ಮನೆಯೊಂದು ನಂದನ.

ಮನೆಯೊಂದು ಪ್ರಯೋಗಶಾಲೆ; ವಿರಾಮಧಾಮ.

ಮನೆ ರಣಾಂಗಣವಾಗಬಾರದು; ಲೀಲಾಂಗಣವಾಗಬೇಕು.

ಕುರುಕ್ಷೇತ್ರವಾಗಬಾರದು. ಧರ್ಮಕ್ಷೇತ್ರವಾಗಬೇಕು.

ಷಡ್ರಿಪುಗಳ ಆರಡಿಯು ಅಲ್ಲಿ ಸುಳಿಯದಿರಲಿ.

ಶಿಸ್ತು,ಆತಿಥ್ಯ ,ಸತ್ಕಾರ ಇರುವ ಮನೆಯು

ದೇವಾಯತನ. ಮನೆಯವರೊಡನೆ ಕೂಡಿ ನಡೆಯ

ದವನು ಸಮಾಜದೊಡನೆ ಹೇಗೆ ಸಮರಸ ವಾಗಬಲ್ಲ?

ಮನೆ ಗೆದ್ದು ಮಾರು ಗೆಲ್ಲು. ಮನೆ ಮುರುಕುತನದಿಂದ

ಮನೆ ನರಕವಾಗದಿರಲಿ. ಹವಣಿನಲ್ಲಿದ್ದ ಸೌಂದರ್ಯ,

ಅಳತೆಯರಿತ ಆತಿಥ್ಯ, ಅಳೆಯಲಾಗದಷ್ಟು ಪ್ರೇಮ,

ಕಣ್ಣಿನಲ್ಲಿ ತುಳುಕುವ ಸಮಾಧಾನ, ಸ್ವಾಗತದ ತೋರಣ,

ವಿಮಲ ಮನೋಗತದ ಓರಣ ಹೀಗೆ ಶುದ್ಧಾಂತಃಕರಣದ

ಕನ್ನಡಿ-ಪಡಿಗನ್ನಡಿಗಳ ಮಂದಿರವಾಗಿರಲಿ ಮನೆ.

ಕೈದೋಟದಲ್ಲಿಯ ಗುಲಾಬಿಯಂತೆ ಮನೆಮಂದಿಯ

ಮುಖವೆಲ್ಲ ಅರಳಿ ತನಿಗಂಪನ್ನು ಬೀರಲಿ.

ಮೂಲ:ಸಂಗ್ರಹ.

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s