ಕನ್ನಡ ಸೌರಭ.

ನಿಮಗೆ ಗೊತ್ತೇ?
 
೧)”ಪ್ರಪಂಚ ಹೃದಯ” ಎಂಬ ಸಂಸ್ಕೃತ ಗ್ರಂಥದಲ್ಲಿ ಸಪ್ತ
ಕೊಂಕಣದ ಪ್ರಸ್ತಾವನೆ  ಇದೆ.ಅವು-ಕೂಪಕ, ಕೇರಲ,
ಮೂಷಿಕ, ಆಲುವ, ಪಶು, ಕೋoಕಣ, ಪರ ಕೋoಕಣ ಎಂಬ
ದೇಶಗಳು.ಸಪ್ತ ಕೊಂಕಣದಲ್ಲಿರುವ ಆಲುವ ದೇಶವೇ
ನಮ್ಮ ತುಳುನಾಡು.ರಾಷ್ಟ್ರಕೂಟರ ಮಾವಳಿಯ ಶಿಲಾ
ಲೇಖದಲ್ಲಿ ತುಳುನಾಡಿನ ಹೆಸರು ಆಳುವ ಖೇಡ.ಗ್ರೀಕ್
ಇತಿಹಾಸಕಾರ ಟಾಲೆಮಿಯ ದಾಖಲೆಯಲ್ಲಿ Olokhovia .
೨)ಉನ್ನತ ಪ್ರದೇಶದಲ್ಲಿ ಜನಿಸಿದ ಮಕ್ಕಳು ಗಿಡ್ಡ, ಹಗುರ
ಹಾಗೂ  ನರಸಂಬಂಧಿ ಅಪಕ್ವತೆಯಿಂದ ನರಳುವುದು
ಸಾಮಾನ್ಯ.
ಶೀತ ಹವಾಮಾನದಲ್ಲಿ ಜನಿಸುವ ಮಗುವಿಗೆ ಉಷ್ಣವನ್ನು
ಉತ್ತಮವಾಗಿ ಹೀರಿಕೊಳ್ಳುವ ವ್ಯವಸ್ಥೆ ಇರುತ್ತದೆ.
ಮರುಭೂಮಿಯ ವಾತಾವರಣದಲ್ಲಿ  ಹುಟ್ಟಿದ ಮಕ್ಕಳ
ಉಷ್ಣತಾಮಾನ ನಿಯಂತ್ರಣಕ್ಕೆ  ವಿಶೇಷ ವ್ಯವಸ್ಥೆ  ಇರುತ್ತದೆ.
ಈ ಮಕ್ಕಳಲ್ಲಿ ಬೆವರಿನಗ್ರಂಥಿಗಳು ಹೆಚ್ಚಿರುತ್ತವೆ,
 
ಆರೋಗ್ಯ-ಔಷಧಿ.
‘ಅಶ್ವಗಂಧಿ’,’ಶತಾವರಿ’ ಈ ಮೂಲಿಕೆಗಳು ದೇಹದಲ್ಲಿ ವೃದ್ಧಿಪರ
ವಾದ ಕ್ರಿಯೆಯನ್ನು ಚುರುಕುಗೊಳಿಸುತ್ತದಲ್ಲದೆ, ಸ್ನಾಯುವನ್ನು
ಬೆಳೆಸುತ್ತದೆ.ಭ್ರೂಣದ  ಹಾಗೂ   ಶಿಶುಗಳ ಎಲುಬಿನ   ಬೆಳವಣಿಗೆಗೆ
ಕೋಳಿ ಮೊಟ್ಟೆಯ ಚಿಪ್ಪಿನ ಭಸ್ಮ, ಜಿಂಕೆ ಕೊಂಬಿನ ಭಸ್ಮ,(ಮೃಗ
ಶೃಂಗ ಭಸ್ಮ),ಆಡಿನ ಕೊಂಬಿನ (ಅಜ ಶೃಂಗ) ಭಸ್ಮ ಇವುಗಳ
ಬಳಕೆ ಆಯುರ್ವೆದದಲ್ಲಿದೆ. ಅರ್ಜುನಾರಿಷ್ಟದ ಬಳಕೆಯಿಂದ ಎದೆ
ಗುಂಡಿಗೆಯ ನಿರ್ವಹಣಾ ಶಕ್ತಿ (ಕ್ರೀಡಾಳು ಗಳಿಗೆ )ಹೆಚ್ಚುತ್ತದೆ.ಎದೆ
ಬಡಿತದ ಆರೋಗ್ಯಕ್ಕೆ ಮೃಗ ಶೃಂಗ (ಜಿಂಕೆ ಕೊಂಬಿನ) ಅತ್ಯುತ್ತಮ
ಔಷಧಿ. ಚಿರ ಯೌವನಕ್ಕೆ ಚ್ಯವನ ಪ್ರಾಶದಂತಹ ಔಷಧ ಪ್ರಸಿದ್ಧ.
ನರಜಾಡ್ಯದಿಂದಾಗುವ ಅಳುಕಿಗೆ .ಮೇಧ್ಯ(ಮಿದುಳಿನ ಟಾನಿಕ್ )
ಔಷಧಿ.
ಪಾಕ ಪಾತ್ರೆ-ಆರೋಗ್ಯ.
ತಾಮ್ರದ ಪಾತ್ರೆಯಲ್ಲಿ ಬೇಯಿಸಿದ ಅನ್ನ ಉಂಡರೆ ವಾತ,
ಗುಲ್ಮ, ಶೂಲ ವ್ಯಾಧಿಗಳು ದೂರ.ಆದರೆ ಪಿತ್ತ ಹೆಚ್ಚುತ್ತದೆ.
ಕಬ್ಬಿಣದ ಪಾತ್ರೆಯಲ್ಲಿ ಬೇಯಿಸಿದ ಅನ್ನ ಉಂಡರೆ ಪಾಂಡು,
ಕ್ಷಯ ರೋಗ ನಿವಾರಣೆ.
ಕಂಚಿನ ಪಾತ್ರೆಯಲ್ಲಿ ಉಂಡರೆ ಕ್ಷಯ,ಪಾಂಡು ರೋಗದ ಜತೆ
ವಿಷ ದೋಷವೂ ಪರಿಹಾರ.
ಮಣ್ಣಿನ (ಹಳದಿ ಬಣ್ಣದ )ಪಾತ್ರೆಯಲ್ಲಿ ಮಾಡಿದ ಅನ್ನ ಉಂಡರೆ
ಪಿತ್ತ ನಾಶವಾಗುತ್ತದೆ.
ಚಿನ್ನದ ಪಾತ್ರೆಯಲ್ಲಿ ತಯಾರಿಸಿದ ಅನ್ನ ಉಂಡರೆ ವಿಷದೋಷ
ಪರಿಹಾರ,ಆಮ್ಲವು ಕ್ಷಯಿಸುತ್ತದೆ,ಪಾಂಡು ರೋಗ ನಿವಾರಣೆ
ಹಾಗೂ ವಾತ ರೋಗ ದೂರವಾಗುತ್ತದೆ.
ಬೆಳ್ಳಿ ಪಾತ್ರೆಯ ಅನ್ನದ ಉಪಯೋಗದಿಂದ ಶ್ಲೇಷ್ಮ, ಪಿತ್ತ ತೊಲಗಿ
ಮಲ ವಿಸರ್ಜನೆ ಸಲೀಸಾಗುತ್ತದೆ.
ಪೂರ್ವ ದಿಕ್ಕಿಗೆ ಅಭಿಮುಖವಾಗಿ ಉಂಡರೆ ಆಯುಸ್ಸು ವೃದ್ಧಿ.
ದಕ್ಷಿಣಕ್ಕೆ ಎದುರಾಗಿ ಉಂಡರೆ ಯಶಸ್ಸು.
ಪಶ್ಚಿಮಕ್ಕೆ ಮುಖ ಮಾಡಿ ಉಂಡರೆ ಸಂಪತ್ತು ಹೆಚ್ಚಳ.
ಉತ್ತರಾಭಿಮುಖವಾಗಿ ಉಂಡರೆ ಆಡುವ ಮಾತು ಸತ್ಯವಾಗುತ್ತದೆ.
ಹೆತ್ತವರು ಇದ್ದವರು ದಕ್ಷಿಣಾಭಿಮುಖವಾಗಿ ಕೂತು ಉಣ್ಣಬಾರದು.

ಸೂಕ್ತಿ ಸೌರಭ
.
ಒಳ್ಳೆಯವರೊಂದಿಗೆ ಸಹಕಾರ ಮಾಡುವುದು ಹೇಗೆ ಕರ್ತವ್ಯವೆನಿ
ಸುವುದೋ, ಕೆಡುಕಿನೊಂದಿಗೆ ಅಸಹಕಾರ ಮಾಡುವುದೂ ಕರ್ತವ್ಯ 
ವೆನಿಸುವುದು.
ಮೂಲ:ಸಂಗ್ರಹ. 
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s