ಕನ್ನಡ ಸೌರಭ.

ಹಾಲು ಮತ -ಕೌರಭ ಮಹರ್ಷಿಯಿಂದ ಹುಟ್ಟಿ ಶ್ರೀ ಶಿವಾಂಶ 
ಧರ್ಮ ಎಂದು ಎಣಿಸಲ್ಪಟ್ಟಿದೆ.(ಸಂಶೋಧಕರು)
ಭಾರತದ ವಿವಿಧ ಪ್ರದೇಶಗಳಲ್ಲಿ  ಇವರನ್ನು ಪಾಲ್, ಪಾಲ 
ಕ್ಷತ್ರಿಯ, ಬಘೇಲ್, ಗಡಾರಿಯ, ರಬ್ಬೇರಿ,ರೈಕಾ, ಭರ್ವಾಡ್ ,
ಧನಗರ್,ಕುರುಬನ್, ಕುರುಮನ್,ಕುರುಬ ಇತ್ಯಾದಿ ಹೆಸರು
ಗಳಿಂದ ಕರೆಯುತ್ತಾರೆ.(ಮ.ನಾ.ಮೂರ್ತಿ.)
ಕುರುಬರಲ್ಲಿ ಗೋತ್ರ ೩೭೦ಕ್ಕೂಹೆಚ್ಚು.
ಭಾರತದಲ್ಲಿ ೧೦ ಕೋಟಿಗೂ ಮೀರಿ ಕುರುಬರಿದ್ದಾರೆ.
ಕರ್ನಾಟಕದಲ್ಲಿ ಇವರ ಜನಸಂಖ್ಯೆ ೮೦ ಲಕ್ಷ.
”ಕುಲ ಹುಟ್ಟುವ ಮುನ್ನ ಕುರುಬ ಹುಟ್ಟಿದನಯ್ಯ”-ವೇದೋಕ್ತಿ.
ಹಾಲು ಮತದ ಮಹಾಪುರುಷರು ಮತ್ತು ಮಹಿಳೆಯರು:-
ಮಹಾಕವಿ ಕಾಳಿದಾಸ (ಸಂಸ್ಕೃತ ಸಾಹಿತ್ಯದ ಪ್ರಸಿದ್ಧ ಕವಿ);
ಸಾಮ್ರಾಟ್ ಅಶೋಕ; ಮೌರ್ಯ ಸಾಮ್ರಾಜ್ಯದ  ಸ್ಥಾಪಕ –
ಚಂದ್ರಗುಪ್ತ ಮೌರ್ಯ;ಇಂದೂರು ಸಂಸ್ಥಾನದ ಮಹಾರಾಣಿ 
ಅಹಲ್ಯಾಬಾಯಿ ಹೋಳ್ಕರ್ , ಗ್ವಾಲಿಯರ್ ಸಂಸ್ಥಾನದ ಮಹಾರಾಜ ಸಯ್ಯಾಜಿ ರಾವ್ 
ಗಾಯಕ್ ವಾಡ್; ಹಕ್ಕ-ಬುಕ್ಕರು (ವಿದ್ಯಾರಣ್ಯರ ಸಾರಥ್ಯದಲ್ಲಿ
೧೩೩೬ ರಲ್ಲಿ ವಿಜಯನಗರ ಸಂಸ್ಥಾನ ಸ್ಥಾಪಿಸಿದವರು) ಮತ್ತು

ಭಕ್ತ ಕನಕದಾಸರು.
”ಕುಲ ಹುಟ್ಟುವ ಮುನ್ನ ಕುರುಬ ಹುಟ್ಟಿದನಯ್ಯ” -ವೇದೋಕ್ತಿ.
ಶಿರಡಿ ಸಾಯಿಬಾಬಾ ಅವರಿಗೆ ದಿವ್ಯ ಜ್ಞಾನ ಪ್ರಾಪ್ತಿ ಮಾಡಿದ್ದು
ಕುರುಬರ ಖಂಡೋಬ ದೇವರು. (ಉ.ಕರ್ನಾಟಕದಲ್ಲಿ ಮೈಲಾರ 
ಲಿಂಗ ಎಂದು ಜನಪ್ರಿಯ) ಕುರುಬರ ಆರಾಧ್ಯ ದೈವ  ಬೀರಲಿಂಗ.
ಮೂಲ:”ವಿಜಯ ಕರ್ನಾಟಕ”(ದಿನ ಪತ್ರಿಕೆ)
ನಿಮಗೆ ಗೊತ್ತೇ?
೧.ಬ್ಯಾರಿಗಳು  ತುಳುನಾಡಿನ ಮುಸ್ಲಿಂ ಸಮುದಾಯದವರು.
ಬ್ಯಾರಿ ಭಾಷೆ ತುಳು,ಕನ್ನಡ ಹಾಗೂ ಮಲಯಾಳಗಳ ಒಂದು 
ಮಿಶ್ರಣ.
ಚಿಂತನ ಮಂಥನ
೧. ಧರ್ಮ,ಅರ್ಥ, ಕಾಮ, ಮೋಕ್ಷ ಗಳಲ್ಲಿ ಅರ್ಥ (=ಹಣ)ವೂ 
ಒಂದು ಮೌಲ್ಯ;ಅದರ ಗಳಿಕೆ  ಧರ್ಮಬದ್ಧವಾಗಿರ ಬೇಕು
ಎಂಬುದೇ ಭಾರತೀಯ ದಾರ್ಶನಿಕರ ಸದಾಶಯ.
೨. ವಿದ್ಯೆ ಹಣಗಳಿಕೆಯ ಸಾಧನವಾಗದೆ ವ್ಯಕ್ತಿತ್ವ ರೂಪಿಸುವ 
ಸಾಧನವಾದಾಗ  ಮಾತ್ರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ 
ಸಿಗಲು ಸಾಧ್ಯ.
–ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ–ಸಿರಿಗೆರೆ.
೩ಮನುಷ್ಯನ ಮಾನಸಿಕ ಒತ್ತಡಗಳಿಗೆ ಪ್ರಮುಖ ಕಾರಣ 
ಅವನಲ್ಲಿರುವ ಅಪರಾಧಿ ಮನೋಭಾವ.ಇದರಿಂದ ಅವನು 
ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ.—ಯೇಸು.
೩”ಜಿಹ್ವಾ ಚಾಪಲ್ಯ” ಎಂದರೆ ಅತಿ ಮಾತು ಮತ್ತು ಅತಿ
ಭೋಜನ.  ಎರಡೂ ಅಪಾಯಕಾರಿ.ಒಂದು ಮನದ ಸ್ವಾಸ್ಥ್ಯ 
ಕೆಡಿಸಿದರೆ ಇನ್ನೊಂದು ತನುವಿನ ಸ್ವಾಸ್ಥ್ಯವನ್ನು ಕೆಡಿಸುತ್ತದೆ.
–ಡಾ.ಶ್ರದ್ಧಾನಂದ ಶ್ರೀ-ಗುರುದೇವಾಶ್ರಮ,ಕಾಗವಾಡ,ಸವಲಗಾ.
   

ಆರೋಗ್ಯ ಮಾಹಿತಿ.
೧. ಮಲೆನಾಡ ಮುರುಗಲ (ಪುನರ್ಪುಳಿ / Kokum ) ಉಪಯೋಗ
ಊರಗಲ.ಬೇಸಿಗೆಯಲ್ಲಿ ಯಾವುದೇ ಸಮಾರಂಭಕ್ಕೆ ಹೋದರೂ
ಪುನರ್ಪುಳಿ Juice ನದೇ ಮೇಲುಗೈ. ಉತ್ತಮ ಸ್ವಾದಇರುವ 
ಪುನರ್ಪುಳಿ Chocolate  ಮಕ್ಕಳು ಇಷ್ಟ ಪಡುವ ಉತ್ಪನ್ನ.
ಪುನರ್ಪುಳಿ ಬೀಜದಿಂದ ತಯಾರಿಸುವ ತುಪ್ಪ, ಬೆಂಕಿಯಿಂದ 
ಸುಟ್ಟ ಘಾಯಗಳಿಗೆ ಉತ್ತಮ ಔಷಧಿ; ಕಾಲೊಡಕಿನ ಮುಲಾಮು.
ಮೂಲ:ಸಂಗ್ರಹ. 

    

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s