ಕನ್ನಡ ಸೌರಭ.

ಶಾಸ್ತ್ರದಲ್ಲಿ ಆಷಾಢ ಮಾಸ ವನ್ನು ಅಶುಭ ಮಾಸ ಎಂದು

ಹೇಳಿಲ್ಲ. ಆಷಾಢ ದಲ್ಲಿ ಮಳೆ ಗಾಳಿ ಹೆಚ್ಚು; ಹೊಲ, ಗದ್ದೆ ಗಳಲ್ಲಿ

ವಿಪರೀತ ಕೆಲಸ ಕಾರ್ಯಗಳಿದ್ದು ಶುಭ ಕಾರ್ಯಗಳಿಗೆ

ಸಮಯಾನುಕೂಲವಿಲ್ಲದ್ದರಿಂದ ಒಳ್ಳೆಯ ಕೆಲಸಗಳನ್ನು ಮಾಡಲು

ಜನ ಹಿಂದೇಟು ಹಾಕುತ್ತಾರೆ. ಹೊಲ, ಗದ್ದೆ ಗಳಲ್ಲಿ ಮತ್ತು ಮನೆಯಲ್ಲಿ

ಹೆಣ್ಣು ಮಕ್ಕಳಿಗೆ ಹೆಚ್ಚು ಕೆಲಸದ ಒತ್ತಡವಿರುವುದರಿಂದ ಅತ್ತೆ ಸೊಸೆಯರ

ನಡುವೆ ವೈ ಮನಸ್ಸು ಉಂಟಾಗಬಹುದು ಎಂಬ ಕಾರಣದಿಂದ ಆಷಾಢ

ಮಾಸದಲ್ಲಿ ಒಂದೇ ಕಡೆ ಅತ್ತೆ -ಸೊಸೆ ಕೂಡಿ ಇರಲು ನಿಷೇಧವಿದೆ.

ಆಷಾಢ ಮಾಸದ ವೈಶಿಷ್ಟ್ಯ:

ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿದ್ದು ಈ ಮಾಸದಲ್ಲೇ.

ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದದ್ದು ಈ ಮಾಸದಲ್ಲೇ.

ಅಮರನಾಥದಲ್ಲಿ ಹಿಮಲಿಂಗ ದರ್ಶನ ಪ್ರಾರಂಭ ;

ಗುರು ಪೂರ್ಣಿಮೆ -ಆಷಾಢ ಶುಕ್ಲ ಹುಣ್ಣಿಮೆಯಂದು.

ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಸುಮಂಗಲಿಯರು

ಜ್ಯೋತಿರ್ಭೀಮೇಶ್ವರ ವ್ರತವನ್ನು ಆಷಾಢ ಕೃಷ್ಣ(ದೀವಿಗೆ)

ಅಮಾವಾಸ್ಯೆಯಂದು ಆಚರಿಸುತ್ತಾರೆ.

ಆಷಾಢದ ಶುಕ್ರವಾರಗಳಲ್ಲಿ ಮಹಿಳೆಯರು ಮನೆ ಮುಂದೆ ದೀಪ ಹಚ್ಚಿ

ಲಕ್ಷ್ಮೀ ಪೂಜೆ ಮಾಡುತ್ತಾರೆ.

ಆಷಾಢ ಶುಕ್ಲ ಪಂಚಮಿಯಂದು ಅಮೃತ ಲಕ್ಷ್ಮೀ ವ್ರತ.

ಮೈಸೂರು ಚಾಮುಂಡೇಶ್ವರಿ ಜನ್ಮದಿನ ಆಷಾಢ ಮಾಸದಲ್ಲಿ ಬರುತ್ತದೆ.

ಆಷಾಢ ಶುಕ್ಲ ಏಕಾದಶಿಯಂದು ಪ್ರಥಮೈಕಾದಶಿ ಹಾಗೂ ತಪ್ತ ಮುದ್ರಾ

ಧಾರಣ.

ಲೇಖಕರು:ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ಪುರಿ ಜಗನ್ನಾಥನ ರಥ ಯಾತ್ರೆ ಆಷಾಢ ಶುಕ್ಲ ಬಿದಿಗೆಯಿಂದ

ಪ್ರಾರಂಭವಾಗಿ ಒಂಭತ್ತು ದಿನಗಳ ಕಾಲ ನಡೆಯುತ್ತದೆ.

ಶ್ರೀ ಮಂದಿರ ನಿವಾಸದಿಂದ ಗುಂಡಿಚಾ ದೇವಾಲಯಕ್ಕೆ

ಸೋದರ ಬಲಭದ್ರ , ಸೋದರಿ ಸುಭದ್ರಾ ಸಮೇತ

ವಾರ್ಷಿಕ ವಿಶ್ರಾಂತಿಗಾಗಿ ಜಗನ್ನಾಥನ ಪಯಣ. ದೇವರು

ಸ್ಥಿರ ಸ್ಥಿತಿಯಿಂದ ಚೈತನ್ಯ ಶಕ್ತಿಯಾಗಿ ಚಲಿಸ ತೊಡಗುತ್ತಾನೆ.

ಮೂರೂ ದೇವರ ವಿಗ್ರಹಗಳು ಅಪೂರ್ಣವೆಂಬಂತೆ ಕೆತ್ತಲಾಗಿದೆ.

ದೇವರ ಪರಿಪೂರ್ಣ ಚಿತ್ರ ಯಾರ ಊಹೆಗೂ ನಿಲುಕದ್ದು ಎಂಬುದನ್ನು

ಇದು ಸೂಚಿಸುತ್ತದೆ. ಅಪೂರ್ಣತೆಯಿಂದಲೇ ಎಲ್ಲವನ್ನೂ ಗ್ರಹಿಸಲು

ಸಾಧ್ಯ ಎಂಬ ಸಂದೇಶವನ್ನು ಶ್ರೀ ಕೃಷ್ಣ ಗೀತೆಯಲ್ಲಿ ಅರ್ಜುನನಿಗೆ

ಉಪದೇಶಿಸುತ್ತಾನೆ.

 

ಸೂಕ್ತಿ ಸೌರಭ :

”ಮೃದು ವಚನವೇ ಸಕಲ ಜಪಂಗಳಯ್ಯಾ,ತಪಂಗಳಯ್ಯಾ”

-ಬಸವಣ್ಣ.

ಮನುಕುಲದ ಸಂಬಂಧಗಳು ನೆಲೆ ನಿಂತಿರುವುದು ನಂಬಿಕೆ, ಪ್ರೀತಿ,

ಹೊಂದಾಣಿಕೆ ಮೇಲೆ.

ಶ್ರೀ ದೇವಿ, ಲಿಂಬೆಕಲ್ಲು.

ಮನುಷ್ಯನಲ್ಲಿ ಅಭಿಮಾನವಿರ ಬೇಕು. ಆದರೆ ಅದು ಜೀವನದ

ವಿಕಾಸಕ್ಕೆ ಕಾರಣವಾಗಬೇಕೇ ಹೊರತು ವಿನಾಶಕ್ಕೆ ಕಾರಣವಾಗ

ಬಾರದು. ವಿನಾಶಕ್ಕೆ ಕಾರಣವಾಗುವ ಅಭಿಮಾನವೇ ದುರಭಿಮಾನ.

ವಿಕಾಸಕ್ಕೆ ಕಾರಣವಾಗುವ ಅಭಿಮಾನವೇ ಸದಭಿಮಾನ.

-ಡಾ.ಶ್ರದ್ಧಾನಂದ ಶ್ರೀ.

ನಾಣ್ಣುಡಿ-

”ಅಮ್ಮ” ಎನ್ನುವುದು ಸತ್ಯ; ”ಅಪ್ಪ” ಎಂಬುದು ನಂಬಿಕೆ.

ಗಾದೆ ಮಾತು.

ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ.

ಅಜ್ಜಿ ನೂತದ್ದು ಮೊಮ್ಮಗನ ಉಡಿದಾರಕ್ಕೆ ಸಾಲದು.

ಉಂಡಿಯಾ ಗುಂಡ ಅಂದರೆ ಮುಂಡಾಸು ಮೂವತ್ತು ಮೊಳ ಅಂದ.

ಕುಟ್ಟಿ ಕುಂದಾಪುರಕ್ಕೆ ಹೋದ ಹಾಗೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು.

ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧು ಇಲ್ಲ.

ಅಡಿಗೆ ಬಿದ್ದರೂ ಮೂಗು ಮೇಲೆ.

ಕಾಸಿದ್ರೆ ಕೈಲಾಸ.

ದೇವರ ಭಯವೇ ಜ್ಞಾನದ ಆರಂಭ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s