ಕನ್ನಡ ಸೌರಭ.

ಅಧ್ಯಾತ್ಮ ಸೌರಭ.

೧)ದೇವರು ವಿಶ್ವವನ್ನು ಸೃಷ್ಟಿಸಿದನೆ? ಅಥವಾ ಮಾನವರು

ತಮ್ಮ ಕಲ್ಪನೆಯ ಮೂಲಕ ದೇವರನ್ನು ಸೃಷ್ಟಿಸಿದರೆ? ಎಂಬ

ಜಿಜ್ಞಾಸೆ ಸಹಜ.ದೇವ-ಮಾನವ ಸಂಬಂಧ ಬೀಜ ವೃಕ್ಷ

ನ್ಯಾಯದಂತೆ.ಅಗೋಚರ ಶಕ್ತಿಯೊಂದು ವಿಶ್ವವನ್ನು ಆಳುತ್ತದೆ.

ಆ ಶಕ್ತಿಯೇ ದೇವರು.

೨)ಸಮ್ಯಗ್ದರ್ಶನ=ಸಂದೇಹವಿಲ್ಲದ ನಂಬಿಕೆ.

೩)ಸಮ್ಯಕ್ ಜ್ಞಾನ=ನಂಬಿದುದನ್ನು ಚೆನ್ನಾಗಿ ತಿಳಿಯುವುದು.

೪)ಸೂರ್ಯ ಕಾಲ ಪುರುಷ; ಪುರುಷೋತ್ತಮನ ಕಣ್ಣು.ಪೂರ್ವ

ಇವನ ದಿಕ್ಕು.ಪೂರ್ವದಿಂದ ಬಂದ ಆಚಾರ ಸಂಸ್ಕೃತಿಗಳಿಗೆ

ಇವನೇ ಕಾರಣ.

೫)ಮತವೆಂಬುದು ದುರ್ಬಲ; ಮತಿಯೇ ಮುಖ್ಯ ಎಂಬ ಮಾತು

ಸನಾತನ ಅಥವಾ ಸರ್ವಕಾಲಿಕ ಸತ್ಯ.

೬)ಅಗಸೆ ಹೂವು ಶಿವನಿಗೆ ಪ್ರಿಯ.ಅಗಸೆ ಬೀಜದಲ್ಲಿ protein

ಅಂಶ ಹೆಚ್ಚು ಇದೆ.

೭)ಪಂಚ ಪರಮೇಷ್ಠಿಗಳು- ಅರ್ಹಂತರು, ಸಿದ್ಧರು, ಆಚಾರ್ಯರು,

  ಉಪಾಧ್ಯಾಯ ಮತ್ತು ಸರ್ವ ಸಾಧುಗಳು.

೮)ಸಮಾಜದಲ್ಲಿ ‘ರುದ್ರ’ವಾದುದು ಇದ್ದಂತೆ ‘ಶಿವ’ ವಾದುದೂ ಇದೆ.

ರುದ್ರನ ತಾಂಡವ ನೃತ್ಯಕ್ಕೆ ಬೆದರದೆ, ನಟರಾಜ ಶಿವನ ಲಾಸ್ಯಕ್ಕಾಗಿ

ಎದುರು ನೋಡು.

೯)ದಿನ ಬೆಳಗಾದರೆ ಸೂರ್ಯ ಉದಯಿಸುವನೆಂದು ಅವನ ದೈವಿಕತೆ

ಕಡಿಮೆಯಾಗ ಬಹುದೇ ?

೧೦)ನೂರು=ಒಂದರ ನಂತರ ಎರಡು ಸೊನ್ನೆ.ಅಂದರೆ ಜೀವನದಲ್ಲಿ

ಮಾನವ ಒಬ್ಬನೇ. ಅವನ ಪಕ್ಕ ಎರಡು ಸೊನ್ನೆ ಎಂದರೆ ಆಪ್ತರಾರಿಲ್ಲ.

ತಾನು ಏಕಾಕಿ ಎಂಬ ಸಂಕೇತ ನೂರು.

ಜಾನಪದ ಸಾಹಿತ್ಯದಲ್ಲಿ ಹೆಣ್ಣು.

೧)ಬಾಗೀಲು ಮಲ್ಲಿಗೆ ಬಾಡಿ ಹೋದಿಯಲ್ಲೇ.

ನೋಡಿ ಕುಯ್ವಾರೆ ಮಗಳಿಲ್ಲ-ಅವಳು ಗಿಡಕೊಂದು ಹೂವು ಮುಡಿದಾಳು.

(ಮಾತೃ ವಾತ್ಸಲ್ಯ.)

೨)ಒಂಭತ್ತಿಂಗಳ ನಿನ್ನ ಹೊತಕೊಂಡು ತಿರುಗೇನ;

ಹಂಬಲಿಸಿ ನಿನ್ನ ಹಡೆದೇನ-ಮಗಳೇ,

ಕೊಟ್ಟೇನ ಹೆರವರ ಕೈಯೊಳಗೆ. (ಮಾತೃ ವಾತ್ಸಲ್ಯ)

೩)ರೊಟ್ಟೀಯಾ ಕೊಟ್ಟಾರೆ ತುಪ್ಪಾವ ಬೇಡ್ಯಾಳು

ಮೇಲೆ ಏಸೆಮ್ಮೆ ಹೊಡೆದವ್ರೆ-ಎನದಿರಿ

ನಿಮ್ಮ ಕಂದಯ್ಯಗಿಕ್ಕಿದ್ಹಂಗ ಇಕ್ಕಿರವ್ವ.(ಬೀಗರಲ್ಲಿ ಮನವಿ)

೪)ಹೆಣ್ಣು ಮಕ್ಕಳ ಕಳುಹಿ ಕಣ್ಯಾಗ ನೀರ್ತಂದು

ಸಣ್ಣ ಸಲ್ಲೆ(=ಶಾಲು)ದಲೆ ಮುಸುಗ್ಹಾಕಿ-ಹಡೆದಪ್ಪ

ಹೆಣ್ಣು ಸಾಕೆಂದ ಜನುಮಕೆ.(ಪಿತೃ ವಾತ್ಸಲ್ಯ )

೫)ಹೆಣ್ಣು ಹಡೆಯಲಿಬ್ಯಾಡ; ಹೆರವರಿಗೆ ಕೊಡಬ್ಯಾಡ

ಹೆಣ್ಣು ಹೋದಾಗ ಅಳಬ್ಯಾಡ-ತಾಯವ್ವ

ಸಿಟ್ಟಾಗಿ ಶಿವನ ಬೈಬ್ಯಾಡ.

ನುಡಿ ಸೌರಭ.

೧)ಈಜು  ಮರಿಯ  ಬೇಡ; ಜೂಜು ಕಲಿಯ ಬೇಡ.

೨)ಕೀಟ ಸಣ್ಣದಾದರೂ ಕಾಟ ಬಹಳ.

೩)ಮುಪ್ಪಿಗೆ ಸಂವೇದನೆಗಳಿಲ್ಲ.

೪)ಸಂಗೀತಗಾರ ಅತ್ತರೂ ರಾಗವೇ.

೫)ಕಲ್ಲೆಸೆಯುವುದು ಹಣ್ಣಿರುವ ಮರಕ್ಕೆ ಮಾತ್ರ.

೬)ಪ್ರೀತಿಯೇ ಸೌಂದರ್ಯ.

೭)ತಿಕ್ಕಾಟವಿರಬೇಕು ;ಆದರೆ ಕಾಟ ಇರಬಾರದು.

೮)ಮುತ್ತಿನ ಹರಳು ನೀರಲ್ಲಿ ಕರಗುವುದೇ?

೯)ವಿಧೇಯತೆ ಹೇಡಿತನವಲ್ಲ.

೧೦)ಸೂರ್ಯ-

ಅ)ಎಲ್ಲರಿಗಿಂತ ಮೊದಲೇ ಎದ್ದು, ಕೋಟಿ

ಕಡ್ಡಿಗಳ ಕಸಬರಿಕೆ ಹಿಡಿದು, ಜರ್ಬಾಗಿ ಎಲೆ ಅಡಿಕೆ

ಜಗಿಯುತ್ತಾ ನಿಂತ ಜಾಡಮಾಲಿ.

ಆ)ಆಕಾಶದುದ್ದಗಲ ಕದಿರಿನ ಬಲೆ ಕಟ್ಟಿ, ಜಗದ ಜೀವ

ಕೋಟಿಯನ್ನೆಲ್ಲ ಸೆರೆಹಿಡಿದು, ಬದುಕು-ಸಾವಿನ ಆಟ

ಆಡಿಸುವ ಕೆಂಜೇಡ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s