರವಾಗಿರಲು, ಅಕ್ಕರೆ ತೋರುವರು।

ಹಣ್ಣನು ಕೊಡದಾ ಮರವೆಂದರಿತರೆ ಕೊಡಲಿಯ ಬೀಸುವರು।

ಹೂವಿನ ಆಸೆಗೆ ತೋಟದ ಗಿಡಕೆ ನೀರನು ಎರೆಯುವರು।

ಹೂ ಬಿಡದಾ ಗಿಡವೆಂದು ತಿಳಿದರೆ ಮುಳ್ಳಿನ ಬೇಲಿಗೆ ಎಸೆಯುವರು।

ಚಿತ್ರ ಗೀತೆ (ಲಕ್ಷ್ಮಿಸರಸ್ವತಿ)

ಶೋಕವೇ ಜೀವನ.

ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ।

ಸಾರ್ವಭೌಮ ಶ್ರೀ ರಾಮಚಂದ್ರನ ಪ್ರೀತಿಯ ಆಸರೆಯೊಂದೇ

ಸಾಕೆಂದಳು ಆ ಮಾತೆ।

ಅಗ್ನಿ ಪರೀಕ್ಷೆಯ ಸತ್ವ ಪರೀಕ್ಷೆಗೆ ಗುರಿಯಾದಳು ಸೀತೆ।

ಅಗ್ನಿಯೆ ದಹಿಸದೆ ಘೋಷಿಸಿದ ”ಸೀತೆ ಪುನೀತೆ”।

ಅಲ್ಪಾಗಸನ ಕಲ್ಪನೆ ಮಾತಿಗೆ ಅಳುಕಿದ ಶ್ರೀರಾಮ।

ಸೀತೆ ಕಲುಷಿತೆ, ಸೀತೆ ದೂಷಿತೆ ಎಂದನು ರಾಜಾರಾಮ।

ಮತ್ತೆ ಸೀತೆಯ ಕಾಡಿಗಟ್ಟಿದ ನ್ಯಾಯವಾದಿ ರಾಮ।

ಪೂರ್ಣ ಗರ್ಭಿಣಿ, ಪುಣ್ಯರೂಪಿಣಿಯ ಕಂಡನು ವಾಲ್ಮೀಕಿ।

ಲೋಕಮಾತೆಗೆ ಶೋಕಸಾಗರವೆ? ನಿರ್ದಯಿ ರಾಮ।

ಪರ್ಣಕುಟೀರದೆ ಲವಕುಶ ಜನನ, ಸೀತೆಗೆ ಶಾಂತಿ ನಿಕೇತನ।

”ಪರಮ ಪಾವನೆ ಪ್ರಾಣ ವಲ್ಲಭೆ” ಎನ್ನುತ ರಾಮನ ಆಗಮನ।

ಸಂಗಮ ಸಮಯದೆ ಭೂಕಂಪನ।

ಚಿರ ವಿರಹವೇ ಜಾನಕಿ ಜೀವನ।

ಚಿತ್ರ ಗೀತೆ (ಶರ ಪಂಜರ)

ಹೆಣ್ಣಿನ ಮಹತ್ವ.

ಹೆಣ್ಣಲ್ಲವೇ ನಮ್ಮನ್ನೆಲ್ಲ ಹೆಡೆದ ತಾಯಿ।

ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆದವಳು।

ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು।

ಕಣ್ಣು ಕಾಣದ ಗಾವಿಲರು?

ಕುವರನಾದೊಡೆ ಬಂದ ಗುಣವೇನದರಿಂದ।

ಕುವರಿಯಾದೊಡೆ ಕುಂದೇನು?

ಸಂಚಿಯ ಹೊನ್ನಮ್ಮ. (ಕವಯಿತ್ರಿ)

೧)ವಿದ್ಯೆಗೆ ಸರಸ್ವತಿ;ಸಂಪತ್ತಿಗೆ ಲಕ್ಷ್ಮಿ;ಕೆಚ್ಚಿಗೆ ದುರ್ಗೆ;

ಎಲ್ಲರೂ ಹೆಣ್ಣೇ.

ಭೂ ಮಾತೆ ಹೆಣ್ಣು; ಪೃಕೃತಿಮಾತೆ ಹೆಣ್ಣು;

ಗಂಗಾ ಮಾತೆ ಹೆಣ್ಣು ;

೨)ಮನೆಯೇ ಮೊದಲ ಪಾಠ ಶಾಲೆ।

ಜನನಿ ತಾನೇ ಮೊದಲ ಗುರುವು।

ಜನನಿಯಿಂದ ಪಾಠ ಕಲಿತ ಜನರು ಧನ್ಯರು।

೩)ಹೆಣ್ಣನ್ನು ಗೌರವಿಸದವನು ಒಬ್ಬ ಒಳ್ಳೆಯ

ಮನುಷ್ಯ ಎನ್ನುವುದಕ್ಕೆ ಅರ್ಹನಲ್ಲ।

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s