ಕನ್ನಡ ಸೌರಭ.

೧)ಭಾವ ಸೌರಭ.
ಸಿರಿವಂತನಾದರೂ ಕನ್ನಡನಾಡಲ್ಲೇ ಮೆರೆವೆ

ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ

ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ

ಶೃಂಗೇರಿ ಶಾರದೆಯ ಮಡಿಲಲ್ಲಿ ನಲಿವೆ

ವೀರ ಖಡುಗವ ಝಳಪಿಸುವ ವೀರ ನಾನಾದೊಡೆ

ಚಾಮುಂಡಾoಬೆಯ ಕರದಲ್ಲಿ ಹೊಳೆವೆ

ಶರಣಗೆ ವಂದಿಪ ಶರಣೆ ನಾನಾದೊಡೆ

ವಚನವೇ ಬದುಕಿನ ಮಂತ್ರ ವೆನುವೆ

ವೀರನಿಗೆ ವಂದಿಪ ಶೂರ ನಾನಾದರೆ

ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ

ದಾಸರಿಗೆ ವಂದಿಪ ಅಭಿಮಾನಿಯಾದೊಡೆ

ಕನ್ನಡ ಸಾಹಿತ್ಯ ನನ್ನಾಸೆ ಎನುವೆ

ಪುಣ್ಯ ನದಿಗಳಲಿ ಮೀಯುವೆನಾದೊಡೆ

ಕಾವೇರಿ ತುಂಗೆಯರ ಮಡಿಲಲ್ಲಿ ಮೀಯುವೆ

ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ

ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ.

-ಚಿತ್ರ ಗೀತೆ (ಕನ್ನಡ ಕುವರ)

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ

ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಹೂವಾದರೆ ನಾನು ಮೂಕಾಂಬೆಯ ಕಾಲಡಿ ಇರುವೆ

ಹುಲ್ಲಾದರೆ ನಾನು ಆಗುಂಬೆಯ ತಳದಲಿ ನಲಿವೆ

ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ

ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೆರೆವೆ

ಮೊಗವಾದರೆ ನಾನು ಪಂಪನ ಪುಟದಲಿ ಮೆರೆವೆ

ಧ್ವನಿಯಾದರೆ ನಾನು ಕೋಗಿಲೆ ದನಿಯಾಗಿರುವೆ

ನುಡಿಯಾದರೆ ನಾನು ಸಿರಿಗನ್ನಡದ ನುಡಿಯಾಗಿರುವೆ

ನೆನಪಾದರೆ ನಾನು ಹಂಪೆಯ ಚರಿತೆಯ ಮೆರೆವೆ

ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ

ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ

ಸ್ವರವಾದರೆ ನಾನು ದಾಸರ ಕಂಠದಿ ಮೆರೆವೆ

ಖಡ್ಗವಾದರೆ ನಾನು ಚನ್ನಮ್ಮನ ಕರದಲಿ ಮೆರೆವೆ

ಮರವಾದರೆ ನಾನು ಓಬವ್ವನ ಒನಕೆಯ ಮೆರೆವೆ

ಏಳೇಳು ಜನುಮದಲೂ ಕನ್ನಡದ ಕುಲವಾಗಿರುವೆ

ಮುದ್ದು ಮುದ್ದು ಕಂದ ಕನ್ನಡದ ಕಂದ

ತವರಿಗೆ ಇಂದು ಕೀರ್ತಿಯ ತಂದ

ಸಿರಿಗನ್ನಡಂ ಗೆಲ್ಗೆ.

ಚಿತ್ರ:”ಸಹ್ಯಾದ್ರಿಯ ಸಿಂಹ ”(ಹಾಡಿದವರು-S.P.Bala subrahmanyam)

೨)ಹಾಡು ಹಳೆಯದಾದರೇನು? ಭಾವ ನವ ನವೀನ

ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಯಾನ.

ಹಳೆಯ ಹಾಡು ಹಾಡು ಮತ್ತೆ , ಅದನೆ ಕೇಳಿ ತಣಿಯುವೆ

ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ

ಹಮ್ಮು, ಬಿಮ್ಮು ಒಂದೂ ಇಲ್ಲ ; ಹಾಡು ಹೃದಯ ತೆರೆದಿದೆ

ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ.

-ಭಾವಗೀತೆ.(G.S.Shivarudrappa)

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s