ಕನ್ನಡ ಸೌರಭ.

ಕುಲು ದಶೇರಾ.

ಹಿಮಾಚಲ ಪ್ರದೇಶದ ಕುಲು ಕಣಿವೆಯ ಈ ಹಬ್ಬ ವಿಜಯ

ದಶಮಿಯಂದು ಆರಂಭವಾಗಿ ಏಳು ದಿನಗಳ ಕಾಲ ನಡೆಯು

ತ್ತದೆ. ಶ್ರೀ ರಾಮ ಲಂಕೆಯಲ್ಲಿ ರಾವಣನನ್ನು ಸೋಲಿಸಿದ ದಿನ

ವನ್ನು ಉತ್ತರ ಭಾರತದಲ್ಲಿ ವಿಜಯದಶಮಿಯ ಹಬ್ಬವಾಗಿ

ಆಚರಿಸುತ್ತಾರೆ.ಕುಲು ಕಣಿವೆಯನ್ನು ಆಳುತ್ತಿದ್ದ ರಾಜ ಜಗತ್

ಸಿಂಗ್ ಕ್ರಿ.ಶ.1637ರಲ್ಲಿ ತನ್ನ ಸಿಂಹಾಸನದ ಮೇಲೆ ರಘು

ನಾಥನ ಮೂರ್ತಿ ಇರಿಸಿ ಪಟ್ಟಾಭಿಷೇಕ ಮಾಡಿದ್ದ. ಅಂದಿನಿಂದ

ಇಲ್ಲಿ ದಶೇರಾ ಹಬ್ಬವನ್ನು ರಘುನಾಥನ ಉತ್ಸವವಾಗಿ ಆಚರಿಸು

ತ್ತಾರೆ.

ಕುಲು ಕಣಿವೆಗೆ ದೇವಭೂಮಿ ಎಂದು ಹೆಸರಿದೆ. ಪ್ರತಿ

ಯೊಂದು ಹಳ್ಳಿಯಲ್ಲೂ ಒಂದೊಂದು ದೇವತೆಯಂತೆ

ಇಲ್ಲಿ ಸುಮಾರು 250 ದೇವತೆಗಳಿದ್ದಾರೆ. ದಶೇರಾ

ಮೆರವಣಿಗೆಯಲ್ಲಿ ಎಲ್ಲ ಹಳ್ಳಿಗರು ತಮ್ಮ ದೇವತೆ

ಗಳನ್ನು ರಘುನಾಥನ ತೇರಿನೊಡನೆ ಒಯ್ಯುತ್ತಾರೆ.

ಒಂದು ವಾರ ಕಾಲ ಕುಲು ಕಣಿವೆಯಿಡೀ ಜಾತ್ರೆ,

ಮೇಲಾಗಳ ಹಬ್ಬ ನಡೆಯುತ್ತದೆ. ಹಳ್ಳಿಗರ ವರ್ಣ

ರಂಜಿತ ಉಡುಗೆಗಳು ಮತ್ತು ನೃತ್ಯ ಸಂಗೀತ ಗಳು

ಆಕರ್ಷಕವಾಗಿರುತ್ತವೆ.

ಉತ್ತರಭಾರತದ ಬೇರೆಡೆಗಳಲ್ಲಿ ದಸರೆಯಂದು

ರಾವಣ, ಮೇಘನಾದ, ಕುಂಭಕರ್ಣರ ಬೃಹತ್

ಪ್ರತಿಕೃತಿ ಗಳನ್ನು ಸುಡಲಾಗುತ್ತದೆ. ಆದರೆ ಕುಲು

ಕಣಿವೆಯಲ್ಲಿ ಈ ಸಂಪ್ರದಾಯ ಇಲ್ಲ.

ಮೂಲ:ತುಂತುರು ( October -2012)

ನಿಮಗೆ ಗೊತ್ತೆ ?

1)ಚಾಮರಸ ರಚಿಸಿದ ರೌದ್ರ ರಸ ಪೂರ್ಣ ಕಾವ್ಯ

”ಮಹಾಭಾರತ”ವನ್ನು ಹಿಂಡಿದರೆ ರಕ್ತವೇ ಧಾರೆ

ಯಾಗಿ ಸುರಿಯುತ್ತಿತ್ತಂತೆ. ಚಾಮರಸನ ತಂಗಿ,

ಗದುಗಿನ ನಾರ್ಣಪ್ಪನ ಹೆಂಡತಿ, ಗಂಡನನ್ನು

ಮೆಚ್ಚಿಸಲು ಚಾಮರಸನ ಕಾವ್ಯವನ್ನುಸುಟ್ಟು

ಹಾಕಿದಾಗ ಬೇಸರಗೊಂಡ ಚಾಮರಸ ವೀರಶೈವ

ಮತಾವಲಂಬಿಯಾಗಿ ”ಪ್ರಭು ಲಿಂಗ ಲೀಲೆ ”ಯನ್ನು

ಬರೆದನಂತೆ.

–ಧರಣಿ ದೇವಿ ಮಾಲಗತ್ತಿ.

2)ನಿಗಮ ಎಂದರೆ ವೇದ ಎಂದರ್ಥ.

3)ಶ್ರೀ ಎಂದರೆ ಲಕ್ಷ್ಮಿ. ಸಂಪತ್ತು ಉಳ್ಳವಳು ಶ್ರೀಮತಿ.

”ಮತಿ”ಯ ಸಂಪತ್ತು ಉಳ್ಳವರೆಲ್ಲ ಶ್ರೀಮತಿಯರೇ .

4)ಷಷ್ಠಿ ತಿಥಿಯ ಅಧಿ ದೇವತೆ ಸ್ಕಂದ. ಪಂಚಮಿಯು

ನಾಗಗಳ ತಿಥಿ.ನಾಗ, ಸುಬ್ರಹ್ಮಣ್ಯ,ಕಾರ್ತಿಕೇಯರು

ಅಭೇಧ್ಯರು.

ಉತ್ತರ ಭಾರತದಲ್ಲಿ ಸ್ಕಂದ,ತಮಿಳ್ನಾಡಿನಲ್ಲಿ ಮುರುಗ,

ಆರ್ಮುಗ, ಮಯೂರ ವಾಹನ, ರುದ್ರಸೂನು,ಸುರ

ಸೈನ್ಯನಾಥ; ಇಂದ್ರಪುತ್ರಿ ಹಾಗೂ ವಲ್ಲಿ (ವಡ್ಡರ

ಜನಾಂಗದ ಶಿವಮುನಿಯ ಮಗಳು)-ಈತನ ಪತ್ನಿಯರು.

ಸರ್ಪಲಿಂಗ ಈತನ ಲಾಂಛನ.

5)ಈಜಿಪ್ಟಿನ ಮಮ್ಮಿ ಗಳನ್ನು ಇಂದಿಗೂ ಕೆಡದಂತೆ

ಇಟ್ಟಿರುವ ರಹಸ್ಯಗಳ ಹಿಂದೆ ಲುಬಾನು ಕೆಲಸ

ಮಾಡಿದೆ ಎಂದು ಅರಬ್ಬಿಗಳು ನಂಬುತ್ತಾರೆ.

ಕೆಡದಂತೆ ಇಡಲ್ಪಟ್ಟ ಮಮ್ಮಿಗಳ ಕೆಳಗೆ ಲುಬಾನಿನ

(ನಮ್ಮ ಲೋಬಾನ,ಧೂಪ )ಹಾಸು ಇದೆಯಂತೆ.

ನಗೆ ಬುಗ್ಗೆ.

ತವರು ಮನೆಗೆ ಹೊರಟ ಹೆಂಡತಿ ಅಡುಗೆ ಮಾಡುವ

ವಿಧಾನವನ್ನೆಲ್ಲ ಗಂಡನಿಗೆ ಹೇಳಿಕೊಟ್ಟಳು.ಆಕೆ ಹೋದ

ನಂತರ ಗಂಡ ತಾನೇ ಅಡುಗೆ ಮಾಡಿದ.ಕೊನೆಗೂ

ಒಂದು doubt ಉಳಿಯಿತು.ತಕ್ಷಣ ಪತ್ನಿಗೆ phone

ಮಾಡಿ ಕೇಳಿದ,”ಪದಾರ್ಥಕ್ಕೆ ತಲೆ ಕೂದಲು ಹಾಕುವುದು

ಯಾವಾಗ?”

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s