ಕನ್ನಡ ಸೌರಭ.

ಲೋಕೋಕ್ತಿ.

1.ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಕಾಗದದ ಹುಲಿ.

2.ತೋಳ್ಬಲ, ಬಾಯಿಬಲಕ್ಕಿಂತ ಹಾಸ್ಯದ ಬಲ ಉತ್ತಮ.

3.ಬಲವೇ ಜೀವನ;ನಿಶ್ಶಕ್ತಿಯೇ ಸಾವು.

4.ಹೇಳುವುದು ಶಾಸ್ತ್ರ; ಇಕ್ಕುವುದು ಗಾಳ;

ಎಂದು ಬದಲಾಗುವುದು ಈ ದಾಳ?

5.ಹೇಳುವುದು ರಾಮ ನಾಮ;ಹಾಕುವುದು ಮೂರು ನಾಮ.

6.ಸತ್ತವನಿಗೆ ಹೂವಿನ ಹಾರದಂತೆ, ಕ್ರಿಯಾಹೀನನಿಗೆ

ವಿದ್ಯೆ ನಿಜಕ್ಕೂ ವ್ಯರ್ಥ.

7.ತಪ್ಪು ಮಾಡಿದವರಿಗೆ ಕೊಪ್ಪಕ್ಕೆ ಹಾಕು.

8.ನರಿ ಕೂಗು ಗಗನ ಮುಟ್ಟೀತೇ ?

9.ಬಾಳು ನೀಡಲಾರದವನು ಬ್ರಹ್ಮನಾದರೇನು?

10.ಮೂರ್ಖರು ವಿದ್ವಾಂಸರನ್ನು ದ್ವೇಷಿಸುತ್ತಾರೆ.

11.ಬಂಡವಾಳ ಮೂರು ಕಾಸು;ಬಡಿವಾರ ಆರು ಕಾಸು.

12.ನಾಡೆಲ್ಲ ಬಿಟ್ಟರೂ ಸುಡುಗಾಡು ಬಿಡದು.

13.ಆತ್ಮ ಬಲವೇ ಬಲವು;ಸರ್ವ ಬಲ ನಿರ್ಬಲವು.

14.ಆರಿ ಹೋಗುವ ದೀಪಕ್ಕೆ ಕಾಂತಿ ಹೆಚ್ಚು.

15.ಹೊರಗೆ ಭಕ್ತಿ , ಒಳಗೆ ಕತ್ತಿ .

16.ಉತ್ತಲ್ಲದೆ ಮಣ್ಣಲ್ಲ ;ಹೆತ್ತಲ್ಲದೆ ಹೆಣ್ಣಲ್ಲ.

17.ನಿಧಿ ಇದ್ದರೂ ನಿಧಾನ ಇರಬೇಕು.

ನಿಮಗೆ ಗೊತ್ತೇ?

೧.ಎದೆ ಬಡಿತವನ್ನು ತಿಳಿಯಲುಪಯೋಗಿಸುವ Stethoscope ನ್ನು

ಕ್ರಿ.ಶ .೧೮೧೬ರಲ್ಲಿ ಲೆನ್ನೆಕ್ (French physician Rene

Theophile Hyacinthe Laennec) ಎಂಬುವವರು ಆವಿಷ್ಕರಿಸಿದರು.ಗ್ರೀಕ್

ಭಾಷೆಯಲ್ಲಿ stethos ಎಂಬ ಪದಕ್ಕೆ ”ಎದೆ” ಎಂಬ ಅರ್ಥ ಇದೆ ಹಾಗೂ

scope ಎಂಬ ಪದಕ್ಕೆ ”ಪರೀಕ್ಷೆಮಾಡು” ಎಂಬ ಅರ್ಥವಿದೆ.

೨.ಪಕ್ಷಿಗಳ ಆಯುಷ್ಯ-

a .ಕಾಗೆ-೮೫ವರ್ಷ. b .ರಾಜಹಂಸ/ರಣ ಹದ್ದು-೧೦೦ವರ್ಷ.

c .ನವಿಲು-೨೫ ವರ್ಷ.d .ಪಾರಿವಾಳ -೧೬ವರ್ಷ.

e .ಬಾತುಕೋಳಿ /ಗಿಳಿ -೫೦ವರ್ಷ .f .ಗುಬ್ಬಿ/ಗರುಡ-೪೫ ವರ್ಷ.

g .ಗೂಬೆ -೫ ವರ್ಷ.

೩.ಕಣಿ ಎಂದರೆ ಕಾಣುವ ವಸ್ತು.

ಅಕ್ಕಿ-ಫಲವಂತಿಕೆಯ ಸಂಕೇತ.

ತೆಂಗಿನಕಾಯಿ-ಸಮೃದ್ಧಿಯ ಸೂಚಕ.

ವೀಳ್ಯದೆಲೆ,ಹೂಗಳು ಮಂಗಳ ವಸ್ತುಗಳು.

ಚಿನ್ನ ಸಂಪತ್ತಿನ ಚಿಹ್ನೆ.

ದೀಪ ದರ್ಶನದಿಂದ ಜೀವನದಲ್ಲಿ ಆನಂದದ ಜ್ಯೋತಿ

ಬೆಳಗುತ್ತದೆ.

ಕನ್ನಡಿಯಿಂದ ಆತ್ಮ ದರ್ಶನವಾಗುತ್ತದೆ.ಆತ್ಮ ಶೋಧನೆ,

ತಿದ್ದಿಕೊಳ್ಳುವ ಪ್ರವೃತ್ತಿ ಬೆಳೆಯುತ್ತದೆ.

೪.ಉಷಃ ಪಾನ -ಆಯುಷ್ಕಾರಕವಾದ ಸರಳ ಸುಲಭ ರಸಾಯನ.

ಸೂರ್ಯೋದಯದ ಮೊದಲು ಮುಕ್ಕಾಲು ಲೀಟರು ನೀರು

ಕುಡಿಯುವುದು -ಉಷಃ ಪಾನ.

೫.Bible ಎಂಬ ಪದ ಮೂಲತಃ ಪುಸ್ತಕ ಎಂಬ ಅರ್ಥ ಬರುವ

ಗ್ರೀಕ್ ಪದದಿಂದ ಉಗಮವಾಯಿತು.

Hebrew Bible ನಲ್ಲಿ ೨೪ ಪುಸ್ತಕಗಳಿವೆ.Protestant Bible ನಲ್ಲಿ

೬೬ ಮತ್ತು Roman Catholic Bible ನಲ್ಲಿ ೭೩ ಪುಸ್ತಕಗಳಿವೆ.

ನಾವು ಪಾಲಿಸ ಬೇಕಾದ ಮೂರು ಅಂಶಗಳು-

೧.ಇವರಿಗೆ ಚೇಷ್ಟೆ ಮಾಡ ಬೇಡ-ಹುಚ್ಚ,ಮುದುಕ,ಮೂರ್ಖ.

೨.ಇವನ್ನು ನಂಬ ಬೇಡ-ಕಪಟತನ,ವಿಷದ ಹಾವು,ರೂಪಸಿ.

೩.ಇವನ್ನು ಅಂಕೆಯಲ್ಲಿರಿಸು-ಇಂದ್ರಿಯ,ಮನಸ್ಸು,ಕ್ರೋಧ.

೪.ಇವನ್ನು ಬೆಳೆಸಿ ಕೋ-ತೃಪ್ತಿ,ಸಹಾನುಭೂತಿ,ಪ್ರಸನ್ನತೆ.

೫.ಇವನ್ನು ಮೆಚ್ಚು-ಬುದ್ಧಿ,ಸೌಂದರ್ಯ,ಸಂಗೀತ.

೬.ಇವನ್ನು ಗೌರವಿಸು-ಪ್ರಾಯ, ಧರ್ಮ,ಕಾನೂನು.

೭.ಇವು ಮೂವರನ್ನು ಆದರದಿಂದ ಕಾಣು-ತಂದೆ, ತಾಯಿ, ಗುರು.

೮.ಇವನ್ನು ನಿಯಮದಿಂದ ಮಾಡು-ಭೋಜನ,ವ್ಯಾಯಾಮ,ಭಜನೆ.

೯.ಇವನ್ನು ಪ್ರೀತಿಸು-ಸತ್ಯ,ಪ್ರಾಮಾಣಿಕತೆ,ಪಾವಿತ್ರ್ಯ.

೧೦.ಇವನ್ನು ಪಾಲಿಸು-ಗೆಳೆತನ,ಪ್ರೇಮ,ವಚನ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s