ಕನ್ನಡ ಸೌರಭ.

ಸಾಹಿತ್ಯ:

ಸಾಹಿತ್ಯವೆಂದರೆ ಹಿಲಾಲು(ಪಂಜು).ಬದುಕಿನ ಸಮಗ್ರ ಆಯಾಮ

ಗಳನ್ನು ಪ್ರಜ್ವಲಿಸಿ ನೋಡುವ ಉಪಕರಣ. ಕಗ್ಗತ್ತಲು ಕವಿದಾಗ

ಬೆಳಕಿನ ಕಿರಣ ಹಾಯಿಸಿ ಪ್ರಕಾಶಗೊಳಿಸುವ ಸಾಧನ.

ಸಾಹಿತ್ಯ ಅಂತರಂಗದ ಸಂಸ್ಕಾರವನ್ನು ವೃದ್ಧಿಸುತ್ತದೆ.ಕೋಮು

ಸಾಮರಸ್ಯ ಸಾಹಿತ್ಯದಿಂದ ಸಾಧ್ಯ. ಸಾಹಿತ್ಯ ಬದುಕಿನ ಸೌಂದರ್ಯ

ವನ್ನು ದರ್ಶಿಸುತ್ತದೆ.ಏಕಾಂಗಿತನ ಕಳೆಯುತ್ತದೆ.ಒತ್ತಡದ ಬದುಕಿನಲ್ಲಿ

ಸಂಭ್ರಮದ ಮಿಂಚು ಹೊಳೆಯಿಸುತ್ತದೆ.

ಬರಹಗಾರ ಯಾವತ್ತೂ ಮನೋ ವಿಶ್ಲೇಷಣೆಗೆ ಅನುವು ಮಾಡಿ

ಕೊಡಬಲ್ಲಂಥಹ ಬರಹಗಳನ್ನು ರಚಿಸಬೇಕು. ನ್ಯೂನತೆಯ ಅರಿವನ್ನು

ಸಾಹಿತ್ಯ ಸೃಷ್ಟಿಸ ಬೇಕು. ಜಡತನದ ಬಲೆಯಿಂದ ಬಿಡಿಸುವ ಕೆಲಸ

ಕೂಡ ಸಾಹಿತ್ಯದಿಂದ ಆಗಬೇಕು. ಜೀವನದ ಸಮಸ್ಯೆಗಳನ್ನು ಎದುರಿಸಲು

ಸಾಹಿತ್ಯದಿಂದ ಸಾಧ್ಯ.ಒಳ್ಳೆಯ ಸಾಹಿತ್ಯಕ್ಕೆ ಯಾವಾಗಲೂ ಅಳಿವಿಲ್ಲ.

ಸಾಹಿತ್ಯ/ಕಾವ್ಯ ಹುಟ್ಟುವುದಕ್ಕೆ ಸಮಾಜದ ಆಗುಹೋಗುಗಳೇ ನೇರ

ಕಾರಣ.ಪ್ರಾಚೀನ ಕಾವ್ಯ ಪರಂಪರೆ ಹಾಗೂ ಆಧುನಿಕ ವಿಚಾರಧಾರೆ

ಒಂದಕ್ಕೊಂದು ಪೂರಕ. ಸಾಹಿತ್ಯ/ಕಾವ್ಯ ಅಸ್ತ್ರವಾಗಲಿ; ಮಾರಕಾಸ್ತ್ರ

ವಾಗದಿರಲಿ. ಸಂಗೀತ,ನೃತ್ಯ,ಶಿಲ್ಪವೇ ಮೊದಲಾದ ಪಂಚ ಲಲಿತ ಕಲೆ

ಗಳಲ್ಲಿ ಸಾಹಿತ್ಯವೂ ಒಂದು.ಉಳಿದ ಕಲೆಗಳಲ್ಲಿ ರಸಾನಂದವೇ ಮುಖ್ಯ.

ಸಾಹಿತ್ಯಕೃತಿಗಳ ಪಠಣ ಮತ್ತು ಶ್ರವಣಗಳಿಂದ ರಸಾನಂದದ ಜೊತೆಗೆ

ನಮ್ಮಲ್ಲಿ ವಿವಿಧ ಭಾವಗಳ ಸಂಚಾರವಾಗಿ ಆತ್ಮ ಸಂಸ್ಕಾರ ಸಿದ್ಧಿಸುತ್ತದೆ.

ಶಿಕ್ಷಣ:

ಶಿಕ್ಷಣ ಎಂದರೆ ವಿದ್ಯಾರ್ಥಿಗಳಲ್ಲಿ ಮಾಹಿತಿ ತುಂಬುವುದಷ್ಟೇ ಅಲ್ಲ.

ಬದಲಾಗಿ ವಿದ್ಯಾರ್ಥಿಗಳಲ್ಲಿ ಚಾರಿತ್ರ್ಯ ನಿರ್ಮಾಣ, ಮನೋಬಲ

ವೃದ್ಧಿ,ಪ್ರಕ್ರಿಯೆಯಾಗಿದೆ.-ಸ್ವಾಮಿ ವಿವೇಕಾನಂದ.ದೇಶವೆಂಬ ಸೌಧಕ್ಕೆ

ಶಿಕ್ಷಣವೇ ಅಡಿಪಾಯ.

ಇಂದಿನ ಶಿಕ್ಷಣ ವಿಧಾನದಲ್ಲಿ ವಿದ್ಯಾರ್ಥಿಯೊಳಗೆ ತುರುಕುವುದೇ ಹೆಚ್ಚು

ಹೊರತು, ವಿದ್ಯಾರ್ಥಿಯೊಳಗಿನ ಅಂತರ್ಗತ ಸಾಮರ್ಥ್ಯಗಳ ಪ್ರಕಟಣೆಗೆ

ಅವಕಾಶವಿಲ್ಲ.ಇದು ಮಕ್ಕಳ ಸಹಜ ವ್ಯಕ್ತಿತ್ವದ ವಿಕಾಸಕ್ಕೆ ತಡೆಯೊಡ್ದುತ್ತಿದೆ.

ಅಂಕಗಳ ಅಬ್ಬರದ ಮುಂದೆ ಅರಿವಿನ ಗುಣ ಮಟ್ಟ ಮರೆಯಾಗಿದೆ.

ಪ್ರದರ್ಶನವೇ ಪ್ರಧಾನವಾಗಿ ಅಂತಃ ಶಕ್ತಿ ಸೊರಗುತ್ತಿದೆ.

ನಮ್ಮ ಶಿಕ್ಷಣ ಪದವೀಧರರನ್ನು ಮಾತ್ರವಲ್ಲ ಪ್ರಾಮಾಣಿಕರನ್ನೂ ಸೃಷ್ಟಿಸುವಂತಾಗಬೇಕು.

ಶಿಕ್ಷಣ ಎಂದರೆ ಇಂದ್ರಿಯ ಸಂಸ್ಕಾರ;ಸುಪ್ತ ಪ್ರತಿಭೆಯ ವಿಕಸನ.

Education is the manifestation of the perfection
already in man.-Swami Vivekananda.
The end product of education should be a free creative man,
who can battle against historical circumstances and adversities
of nature.-S.Radhakrishnan.
ಮೂಲ-ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s