ಕನ್ನಡ ಸೌರಭ.

ನಿಮಗೆ ಗೊತ್ತೇ?
ಕೋಟಿ-ಚೆನ್ನಯರು ತುಳುನಾಡ ವೀರರು. ಪಂಜದ ಎಣ್ಮೂರು
ಸಹೋದರರು.
ವೇದ ವ್ಯಾಸರು ಸತ್ಯವತಿ (ಶಂತನುವಿನ ದ್ವಿತೀಯ ಪತ್ನಿ)
ಮತ್ತು ಪರಾಶರ ಮುನಿಗಳ ಪುತ್ರ.
ಕಾಳಿಯ ಮರ್ದನ ನಂದ ಗಾಂವ್ ನಲ್ಲಿ ಆದುದಲ್ಲ;ಅದು ವಾಸ್ತವ
ವಾಗಿ ವೃಂದಾವನದಲ್ಲಿ ನಡೆದ ಘಟನೆ.ವೃಂದಾವನದಲ್ಲಿ ಈಗಲೂ
ಕಾಲೀ ದಹಾ ಘಾಟ್ ಇದೆ.
ಹೈದರಾಬಾದ್ ಪಟ್ಟಣದ ಜನಕ ಮಹಮ್ಮದ್ ಕುಲಿ ಕುತುಬ್ ಷಾ.
ಸಂಗೀತ ವಾದ್ಯಗಳ ಕಳಸಿಗೆ (ಕುತ್ತಿ ) ಕಂಚಿನ ಮರ ಶ್ರೇಷ್ಠ.
ಕರಿ ಇಲಿಗೆ ಬಿಳಿ ಇಲಿ ಶತ್ರು. ಕರಿ ಮಂಗಗಳಿಗೆ ಕೆಂಪು ಮಂಗಗಳು ಶತ್ರು.
ಕರಿ ಇಲಿ, ಮಂಗಗಳ ಹಾವಳಿ ತಡೆಯಲು,ಬಿಳಿ ಇಲಿ, ಕೆಂಪು ಮಂಗ ಗಳನ್ನು
ಸಾಕುತ್ತಾರೆ.
ಮೃಚ್ಛ ಕಟಿಕ=ಮಣ್ಣಿನ ಬಂಡಿ.

ನಾಣ್ಣುಡಿ

ಕುಂತಿ ಮಕ್ಕಳಿಗಾಯ್ತು ಕಾಂತಾರ ವಾಸ.

ಸಿಡುಬು ಸಾಕಿದವನಿಗೆ ಕಂಠ ಮಾಲೆ (ಸಿಡುಬಿಗಿಂತಲೂ ಘೋರವಾದ
ಕಾಯಿಲೆ) ಕೂಲಿ.
ಅಧ್ಯಾತ್ಮ ಸೌರಭ.
ದೇವರ ಆರಾಧನೆ ಎಂದರೆ ಇಂಥದೇ ಎನ್ನಲಾಗದು.
ದೇವರ ಪರಿಕಲ್ಪನೆ ಅಗಾಧವಾದುದು. ಫಲಾಪೇಕ್ಷೆ ಇಲ್ಲದ
ಸತ್ಕರ್ಮಗಳೇ ದೇವಾರಾಧನೆ ಎನ್ನಿಸಬಹುದು.
ಚಿಂತನ.
ಗಂಡು, ಹೆಣ್ಣಿನ ದ್ವೇಷಕ್ಕಿಂತ ಅವಳ ಪ್ರೀತಿಗೆ ಹೆದರುತ್ತಾನೆ.
—-ಪ್ರತಿಭಾ ನಂದಕುಮಾರ್.
ಕಹಿ ಸಮಯ ನಮ್ಮನ್ನು ಕಹಿಯಾಗಿಸ ಬಾರದು.
ಭಾರತದಲ್ಲಿ ಏನಿದೆ?
ಸರ್ವೇ ಜನಾಃ ಸುಖಿನೋ ಭವತು ಎಂಬ ಅಲೆ ಇದೆ.
ವೃದ್ಧರಿಗೆ, ವಿಕಲಾಂಗರಿಗೆ ನೆಲೆ ಇದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅಸು ನೀಗಿದ
ಬಲಿದಾನಿಗಳ ರಕ್ತದ ಕಲೆಯಿದೆ.
ಬೇಲೂರು, ಹಳೇಬೀಡುಗಳಲ್ಲಿ ಶಿಲ್ಪ ಕಲೆಯ ಜಾಲವಿದೆ.
ಕೆಂಗಲ್ ಹನುಮಂತಯ್ಯ,ವಿಶ್ವೇಶ್ವರಯ್ಯನಂಥ ಸಾಧಕರ,
ಬಸವ, ಕನಕರಂಥ ತತ್ತ್ವ ಜ್ಞಾನಿಗಳ ತಲೆ ಇದೆ.
ಶಾಸ್ತ್ರೀಯ ಸಂಗೀತ, ಭಾರತ ನಾಟ್ಯ ಇತ್ಯಾದಿ ಲಲಿತ ಕಲೆ
ಗಳಲ್ಲದೆ,ರವಿವರ್ಮನಂಥ ಚಿತ್ರ ಕಲಾವಿದರ ಕುಂಚದ ಜಾಲವಿದೆ.
ವಿವಿಧ ಸಮುದಾಯಗಳು ಆಚರಿಸುವ ಬಗೆ ಬಗೆಯ ಹಬ್ಬ
ಹರಿದಿನಗಳಲ್ಲಿ ಉತ್ಸಾಹದ ಸೆಲೆಯಿದೆ.
ಎಲ್ಲರೆದೆಯಲ್ಲಿ ಭಾರತೀಯರು ನಾವೆಂಬ ವಿಶ್ವಾಸ ಪ್ರಾಂಜಲವಿದೆ.
ಎಲ್ಲಕ್ಕಿಂತ ಮಿಗಿಲಾಗಿ, ಒಗ್ಗಟ್ಟಿನಲ್ಲಿ ನಾವು ಬಾಳಬೇಕೆಂಬ ತೀವ್ರ ಛಲವಿದೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s