ಕನ್ನಡ ಸೌರಭ.

ಚಿಂತನ.
ಆರ್ಯ(=ಅಯ್ಯ; ಶ್ರೇಷ್ಠ )ರು ಒಂದು ಜನಾಂಗವಲ್ಲ;ಕುಲವಲ್ಲ.
ಆರ್ಯರು ಎಂದರೆ ಅತ್ಯಂತ ಶ್ರೇಷ್ಠ ಜೀವನ ನಡೆಸಿದ 
ಬುದ್ಧಿಜೀವಿಗಳ  ಸಮುದಾಯ. ಮನು ಕುಲಕ್ಕೆ ಜ್ಞಾನದ 
ತವನಿಧಿಯನ್ನು, ನವನಿಧಿಯನ್ನು ನಮಗಿತ್ತವರು ಆರ್ಯರು.
ನಿಮಗೆ ಗೊತ್ತೇ?
ದೂರದರ್ಶಕಗಳ ತೆರೆಯ ಮೇಲಿನ ಕ್ಷ-ಕಿರಣಗಳ ಪ್ರಮಾಣವು 
ರಾಷ್ಟ್ರೀಯ ಸಂಸ್ಥೆಗಳು ನಿಗದಿಪಡಿಸಿರುವ ಸ್ವೀಕಾರಾರ್ಹ 
ಚೌಕಟ್ಟಿನೊಳಗೆ ಇದೆ. ವಿದ್ಯುತ್ ಪ್ರವಾಹದ ಋಣ ಧ್ರುವದ 
ಕೊಳವೆಯೊಳಗೆ ಮೃದು ಕ್ಷ-ಕಿರಣಗಳು ಉತ್ಪತ್ತಿ ಯಾಗುತ್ತವೆ.
ಆದರೆ ಬಣ್ಣದ ಕೊಳವೆಯ ಗಾಜಿನ ವಸ್ತುವು ಪರಿಣಾಮಕಾರಿಯಾಗಿ 
ಕೊಳವೆಯ ಹೊರಭಾಗದಲ್ಲಿ ವಿಕಿರಣ ಹೊರಬರದಂತೆ 
ನಿಯಂತ್ರಿಸುತ್ತದೆ. ದೂರದರ್ಶಕದ ತೆರೆಯಿಂದ ದೂರವಿರುವ 
ವೀಕ್ಷಕರಿಗೆ  ಅಪಾಯಕಾರಿಯಾದಂಥ ಹೆಚ್ಚು ಪ್ರಮಾಣದ 
ವಿಕಿರಣವು ತಲುಪುವ ಸಾಧ್ಯತೆ ಇಲ್ಲ.
ಆರೋಗ್ಯ ಚಿಂತನ.
ನೀರುಳ್ಳಿ ರಸ ಲೇಪದಿಂದ ಚರ್ಮರೋಗ ಗುಣ ಸಾಧ್ಯ.
ಜೇನು ನೊಣ,ಚೇಳು ಕಡಿದಾಗ ನೀರುಳ್ಳಿ ರಸ ಲೇಪಿಸುತ್ತಾರೆ.
ಮೂರ್ಛೆರೋಗ ಚಿಕಿತ್ಸೆಯಲ್ಲಿ  ನೀರುಳ್ಳಿ ರಸವನ್ನು ಮೂಗಿಗೆ 
ಹಾಕುತ್ತಾರೆ.
ಕ್ಷಯ ರೋಗದಲ್ಲಿ ಕಫವನ್ನು ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು 
ಉಪಯೋಗಿಸ ಬಹುದು.
ಕೊತ್ತಂಬರಿ ಮತ್ತು ಹಾಲನ್ನು ಕುದಿಸಿ ತಯಾರಿಸಿದ ಔಷಧಿ 
ಮೂಲವ್ಯಾಧಿಯಿಂದಾಗುವ ರಕ್ತಸ್ರಾವವನ್ನು ನಿಲ್ಲಿಸುತ್ತದೆ.
ತಣ್ಣೀರಿನೊಂದಿಗೆ ಜೇನು ಸೇವಿಸುವುದು ನಿದ್ರೆ ಬರಿಸಲು ಉಪಯುಕ್ತ.
ಮೂಲ:ಸಂಗ್ರಹ. 
ಹೆಣ್ಣಾಗಿ ಬಾಳ ಹೊರಬೇಡ. 
ಪ್ರೀತಿಸುವ ಗಂಡನಿದ್ದಾಗ ಹೆಣ್ಣಿಗೆ ಮನೆ ಸ್ವರ್ಗದಂತೆ ಸುಂದರ;
ಮುಖ ತಿರುಗಿಸಿ,ಕಣ್ಣಲ್ಲಿ ಕಣ್ಣಿರಿಸಿ ನೋಡದ, ಮಡದಿಯ ಮಾತನಾಡಿಸದ,  
ಕಡೆಗಣಿಸುವ ಗಂಡನಿಂದ ಹೆಣ್ಣಿಗೆ ಮನೆಯಾಗುವುದು  ಮನೋ  ವ್ಯಾಧಿ ಮಂದಿರ;
ನೋವು ನುಂಗುತ್ತ, ದೌರ್ಜನ್ಯ ಸಹಿಸಿ ಬಾಳಿದಳು ಸೀತೆ, ಲೋಕ ಮಾತೆ;
ದೌರ್ಜನ್ಯ ಪ್ರತಿಭಟಿಸಿದ ದ್ರೌಪದಿಗೆ ಸೋದರ ಕೃಷ್ಣ, ಪತಿ ಭೀಮ ನೀಡಿದರು ಜೊತೆ;
ಇಂದಿಗೂ ಮುಂದುವರಿಯುತ್ತಿದೆ ಹೆಣ್ಣಿನ ಕಣ್ಣೀರಿನ ಕಥೆ;
ಮಂದಿಯೊಡನೆ ಮೈ ಮರೆತು ಮಾತನಾಡುವ  ಈ ಮಹನೀಯರು 
ಮನೆಯಲ್ಲಿ ಮೊಸರಲ್ಲಿ ಕಲ್ಲು ಹುಡುಕುವ  ವೈಖರಿ  ಹೆಣ್ಣಿಗೆ ತರಿಸುವುದು ಕಣ್ಣೀರು.
ಮಾತನಾಡಿಸಿದರೆ ಸುಮ್ಮನಿರುವ,ಮಡದಿಯ ಇರವನ್ನೇ ಮರೆಯುವವರು ಕೆಲವರು.
ಮಡದಿ ಇದ್ದರೂ ತೊರೆದು ಬಾಳುವ ಮಂದಿ ಇನ್ನು ಕೆಲವರು.
ಮುದ್ದಿನ ಮಕ್ಕಳ ಮಮತೆಯ ಮಾತೊಂದೇ ಹೆಣ್ಣಿನ ಉರಿಯುವ ಮನಸಿಗೆ ಪನ್ನೀರು.
-ವಾಣಿ ಹೆಗ್ಡೆ.                    

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s