ಕನ್ನಡ ಸೌರಭ.

ಚಿಂತನ-ಮಂಥನ.

೧)ಸೂರ್ಯ ಎಂಥಹ ಶಕ್ತಿ!ಕತ್ತಲನ್ನು ಬಡಿದೋಡಿಸಿ

ಅಂಧಕಾರದಲ್ಲಿ ಅಡಗಿದ್ದ ಪ್ರಕೃತಿಯ ರಮಣೀಯತೆಯನ್ನು

ಬಯಲುಮಾಡಿ, ಕವಿದಿದ್ದ ಅಜ್ಞಾನದ ಅವಕುಂಠನವನ್ನು

ಸರಿಸುವವನು. ಅವನಿರುವುದರಿಂದ ಭೂಮಿ ಸಸ್ಯ ಸಂಪನ್ನೆ;

ಜೀವ ಸಂಪನ್ನೆ. ಆದರೆ ಅವಳು ಅವನ ಹತ್ತಿರ ಎಂದೂ ಹೋಗ

ಲಾರಳು. ಏಕೆಂದರೆ ಅವನ ಪ್ರೇಮ, ಒಲವು ಪ್ರಳಯಾಂತರ

ಅವಳಿಗೆ.

೨)ಮೂಲಾಗ್ರ ಪರಿಯಂತ ಮುಳ್ಳು ಕೂಡಿದಂತ ಜಾಲಿಯ

ಮರದಂತೆ ಧರೆಯೊಳಗೆ ದುರ್ಜನರು.ಬಿಸಿಲಲ್ಲಿ ಬಂದವರಿಗೆ

ನೆರಳಿಲ್ಲ; ಹಸಿದು ಬಂದವರಿಗೆ ಹಣ್ಣಿಲ್ಲ.

೩)ಕ್ರೋಧಿಗೆ ವ್ರತವುಂಟೆ ಸಮಾಧಾನಿಗಲ್ಲದೆ?

ಲೋಭಿಗೆ ವ್ರತವುಂಟೆ ಉದಾರಿಗಲ್ಲದೆ?

೪)ಸಿಂಹವನ್ನು ಕೆಣಕುವುದೇ ನಾಯಿಗಳ ಬಳಗ.

೫)ಇರುವೆಗೆ ರೆಕ್ಕೆ ಹುಟ್ಟುವುದು ಸಾಯುವುದಕ್ಕಾಗಲ್ಲವೇ ?

೬)ಸಿಟ್ಟು ತನ್ನನ್ನು ತಿನ್ನುತ್ತದೆ; ಸೈರಣೆ ಪರರನ್ನು ತಿನ್ನಗೊಡುತ್ತದೆ.

೭)ಕುದಿವ ನೀರಿನಲ್ಲಿ ನಮ್ಮ ಪ್ರತಿಬಿಂಬ ಹೇಗೆ ಕಾಣಿಸದೋ,

ಹಾಗೆ ಕ್ರೋಧದಲ್ಲಿದ್ದಾಗ ನಮ್ಮ ಕಲ್ಯಾಣ ಎಲ್ಲಿ ಅಡಗಿದೆ

ಎಂಬುದು ತಿಳಿಯುವುದಿಲ್ಲ.

೮)ಗುಡ್ಡದ ತುದಿಯ ಒಂಟಿ ಮರವಾಗಿದ್ದರೂ ಆಗಬಹುದು;

ಗಾಳಿಗೆ ತೊನೆಯುವ ಹುಲ್ಲಾಗ ಬಾರದು.

೯)ಮನುಷ್ಯನ ಕೆಟ್ಟ ನಾಲಗೆಗಿಂತ ಮತ್ತಾವ ಆಯುಧಗಳೂ

ಹರಿತವಲ್ಲ.

೧೦)ಗಾಂಧಾರಿ ದೇವಿಗೆ ನೂರೊಂದು ಮಕ್ಕಳು;ಒಂದಕ್ಕೂ

ಸ್ವಯಬುದ್ಧಿ ಇಲ್ಲ.

ನುಡಿ ಸೌರಭ.

೧)ಸುಪ್ತ ಮನಸ್ಸಿನಲ್ಲಿ ಗುಪ್ತ ನಿಧಿ ಇದೆ.

೨)ಮೂಕನೊಡನೆಯೂ ಇದೆ ಮೂಲಿಕೆ.

೩)ರಾತ್ರಿಯೂ ನಕ್ಷತ್ರ ಸಂಪನ್ನವಾಗಿಯೇ ಬೆಳಗುವುದಲ್ಲವೇ?

೪)ಗುರುವಿಲ್ಲದ ವಿದ್ಯೆ=ಬದುಕುವ ಕಲೆ.

೫)ಮುಖಸ್ತುತಿ =ತಲೆಯಿಲ್ಲದವರು ಮುಖ ಇಲ್ಲದವರಿಗೆ

ಮಾಡುವ ಸ್ತುತಿ.

೬)ಎಷ್ಟೋ ಬಾರಿ ಗೆಲವು ಮನುಷ್ಯನಿಗೆ ಸೋಲಿನ ರೂಪದಲ್ಲಿ

ಬರುತ್ತದೆ.

೭)ಕುರೂಪಿ ಹೆಂಗಸರಿಲ್ಲ;ಸುಂದರವಾಗಿ ಕಾಣುವುದು ಹೇಗೆಂದು

ತಿಳಿಯದ ಹೆಂಗಸರು ಮಾತ್ರ ಇದ್ದಾರೆ.

೮)ಈ ಪ್ರಚಾರ ಯುಗದಲ್ಲಿ ಸದ್ದು ಮಾಡದವನು ಗುದ್ದು ತಿಂದಾನು.

೯)ಮೋಡದಂತೆ ಗುರಿಯಿಲ್ಲದೆ ಗಾಳಿಯ ತೊತ್ತಾಗಬಾರದು;

ನಿಲ್ಲಬೇಕಾದಲ್ಲಿ ನಿಲ್ಲುವ,ಉರುಳ ಬೇಕಾದಲ್ಲಿ ಉರುಳುವ

ಗೋಲವಾಗಬೇಕು ವ್ಯಕ್ತಿತ್ವ.

೧೦)ಮಾತೇ ಬುದ್ಧಿವಂತರ ಹಣದ ಪೆಟ್ಟಿಗೆ.

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s