ಕನ್ನಡ ಸೌರಭ.

ಜಾನಪದ ಕುಣಿತ ವೈವಿಧ್ಯ:

ಸೋಮನ ಕುಣಿತ (ರೋಗ ನಿವಾರಣೆ,ಊರಿನ ರಕ್ಷಣೆಗಾಗಿ

ದೇವಿಯನ್ನು ಪ್ರಾರ್ಥಿಸುವ ಜಾನಪದ ನೃತ್ಯ ),ವೀರಗಾಸೆ,

ಕರ್ಪಾಳ ಮೇಳ,ಡೊಳ್ಳು ,ಪೂಜಾ ಕುಣಿತ, ಪಟ ಕುಣಿತ,

ಗೊರವರ ಕುಣಿತ,ಕಂಸಾಳೆ ಇತ್ಯಾದಿ.

ಅದ್ಯಾತ್ಮ ಸೌರಭ.

ಮನುಷ್ಯ ಯಾವುದೇ ಧರ್ಮ, ಪಂಥಗಳನ್ನು ಅನುಸರಿಸಲಿ,

ಅವನ ಜೀವನ ಕ್ರಮ ,”ಧಾರುಣಿಯ ನಡಿಗೆಯಲಿ ಮೇರುವಿನ

ಗುರಿ ಇರಲಿ” ಎಂಬ ಕವಿವಾಣಿಯಂತೆ ಇರಬೇಕು. ಹಾಗಾದಾಗ

ಮಾತ್ರ ಉತ್ತಮ ಸಂಸ್ಕಾರ, ಶಾಂತಿಯುತ ಸಮಾಜದ ನಿರ್ಮಾಣ

ಸಾಧ್ಯ.ಕೇವಲ ಧರ್ಮ ಗ್ರಂಥಗಳ ಪಠಣ ಸಾಲದು. ಅದರ

ಅನುಷ್ಠಾನ ಕೂಡಾ ಮುಖ್ಯ. ಮನುಕುಲದಲ್ಲಿ ದೇವಭಕ್ತರು

ಎಂಬ ಜಾತಿಯನ್ನು ಬಿಟ್ಟರೆ ಬೇರೆ ಯಾವ ಜಾತಿಯೂ ಇಲ್ಲ

ಎಂಬ ವಾತಾವರಣ ನಮ್ಮಲ್ಲಿ ಮೂಡ ಬೇಕಾಗಿದೆ. ಅಧ್ಯಾತ್ಮ

ಬಿಟ್ಟು ಈ ಪ್ರಪಂಚವಿಲ್ಲ. ವಿಜ್ಞಾನಯುಗದಲ್ಲಿ ಅದರ ದುರ್ಬಳಕೆ

ಹಲವು ಅನಾಹುತಗಳಿಗೆ ಕಾರಣವಾಗಿದೆ.ನಮಗೆ ಬದುಕಿನ

ದಾರಿ ತೋರುವ ಅಧ್ಯಾತ್ಮಕ್ಕಿಂತ ವಿಜ್ಞಾನ ದೊಡ್ಡದಲ್ಲ.ಮಕ್ಕಳ

ಕೈಗೆ Mobile ಕೊಡುವ ಬದಲು ಧಾರ್ಮಿಕ ಗ್ರಂಥಗಳನ್ನು

ಕೊಡಬೇಕು.-ಶ್ರೀ ಈಶ ವಿಠಲದಾಸ ಸ್ವಾಮೀಜಿ-ಕೇಮಾರು

ಸಾಂದೀಪನೀ  ಸಾಧನಾಶ್ರಮ.

ಆಯುರ್ವೇದ.

ಕಾಯ ಚಿಕಿತ್ಸೆ,ಮಕ್ಕಳ ಚಿಕಿತ್ಸೆ,ಮಾನಸಿಕ ಚಿಕಿತ್ಸೆ,ಶಲ್ಯ(ಶಸ್ತ್ರ)

ಚಿಕಿತ್ಸೆ, ಅಗದ(ವಿಷ ಚಿಕಿತ್ಸೆ),ಶಾಲಾಕ್ಯ(ಕುತ್ತಿಗೆಯ ಮೇಲಿನ

ಅವಯವಗಳ ಚಿಕಿತ್ಸೆ),ರಸಾಯನ(ಮುಪ್ಪಿನ ಚಿಕಿತ್ಸೆ), ಸಂತಾನ

ದೋಷಗಳ ಚಿಕಿತ್ಸೆ-ಹೀಗೆ ಆಯುರ್ವೇದ ಅಷ್ಟಾಂಗಯುಕ್ತ.

ಆಯುರ್ವೇದದ  ಶೋಧಗಳಲ್ಲಿ ಅತಿ ಮಹತ್ವದ್ದು “ತ್ರಿದೋಷ ಸಿದ್ಧಾಂತ”.

ವಾತ, ಪಿತ್ತ, ಕಫಗಳೇ ತ್ರಿದೋಷಗಳು.ಇವು ಶರೀರ ನಿರ್ಮಾಪಕವಾದ

ಧಾತುಗಳ(ರಸ, ಅಸ್ಥಿ, ರಕ್ತ, ಮಾಂಸ,ಮೇದ, ಮಜ್ಜಾ,ಶುಕ್ರ),ಮೂತ್ರ,ಪುರೀಷ,

ಸ್ವೇದಾದಿ  ಮಲಗಳ ಮೇಲೆ ಪ್ರಭಾವ ಬೀರುತ್ತದೆ. ಇವುಗಳ ಸಮ ಸ್ಥಿತಿಯ

ವ್ಯತ್ಯಾಸವಾದಾಗ ರೋಗವುಂಟಾಗುತ್ತದೆ.

ದೇಹದ  ಒಳಗಿನ ಪರಿಸ್ಥಿತಿಯನ್ನು, ಹೊರಗಿನ ವಾತಾವರಣ ನಿಯಂತ್ರಿಸುವ

ವಿಧಾನದ ಬಗ್ಗೆ ಆಯುರ್ವೇದಕ್ಕೆ ಸ್ಪಷ್ಟ ಪರಿಕಲ್ಪನೆಗಳಿವೆ. ದಿನಚರ್ಯೆ,ಋತು

ಚರ್ಯೆ ಮೊದಲಾದುವುಗಳ ಮೂಲಕ ದಿನಚರಿಯನ್ನು ಬದಲಾಯಿಸಿಕೊಂಡರೆ

ರೋಗರಹಿತ ಸಮಾಜವೊಂದನ್ನು ನಿರ್ಮಿಸಲು ಸಾಧ್ಯ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s