ಕನ್ನಡ ಸೌರಭ.

ಅಧ್ಯಾತ್ಮ ಸಂಪದ
ಮಾತರ್ಮೇದಿನಿ(ಮಾತೆ ಭೂಮಿ); ತಾತ ಮಾರುತ (ತಂದೆ
ವಾಯು ದೇವ);ಸಖೇ ತೇಜ (ಮಿತ್ರ ಸೂರ್ಯ ದೇವ );
ಸುಬಂಧೋ ಜಲ (ಬಂಧು- ಜಲ);ಭ್ರಾತ ವ್ಯೋಮಃ (ಆಕಾಶವೇ
ಅಣ್ಣ );ನಿಬದ್ಧ ಏವ ಭವತಾಂ ಅಂತ್ಯ ಪ್ರಣಮಾಂಜಲಿ(ನಿಮಗೆ
ನನ್ನ ಕೊನೆಯ ನಮಸ್ಕಾರ ).
–ಅಂತ್ಯ ಕಾಲದಲ್ಲಿ ಜಪಿಸ ಬೇಕಾದ ಶ್ಲೋಕ .
-ಭರ್ತ್ರ ಹರಿ.
ಭೂಲೋಕವೆಂಬ ಶಾಲೆಯಲ್ಲಿ ೨ ವಾಸ ಸ್ಥಾನ ಗಳಿವೆ.
ಇಂದ್ರಿಯ ಚಾಪಲ್ಯ ತೀರಿಸಿ ಕೊಳ್ಳುವ ಜೂಜಾಟದ ಸ್ಥಳ,
ಪಾನಗೃಹ ಇತ್ಯಾದಿಗಳಾದ ಕಲಿ ವಾಸ ಸ್ಥಾನ.
ಇನ್ನೊಂದು ಆತ್ಮಕ್ಕೆ ಶಾಂತಿ ಲಭಿಸುವ ದೇವಸ್ಥಾನ, ದ್ಯಾನ
ಮಂದಿರ, ಧಾರ್ಮಿಕ ಉಪನ್ಯಾಸ ನಡೆಸುವ ಸ್ಥಳ.
ಮಾನವ ಧರ್ಮ ಏನು ಎಂಬ ಜಿಜ್ಞಾಸೆ ನಡೆಸಲು
ಜಗನ್ಮಾತೆ ಆದಿ ಪರಾಶಕ್ತಿ, ಮಾನವನನ್ನು ಭೂಲೋಕವೆಂಬ
ಶಾಲೆಗೆ ಕಳಿಸುತ್ತಾಳೆ. ಮುಕ್ತಿ ಪಡೆಯಲು ಪೂರಕವಾದ
ಧರ್ಮವನ್ನು ಕಲಿತ ನಂತರ ತನ್ನ ಬಳಿ ಕರೆಸಿಕೊಳ್ಳುತ್ತಾಳೆ.
–ಶ್ರೀ ನಿಮಿಷಾನಂದ ಗುರೂಜಿ.
ಹರಿದಾಸರ ಹಾಡು .
ತುರು(=ಗೋವು ), ಕರು ಇದ್ದರೆ ಊರು ಸ್ವರ್ಗ;
ತುರು,ಕರು ಇಲ್ಲದ ಊರು ನರಕ;
ತುರು,ಕರುಗಳ ಕಂಡು ಹರಿಹಾಯ ಬೇಡಿ;
ಕರೆದು ಗ್ರಾಸವನ್ನಿತ್ತು ಉಪಚಾರ ಮಾಡಿ;
ತುರು,ಕರುಗಳ ಹಿಂಸೆ ಮಾಡಿದರೆ ,
ಹರಿ ಮುನಿಯುವನು ನಿಮ್ಮ ನೋಡಿ;
ತುರು,ತುರು ಎಂದು ಕೊಳಲನೂದುತ ಬಂದ
ತುರು,ಕರು ಗಳೊಡೆಯ ಲಕ್ಷ್ಮೀ ನಾರಾಯಣ ಗೋವಿಂದ.
ರಚಯಿತರು:ಹರಿದಾಸ-ಪಾವಂಜೆ ಲಕ್ಷ್ಮೀ ನಾರಾಯಣಪ್ಪಯ್ಯ
(೧೮೫೪ ರಲ್ಲಿ ಮುಲ್ಕಿಯ ಬಪ್ಪನಾಡು ದೇವಳದ ಬಳಿ ಜನನ;
ತಂದೆ-ವೆಂಕಟ ಕೃಷ್ಣಯ್ಯ;ತಾಯಿ-ಮಹಾಲಕ್ಷ್ಮಿ ;ಇವರ ಜ್ಯೇಷ್ಠ
ಪುತ್ರ; ೧೯೨೪ರ ಮಕರ ಸಂಕ್ರಾಂತಿಯಂದು ಹರಿ ಪಾದ ಸೇರಿದರು.)
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s