ಮನೆ ಮದ್ದು.

೧)ಚೇಳು ಕಡಿದಾಗ ಕಾಳು ಮೆಣಸಿನ ಹುಡಿಯನ್ನು
ಉದುರಿಸ ಬಹುದು. ಮಲೇರಿಯಾ ಜ್ವರಕ್ಕೆ ಕಾಳು
ಮೆಣಸಿನ ಕಷಾಯ ಉತ್ತಮ ಔಷಧಿ. ಹಸಿವೆ ಇಲ್ಲದಿ
ರುವಾಗ ಕಾಳು ಮೆಣಸು,ಶುಂಠಿ ಮತ್ತು ಬೆಲ್ಲ ಇವು
ಗಳನ್ನು ಸೇರಿಸಿ ಜಜ್ಜಿ ತಿನ್ನುವುದು ಒಳ್ಳೆಯದು.
೨)ಎಳ್ಳೆಣ್ಣೆ ಯನ್ನು ಪ್ರತಿದಿನ ಬಳಸಿದರೆ ವಾತದ
ಕಾಯಿಲೆಗಳ ಸಂಭವವು ಕಡಿಮೆಯಾಗುತ್ತದೆ.
ಎಳ್ಳನ್ನು ಅರೆದು ಕುಡಿಯುವುದು ಮೂಲ ವ್ಯಾಧಿಗೆ
ಉತ್ತಮ ಔಷಧಿ. ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದ
ರಿಂದ ಮೈ ಕಾಂತಿ ಹೆಚ್ಚುತ್ತದೆ. ಗರ್ಭಿಣಿಯ ಆರೋಗ್ಯಕ್ಕೆ
ಎಳ್ಳಿನ ಉಂಡೆ ತಿನ್ನುವುದು ಒಳ್ಳೆಯದು.
೩)ನೆಗಡಿಯಿಂದ ಮೂಗು ಕಟ್ಟಿದಾಗ ಅರಶಿನದ
ತುಂಡನ್ನು ಬೆಂಕಿಗೆ ಹಾಕಿ ಬರುವ ಹೊಗೆಯನ್ನು
ಆಘ್ರಾಣಿಸ ಬೇಕು.ಕೀಟ, ಚೇಳು ಕಡಿತಕ್ಕೆ ಅರಶಿನ
ಹಚ್ಚುವುದು ಪ್ರಥಮ ಚಿಕಿತ್ಸೆ. ಹಳೆಯ ದಮ್ಮು ಕಾಯಿಲೆಗೆ
ತುಪ್ಪದಲ್ಲಿ ಹುರಿದ ಅರಶಿನದ ನಿತ್ಯ ಸೇವನೆ ಉತ್ತಮ
ಚಿಕಿತ್ಸೆ. ಪ್ರಮೇಹ ರೋಗಗಳಿಗೆ ಅರಶಿನ ಉತ್ತಮ.
೪)ಜೀರಿಗೆ ಎಣ್ಣೆ ತುರಿ ಕಜ್ಜಿಗೆ ಉತ್ತಮ ಔಷದಿ .ಹೊಟ್ಟೆಯಲ್ಲಿ
ವಾಯು ತುಂಬಿ ಸಂಕಟವಾದಾಗ ಸ್ವಲ್ಪ ಜೀರಿಗೆಯನ್ನು
ಜಗಿದು ಉಪಶಮನ ಪಡೆಯ ಬಹುದು.ಗೊಗ್ಗರ ಧ್ವನಿ,
ಹಳೆಯ ಅತಿಸಾರಗಳಿಗೂ ಇದು ಒಳ್ಳೆಯ ಔಷಧಿ.
ಗರ್ಭಿಣಿಯರು ಸತತವಾಗಿ ಜೀರಿಗೆಯನ್ನು ಉಪಯೋಗಿ
ಸುವುದರಿಂದ ಹೆರಿಗೆ ಸುಸೂತ್ರವಾಗುತ್ತದೆ. ಎದೆ ಹಾಲಿನ
ಪ್ರಮಾಣವು ಹೆಚ್ಚುತ್ತದೆ. ಬಿಕ್ಕಳಿಕೆ ಉಂಟಾದಾಗ ಜೀರಿಗೆ
ಮತ್ತು ತುಪ್ಪವನ್ನು ಬೆಂಕಿಗೆ ಹಾಕಿ, ಆ ಹೊಗೆಯನ್ನು ಆಘ್ರಾ
ಣಿಸಬೇಕು.ಅಜೀರ್ಣ ರೋಗದಲ್ಲಿ ದಿನ ನಿತ್ಯ ಜೀರಿಗೆ
ಉಪಯೋಗಿಸ ಬೇಕು.
೫)ವಿಷಸೇವನೆ ಯಾದಾಗ ವಾಂತಿ ಮಾಡಿಸಲು ಸಾಸಿವೆ
ಅರೆದು ಕುಡಿಸ ಬೇಕು. ಬಿದ್ದು ಪೆಟ್ಟಾದಲ್ಲಿ ಅಥವಾ ಬೇರೆ
ಯಾವುದೇ ನೋವಿದ್ದಲ್ಲಿ ಸಾಸಿವೆ ಅರೆದು ಲೇಪ ಹಾಕ
ಬೇಕು. ಸಿಹಿಮೂತ್ರ ಕಾಯಿಲೆಯಲ್ಲಿ ಸಾಸಿವೆ ಎಣ್ಣೆ ಉಪ
ಯೋಗ ಉತ್ತಮ.ಸಾಸಿವೆ ಗಿಡದ ಎಲೆಯಿಂದ ಮಾಡಿದ
ಪಲ್ಯ ಹೊಟ್ಟೆ ಹುಳಗಳಿಗೆ ಪ್ರತಿಬಂಧಕ. ಸಾಸಿವೆ ಎಣ್ಣೆ
ಚರ್ಮದ ಆರೋಗ್ಯ ಕಾಪಾಡುತ್ತದೆ.ಚಳಿಗಾಲದಲ್ಲಿ
ಕಾಲು ಒಡೆಯುವಾಗ ಸಾಸಿವೆ ಎಣ್ಣೆ ಹಚ್ಚ ಬೇಕು.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s