ಕನ್ನಡ ಸೌರಭ .

ಅಧ್ಯಾತ್ಮ ಚಿಂತನ.

1)ಜಗದೀಶನಾದ ಭಗವಂತನ ನಾಮ,ರೂಪ,ಮಹಿಮೆಯನ್ನು

Think ,Thank and Ink ಮಾಡುವುದೇ ಮನುಜರೆಲ್ಲರ

ಆದ್ಯ ಕರ್ತವ್ಯ.

2)ಜಪ =ಜ (ಗದಗಲವಿರುವ) ಪ(ರಿಮಳ ಬೀರೋ)–ಆಪ್ತ

ವಿನಂತಿ:”ನನ್ನನಳಿಸು, ನಿನ್ನ ಮೆರೆಸು ;

ಬಂದು ನೆಲೆಸು ಹೃದಯ ಪದ್ಮಾಸನದಲಿ”

3)ವಿವಿಧ ಹಣ್ಣುಗಳ ಆಕಾರ ರುಚಿ ಮತ್ತು ಬಣ್ಣದಲ್ಲಿ ವ್ಯತ್ಯಾಸವಿದೆ.

ಆದರೆ ಒಳಗಿನ ಸತ್ತ್ವ ಒಂದೇ. ಅಂತೆಯೇ ವಿವಿಧ ಧರ್ಮಗಳು

ಪುಷ್ಟೀಕರಿಸುವ ಮೌಲ್ಯಗಳು ಹಾಗೂ ತತ್ತ್ವಗಳು ಒಂದೇ.

ಧರ್ಮಗಳು ಹಣ್ಣಿನ ಸಿಪ್ಪೆಯಂತಿದ್ದರೆ ಅವುಗಳು ಪ್ರತಿಪಾದಿಸುವ

ಮಾನವೀಯ ಮೌಲ್ಯಗಳು ಒಳಗಣ ಸತ್ತ್ವವಿದ್ದಂತೆ.

–Prof .K .P .Puthuraya ,Bangalore .

ಗಾದೆಗಳು.

ದಾನಕ್ಕಿಂತ ನಿಧಾನ ದೊಡ್ಡದು.

ನಿಜ ನುಡಿದರೆ ನಿಷ್ಠೂರ.

ಎಲ್ಲಾ ನುಡಿ ಬೆಳಕಲ್ಲ; ಸತ್ಯದ ನುಡಿಯೇ ಬೆಳಕು.

ನಯಶಾಲಿ ಆದವನು ಜಯಶಾಲಿ ಆದಾನು.

ನಿಮಗೆ ಗೊತ್ತೇ?

ಸ.ಸ.=ಸಮುದ್ರ ಸಸ್ಯ.

ಧ.ಧಾ.= ಧನ, ಧಾನ್ಯ.

ನಾ.ನು.=ನಾಡು ನುಡಿ.

ದು.ದೂ.=ದುರಾಲೋಚನೆ , ದೂರಾಲೋಚನೆ .

-ವಾಣಿ.

ಭಾವಗೀತೆ.

ದೀಪವೂ ನಿನ್ನದೇ , ಗಾಳಿಯೂ ನಿನ್ನದೇ;

ಆರದಿರಲಿ ಬೆಳಕು ;

ಕಡಲೂ ನಿನ್ನದೇ, ಹಡಗೂ ನಿನ್ನದೇ;

ಮುಳುಗದಿರಲಿ ಬದುಕು;

ಬೆಟ್ಟವೂ ನಿನ್ನದೇ, ಬಯಲೂ ನಿನ್ನದೇ;

ಹಬ್ಬಿ ನಗಲಿ ಪ್ರೀತಿ;

ನೆಳಲೋ, ಬಿಸಿಲೋ ಎಲ್ಲವೂ ನಿನ್ನದೇ;

ಇರಲಿ ಏಕ ರೀತಿ;

ಆಗೊಂದು ಸಿಡಿಲು, ಈಗೊಂದು ಮುಗಿಲು

ನಿನಗೆ ಅಲಂಕಾರ;

ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು

ನಿನಗೆ ನಮಸ್ಕಾರ;

ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ ;

ನಿನ್ನ ಪ್ರತಿಧ್ವನಿ ;

ಆ ಮಹಾ ಕಾವ್ಯ ಈ ಭಾವಗೀತೆ;

ನಿನ್ನ ಪಾದ ಧ್ವನಿ.

-K .S .Narasimha Swami .

ಬಾಳಿನ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸುವ

ಸಂಕಲ್ಪದೊಂದಿಗೆ ಹೊಸ ವರ್ಷವನ್ನು ಹರ್ಷದಿಂದ

ಸ್ವಾಗತಿಸೋಣ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s