ಕನ್ನಡ ಸೌರಭ.

ಚಿಂತನ:
೧)ತಂದೆ-ತಾಯಿಯರ ಬಿಗಿ ಹಿಡಿತದಲ್ಲಿ ಬೆಳೆಯುವ ಮಕ್ಕಳು ಸುಳ್ಳುಗಾರ 
ರಾಗುವುದು ಖಂಡಿತ.–Ingersoll .
೨)ಶಿಕ್ಷಣದ ಮೂಲ ಗುರಿ ಆಲೋಚನಾ ಕ್ರಮದ ವಿಕಸನ ಮತ್ತು ಸುಸಂಸ್ಕೃತ 
ವ್ಯಕ್ತಿತ್ವವನ್ನು ರೂಪಿಸುವುದು.ಆದರೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕೇವಲ 
ಉರು ಹೊಡೆಯುವುದನ್ನು ಕಲಿಸಲಾಗುತ್ತಿದೆ. ಮಕ್ಕಳು ಸೃಜನ ಶೀಲರಾಗದೆ 
ಮಾಹಿತಿಯನ್ನು ಸಂಗ್ರಹಿಸುವ ಬುದ್ಧಿಹೀನ computer ಗಳಾಗುತ್ತಿದ್ದಾರೆ.
–ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಸಿರಿಗೆರೆ.
೩)ಕಲಿಯೋಕೆ ಕೋಟಿ ಭಾಷೆ.ಆಡೋಕೆ ಒಂದೇ ಭಾಷೆ–ಕಸ್ತೂರಿ ಕನ್ನಡ.
೪)ಪ್ರವಾಹದ ವಿರುದ್ಧ ಈಜುವುದು ಜೀವಂತ ಮೀನುಗಳಿಗೆ ಮಾತ್ರ ಸಾಧ್ಯ.
ಮೃತ ಮೀನುಗಳು ಮಾತ್ರ ನೀರಿನ ಹರಿವಿನ ಗುಂಟ ಸಾಗುತ್ತವೆ.
ನಾವು ಯಾವ ರೀತಿಯ ಮೀನಿನಂತೆ ಇರಬೇಕು ಎಂಬ ನಿರ್ಧಾರ ನಮ್ಮದೇ.
೫)ವಿವಾಹವು ಒಡೆತನಕ್ಕಲ್ಲ;ಗೆಳೆತನಕ್ಕೆ.ಕೂಡಿ ಪ್ರೇಮದಿಂದ ಬಾಳುವುದಕ್ಕೆ;
ಯಾರಿಗೆ ಯಾರೂ ಒಡೆಯರಲ್ಲ,ಎಲ್ಲರಿಗೂ ದಯಾನಿಧಿ ದೇವನೇ ಒಡೆಯನು.
ಮಾಹಿತಿ ಸಂಗ್ರಹ:
೧)ಪಾಶ್ಚಾತ್ಯರ ಸಂಸ್ಕೃತಿಯಲ್ಲಿ ಹುಟ್ಟು ಹಬ್ಬ ಆಚರಿಸಲು ತಾರೀಖಿಗೆ ಮಹತ್ವ 
ನೀಡಲಾಗುತ್ತದೆ.ಭಾರತೀಯ ಸಂಪ್ರದಾಯದಲ್ಲಿ ಪಂಚಾಂಗ(ವಾರ, ತಿಥಿ,
ನಕ್ಷತ್ರ, ಯೋಗ, ಕರಣ)ದ ಆಧಾರದಲ್ಲಿ ಯಾವ ಮಾಸದಲ್ಲಿ ವ್ಯಕ್ತಿ ಹುಟ್ಟಿದ್ದಾನೆ 
ಎಂಬುದನ್ನು ಪರಿಗಣಿಸಿ ಹುಟ್ಟುಹಬ್ಬ ಆಚರಿಸುತ್ತೇವೆ.ಅದರಂತೆ ಫೆಬ್ರವರಿ ೨೯
ರಂದು ಹುಟ್ಟಿದವರು ಆ ದಿನ ಬರಲಿಲ್ಲವಲ್ಲ ಎಂದು ಕೊರಗಬೇಕಾಗಿಲ್ಲ.
 ೨)ಅನೇಕ ಜನರು ಸಾಯುವುದು ಕಾಯಿಲೆಯಿಂದಲ್ಲ;
ಬದಲಾಗಿ ಅವರು ಪಡೆಯುವ ತಪ್ಪು ಚಿಕಿತ್ಸೆಯಿಂದ;
ಸ್ವಯಂ ನಿರ್ಧಾರ, ತಪ್ಪು ನಿರ್ಧಾರ ಎರಡೂ ಮಾರಕ-ಮರಣಾಂತಿಕ
ಆಗ ಬಲ್ಲುದು.
೩)ಭಾರತದಲ್ಲಿ  ಸಂಸದರ ವಾಹನ ಗಳಿಗೆ ಕೆಂಪು ದೀಪ ಪ್ರತಿಷ್ಠೆಯ
ಸಂಕೇತ.ಆದರೆ ಬಹುತೇಕ ವಿದೇಶಗಳಲ್ಲಿ ಕೆಂಪು ದೀಪಗಳ ಬಳಕೆ
Ambulance ,ಅಗ್ನಿ ಶಾಮಕ ವಾಹನಗಳು ಹಾಗೂ Police ವಾಹನಗಳಿಗೆ
ಇಲ್ಲವೇ ಭದ್ರತೆಯ ಅಗತ್ಯವಿರುವ ಸನ್ನಿವೇಶಗಳಲ್ಲಿ ಬಳಸುವ ವಾಹನಗಳಿಗೆ
ಸೀಮಿತ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s