ಕನ್ನಡ ಸೌರಭ.

ಸಾಹಿತ್ಯ ಸೌರಭ.

ಹೆಂಡತಿಯನ್ನು ಪ್ರೀತಿಸುವುದು ಗಂಡನ ಧರ್ಮ;

ಅವಳಿಂದ ಆಕರ್ಷಿತನಾಗಿರುವುದು ಪ್ರಕೃತಿ ಧರ್ಮ;

ಅವಳೊಡನೆ ಸೌಜನ್ಯದಿಂದ ವರ್ತಿಸುವುದು, ಸುಖ

ವಾಗಿಟ್ಟಿರುವುದು ಮಾನವೀಯ ಧರ್ಮ; ಅದಕ್ಕಿಂತಲೂ

ಮಿಗಿಲಾದ ಧರ್ಮ ಒಂದಿದೆ. ಪತ್ನಿಯ ಬಗೆಗೆ ಒಂದು

ವಿಧದ ಭಕ್ತಿ ಭಾವವೂ ಬೇಕು. ಮನೆಗೆ ದೈವತ್ವದ ಕಳೆ

ಕೊಡುವ ದೇವತೆಯೇ ಅವಳು. ಆದ್ದರಿಂದಲೇ ಇರಬೇಕು

ನಮ್ಮವರು ಅವಳನ್ನು “ಗೃಹಲಕ್ಷ್ಮಿ” ಎಂದು ಕರೆದುದು.

—“ಧರ್ಮ ಶ್ರೀ “(ಕೃತಿ );ಲೇಖಕರು-S .L .ಭೈರಪ್ಪ.

ಗಾದೆ ಗಳು.

೧)ಕಿವುಡ ಅಟ್ಟ(ಅಡಿಗೆ ಮಾಡಿದ); ಮೂಗ ಉಂಡ.

೨)ಹಂಗಿನಾ ಅರಮನೆಗಿಂತ ಹಾಳು ಮಂಟಪ ಲೇಸು.

೩)ನಾಲಿಗೆ ಕುಲವನ್ನರುಹಿತು ಎಂಬಂತೆ.

೪)ಸುಂಟಿ ತಿಂದ ಬಾಯಿಯಲ್ಲಿ ಬಿಸಿ ನೀರು ಹಾಕಿ

ಕೊಂಡರಂತೆ.

೫)ಪಿತ್ತ ಹೆಚ್ಚಾದವನಿಗೆ ಹಾಲು ಕಹಿ.

೬)ನುಗ್ಗೆ ತೋಟಕ್ಕೆ ಗುಬ್ಬಿಯೇ ಕೋಗಿಲೆ.

೭)ಹುಣಸೇ ಹೂವೆಲ್ಲ ಕಾಯಾಗುವವೇ ?

೮)ನಾಯೀ ಬಾಲ ಹಿಡಿದು ನದಿ ದಾಟಿ ಹೋದವನ

ಹಾಗೆ.

೯)ನೀರಿಗೆ ಕಲ್ಲೆಸೆದರೆ ಅಲೆ ಬಾರದಿದ್ದೀತೆ ?

೧೦)ತುಂಬಿಗಳು ತಾವರೆಯನ್ನುಳಿದು ಎಲವದ ಹೂವ

(ಬೂರಲ ಮರದ ಹೂವು ಮಧು ರಹಿತ ಕುಸುಮ ಗಳಂತೆ)

ಬಯಸುವುದೇ ?

ಕವಿ ವಾಣಿ.

೧)ಆಗು ನೀ ನಿರಂಬಳ; ಅದೇ ನಿನ್ನ ಸಂಬಳ.

-ಬೇಂದ್ರೆ.

೨) ದೇವರೂ ಕುಡುಕ.ಚೆನ್ನಾಗಿ ಅಮಲೇರಿರುವಾಗಲೇ

ಸೃಷ್ಟಿ ಮಾಡಿದ್ದು; ಇಲ್ಲದಿದ್ದರೆ ಇಂಥಹ ವಿಚಿತ್ರವಾಗಿರ ತಕ್ಕ

ಪ್ರಪಂಚವನ್ನು ಮಾಡೋಕ್ಕೆ ಸಾಧ್ಯ ಇತ್ತೇ ?

–ರಾಮ ಕೃಷ್ಣ ಪರಮಹಂಸರು.

೩)ಗಿಡಕ್ಕೆ ಹೂವಾಗದೆ ಗೋಡೆಗೆ ಹೂವಾಗುವುದೇ?

ಹೌದು. ಒಂದೊಂದು ಸಲ ಗೋಡೆ ಬಿರಿದು ಗಿಡ ಮೇಲೆದ್ದು

ಹೂವು ಬಿಡುತ್ತದೆ.ಆಗ ಗೋಡೆಗೆ ತಾನು ಬಿರಿದದ್ದು ಸಾರ್ಥಕ

ವೆನಿಸುತ್ತದೆ.

-ಬೇಂದ್ರೆ.

೪)ಇನಿದಾದ ಮಾವಿನ ತನಿರಸವುಂಡರೂ

ಕೋಗಿಲೆಗಿಲ್ಲ ಬಡಿವಾರ.

ಹೊಂಡದ ಕೊಳಚೆಯ ನೀರನ್ನು ಕುಡಿದರೂ

ಕಪ್ಪೆಗದೆಷ್ಟು   ಟೇಂಕಾರ!

 S.V.P.

೫)ವಿಧಿಯೆದ್ದು ಒದೆವಾಗ, ನಿನಗಿದೋ ಧಿಕ್ಕಾರ!

ವೆನ್ನುವೊಡೆಮಗೆದೆಯುಂಟೆ?

ಕಮ್ಮಾರನ ಮೇಲೆ ಕೈ ಮಾಡುವಧಿಕಾರ ಕಾಸಿದ

ಕಬ್ಬಿಣಕುಂಟೆ?

-S.V.P.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s