ಕನ್ನಡ ಸೌರಭ.

ಮೊಗವಾಡ.
ಇರಲಿ  ಬಿಡು ನಿನ್ನ ಅನಿಸಿಕೆಗಳು
ನಿನ್ನೊಳಗೇ,
ತರಿಸದಿರು ಹೊರಗದನು, ಅರಿತು ಕೊಳ್ಳುವರಿಲ್ಲ
ಇಲ್ಲಿ. ನಿನಗನಿಸುವ ಭಾವಗಳನ್ನು ಹೇಳಿ, ತೋರ್ಪಡಿಸಿ
”ಶರ ಪಂಜರ”ದ ”ಕಾವೇರಿ”ಆಗುತ್ತೀಯಾ ನೀನೂ ?
ಭಾವನೆಗಳೆಲ್ಲವನ್ನು ಗುಡ್ಡೆ ಹಾಕಿ,  ಸೀಮೆಎಣ್ಣೆ ಸುರಿದು
ಕಡ್ಡಿ ಗೀರಿ ಬಿಡು;”ಭುಗ್” ಎಂದು ಹತ್ತಿ ಉರಿದು ಬೂದಿ
ಯಾಗಲಿ ಬಿಡು. ತುಂಬುವ ನಿನ್ನ ಕಣ್ಣಾಲಿಗಳ ನೀರಲ್ಲಿ
ಕದಡಿ ಕುಡಿದು ಬಿಡು. ನಿನ್ನೆಲ್ಲ ಕನಸುಗಳ ಗೋರಿಯ
ಮೇಲೆ ನಸು ನಗುತ ಬಾಳುವ  ಮೊಗವಾಡ ಹಾಕಿ ಬಿಡು.
ಆಗ ”ತಲೆ ಕೆಟ್ಟವಳು” ನೀನಲ್ಲ.ಇವರುಗಳು ಕೊಡುವ
”Prick ” ಗೆ ”Sensitive ” ನೀನಲ್ಲ.
ಸಂಸ್ಕ್ರತ ಸುಭಾಷಿತ –
ವಿದ್ಯಾ ವಿನಯ ಸಂಪನ್ನೇ, ಬ್ರಾಹ್ಮಣೇ ,ಗವಿ , ಹಸ್ತಿನಿ,
ಶುನಿಚೈವ ಶ್ವಪಾಕೇಚ ಪಂಡಿತಾಃ ಸಮದರ್ಶಿನಃ 
(ವಿದ್ಯಾವಿನಯ ಸಂಪನ್ನ ಬ್ರಾಹ್ಮಣನಲ್ಲಿಯೂ, ಆಕಳು,
ಆನೆ, ನಾಯಿ, ಪಾಮರ(ಸಾಮಾನ್ಯ)ವರ್ಗಕ್ಕೆ ಸೇರಿ 
ದವರಲ್ಲಿಯೂ, ಜ್ಞಾನಿಗಳು ಸಮದೃಷ್ಟಿ ಉಳ್ಳವರಾಗಿರುತ್ತಾರೆ.
-ಗೀತೆ.
ಚುಟುಕು.
ಲೋಕದ/ ಸಮಾಜ ಜೀವನದ ಲೋಪ ದೋಷ,ನ್ಯೂನತೆ 
ಗಳಿಗೆ ಕಾವ್ಯ ರೂಪದ ಪುಟ್ಟ ಸ್ಪಂದನ. ಚುಟುಕ ಅರ್ಥ ಸಾಂದ್ರತೆ ,
ಚಿಂತನೆಗೆ ಗ್ರಾಸ , ಮನಕ್ಕೆ ಮುದ ನೀಡುವಂತಿರಬೇಕು.
ಚುಟುಕುಗಳು ಛಂದೋ ಬದ್ಧವಾಗಿದ್ದರೆ, ಅವು ”ಬಂಧ” ಚುಟುಕುಗಳು.
ಛಂದೋ ಬದ್ಧವಲ್ಲದ ಚುಟುಕುಗಳು  ”ಮುಕ್ತ” ಚುಟುಕುಗಳು.
ಹಾಸ್ಯ ಪ್ರಜ್ಞೆ, ಭಾಷಾ ಕುಶಲತೆಗಳು ಇದ್ದಾಗ ಚುಟುಕು  ರಂಜಿಸುತ್ತದೆ.
ಮೂಲ:ಸಂಗ್ರಹ.             
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s