ಗಣಪ.

ವಿಷಕಂಠ ಪುತ್ರ ಗಣಪ ಗರಿಕೆ ಪ್ರಿಯ.

ಶಿರವೊಂದು ತೆರ,ಶರೀರವೊಂದು ತೆರ;

ಹೀಗೆ ಅಪೂರ್ಣನಾಗಿದ್ದರೂ ಪರಿಪೂರ್ಣನಾಗಿ

ದ್ವಂದ್ವಗಳನ್ನು ಗೆದ್ದು ನಿಂತ ಈತ ಸಿದ್ಧಿ ವಿನಾಯಕ.

ಸಹಜ ವೈರಿಗಳೆಂದೇ ತಿಳಿಯಲಾಗಿರುವ ಇಲಿಯೂ

ಸರ್ಪವೂ ಈತನ ಸಾಮೀಪ್ಯದಲ್ಲಿ ಮಿತ್ರರಂತೆ ವರ್ತಿಸು

ತ್ತಿದ್ದಾರಲ್ಲ? ಈತ ಸಮನ್ವಯ ದೃಷ್ಟಿಯ ದೇವರು

ಎಂಬುದಕ್ಕೆ ಬೇರಾವ ಸಾಕ್ಷಿ ಬೇಕಿದೆ?

ಮೂಲಾಧಾರ ಚಕ್ರದಲ್ಲಿ ಕುಳಿತಿರುವ ಏಕ ಮಾತ್ರ

ದೇವರು ಈತ. ನಮ್ಮ ಪ್ರತಿಯೊಂದು ಚಲನವಲನಕ್ಕೂ

ಮೂಲ-ಮೂಲಾಧಾರ ಚಕ್ರ.ಗರ್ವವನ್ನೂ ಅಹಂಕಾರವನ್ನೂ

ಮುರಿಯಬೇಕು ಎಂಬುದೇ ಮುರಿದ ದಾಡೆಯ ಸಂದೇಶ.

ಗಣಪನ ವಾಹನ ಇಲಿ.ತಂದೆ ಮಹದೇವ ನಾಗಾಭರಣ.

ಹಾವಿಗೂ ಇಲಿಗೂ ವೈರ ಸಂಬಂಧ.ನಾಗಾಭರಣ ಬಂದಾಗ

ಗಣಪನ ವಾಹನ ಮೂಷಿಕ, ಒಡೆಯನನ್ನು ಕೆಡವಿ ಟಣ್ಣನೆ

ಜಿಗಿದೋಡ ಬಹುದು. ಹಾಗೆಯೇ ಈಶನೂ ವಿಷ್ಣುವಿನ ಬಳಿ ಹೋಗುವಂತಿಲ್ಲ.

ಗರುಡ ವಾಹನನನ್ನು ಕಂಡಾಗ ಈಶನ ಕಂಠಾ

ಭರಣ(ಹಾವು) ಜಾರಿ ಕೊಂಡು ಓಡ ಬಹುದು.

ಸಿಂಹವಾಹಿನಿ ಪಾರ್ವತಿ ಗಣಪನ ಬಳಿ ಬಂದಾಗಲೂ

ಆನೆಮೊಗದ ಗಣಪತಿಗೆ ಸಂಧಿಗ್ಧತೆ.ಏಕೆಂದರೆ ಸಿಂಹಕ್ಕೂ

ಆನೆಗೂ ಬದ್ಧ ಶತ್ರುತ್ವ.ಹಾಗೆಯೇ ಆನೆಮೊಗದ ಮನುಷ್ಯ

ದೇಹದ ಗಣೇಶನಿಗೆ ಆಧಾರ ಇಲಿ.ಈ Combination

ಒಂದು ಅಸಹಜ ಕಲ್ಪನೆ.

ಎಲ್ಲ ವೈರುಧ್ಯ ಗಳನ್ನು ಮೀರಿರುವುದರಿಂದಲೇ ದೇವತ್ವಕ್ಕೆ

ನಿಜವಾದ ಆಸ್ತಿತ್ವ ವಿರುವುದು.ಅಲ್ಲಿ ಪ್ರಕೃತಿ ಸಹಜ ವಿರೋಧಾ

ಭಾಸ ಗಳೆಲ್ಲ ಕರಗಿಹೋಗುತ್ತವೆ.

ಅಸಹಜ ಸಂಗತಿ ಭಕ್ತಿ ಭಾವದಲ್ಲಿ ಅತಿಮಾನುಷ ವಾಗುವುದು.

ಒಂದೊಂದು ಪ್ರಾಣಿಯೂ ಒಂದೊಂದು ಮನುಷ್ಯ ಗುಣದ

ಸಂಕೇತ.

ಇವೆಲ್ಲ ಭಾವನೆಗಳಿಗೆ ಸಂಬಂಧಿಸಿದ್ದು. ಮನುಷ್ಯ ತನ್ನ

ಅನುಭವದ ಅಳತೆಯ ಪರಿಧಿಯಲ್ಲಿ ದೇವರನ್ನು ಸೃಷ್ಟಿಸಿದ.

ಸುತ್ತಲಿನ ಪ್ರಕೃತಿಯಲ್ಲಿ ಏನೇನು ಕಂಡನೋ, ಅವೆಲ್ಲವನ್ನೂ

ತನ್ನ ದೇವರ ಕಲ್ಪನೆಗೂ ಬಳಸಿದ.ಅವೆಲ್ಲ ಅತಿಮಾನುಷ

ವಾಗಿರಬೇಕೆಂಬ ಕಾರಣಕ್ಕೆ ಕೆಲವು ವಿಶಿಷ್ಟ ಅಸಹಜ ಕಲ್ಪನೆ

ಗಳನ್ನು ಅಳವಡಿಸಿದ.ಇದಕ್ಕೊಂದು ಉತ್ತಮ ಉದಾಹರಣೆ -ಶ್ರೀ ಗಣೇಶ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s