ಆಹಾರ ಮತ್ತು ಆರೋಗ್ಯ.

ಮನುಷ್ಯ ಶರೀರದಲ್ಲಿನ ರಕ್ತ ಮತ್ತಿತರ ಸಾರ ದ್ರವಗಳಲ್ಲಿ

ಶೇಕಡಾ ೮೦ ಕ್ಷಾರತೆ ಮತ್ತು ಶೇಕಡಾ ೨೦ ಆಮ್ಲತೆ

ಇದ್ದಾಗಲೇ ಅವನು ಆರೋಗ್ಯವಂತನಾಗಿರುತ್ತಾನೆ. ಈ

ಪ್ರಮಾಣ ಹೆಚ್ಚು ಕಡಿಮೆಯಾದಲ್ಲಿ ರಕ್ತದ ಕ್ಷಾರತೆಯು

ಕಡಿಮೆಯಾಗಿ, ಅಜೀರ್ಣವು ಕ್ರಮೇಣ ಸ್ಥಾಪನೆಯಾಗಿ

ಅದರಿಂದ ಅನೇಕ ಕಾಯಿಲೆಗಳುಂಟಾಗುತ್ತವೆ.

ಆಹಾರದಲ್ಲಿ ಅಮುಖ್ಯಾನ್ನ ಅಥವಾ ಗುಣರಹಿತ(Negative )

ಮತ್ತು ಮುಖ್ಯಾನ್ನ ಅಥವಾ ಗುಣ ಭರಿತ (Positive ) ಎಂದು

ಎರಡು ಬಗೆ.

Polish ಮಾಡಿದ ಬಿಳಿಯ ಅಕ್ಕಿ,ಮೈದಾದಿಂದ ತಯಾರಿಸಿದ

Bread ,Biscuit ಇತ್ಯಾದಿಗಳು,Refine ಮಾಡಿದ ಎಣ್ಣೆ,

ಹೆಚ್ಚು ದಿನ ಇರುವಂತೆ ಮಾಡಲು ರಾಸಾಯನಿಕ ವಸ್ತುಗಳನ್ನು

ಬೆರೆಸಿದ ಡಬ್ಬದ (Tinned ) ಆಹಾರ ಪದಾರ್ಥಗಳು ಮತ್ತು

ಪಾನೀಯಗಳು , Coffee , Tea ಮುಂತಾದ ಪಾನೀಯಗಳು

ಅಮುಖ್ಯಾನ್ನದ ಗುಂಪಿಗೆ ಸೇರುತ್ತವೆ.ಇವುಗಳನ್ನೇ ಹೆಚ್ಚಾಗಿ

ಸೇವಿಸುವ ನಮಗೆ ಅನಾರೋಗ್ಯ ಉಂಟಾಗುವುದರಲ್ಲಿ

ಆಶ್ಚರ್ಯವೇನು?

ಯಾವುದು ಸ್ವಪರಿಪೂರ್ಣ (Wholesome )ವಾಗಿದೆಯೋ,

ಯಾವುದು ತಾಜಾ (Fresh )ಆಗಿದೆಯೋ ಮತ್ತು ಯಾವುದು

ಕ್ಷಾರೀಯ (Alkaline )ವಾಗಿದೆಯೋ ಅದು ಮುಖ್ಯಾನ್ನ.

ತಾಜಾ ಸೊಪ್ಪುಗಳು ಮತ್ತು ಮೂಲಿಕೆಗಳು , ಎಲ್ಲಾ ಹಸಿರು

ತರಕಾರಿಗಳು, Carrot , Beetroot ,ನವಿಲುಕೋಸು

ಇತ್ಯಾದಿ ಪಿಷ್ಟ ರಹಿತ ಕಂದಮೂಲಗಳು, ರಸಭರಿತವಾದ

ಹಾಗೂ ತಿರುಳುಳ್ಳ ಸಿಹಿ ಹಣ್ಣುಗಳು ಮತ್ತು ಮೊಳಕೆ ಕಟ್ಟಿದ

ಕಾಳುಗಳು ಇವು ಶ್ರೇಷ್ಠತೆಯುಳ್ಳ ಕೆಲವು ಮುಖ್ಯಾನ್ನಗಳು.

ಇವುಗಳಲ್ಲಿ ಹೆಚ್ಚು ಜೀವ ಸತ್ತ್ವಗಳು ಮತ್ತು ಖನಿಜ ಲವಣ

ಗಳಿರುವುದರಿಂದ ಅವು ಹೆಚ್ಚು ಸುಲಭವಾಗಿ ಜೀರ್ಣವಾಗು

ವುದಲ್ಲದೆ ಮಲವಿಸರ್ಜನೆಗೆ ಹೆಚ್ಚು ಸಹಾಯಕವಾಗಿವೆ.

ಆರೋಗ್ಯವನ್ನು ಕಾಪಾಡಿಕೊಳ್ಳಲು ಶೇಕಡಾ ೫೦ ಭಾಗ

ಮುಖ್ಯಾನ್ನ ಮತ್ತು ಶೇಕಡಾ ೫೦ ಭಾಗ ಅಮುಖ್ಯಾನ್ನವನ್ನು

ಸೇವಿಸಬೇಕು.ದೀರ್ಘ ಮತ್ತು ಮಾರಕ ರೋಗಗಳಲ್ಲಿ

ಸಂದರ್ಭಕ್ಕನುಸರಿಸಿ ಮುಖ್ಯಾನ್ನದ ಪ್ರಮಾಣವು ಶೇಕಡಾ

೮೦ ರಿಂದ ೧೦೦ ರವರೆಗೆ ಕೂಡಿರಬೇಕು.

ನಮ್ಮ ಜೀರ್ಣಾ೦ಗ ಗಳು ದಿನಕ್ಕೆ ಎರಡು ವೇಳೆ ಮಾತ್ರವೇ

ಊಟಮಾಡಿದಲ್ಲಿ ಸಮರ್ಪಕವಾಗಿ ಅದನ್ನು ಜೀರ್ಣಿಸಿ,ರಕ್ತಗತ

ಮಾಡಿ, ಕಶ್ಮಲಗಳನ್ನು ಹೊರದೂಡಬಲ್ಲವು.ವಯಸ್ಸಾದ

ಮೇಲಂತೂ ಒಂದು ಊಟ ಪ್ರಮುಖ (Principal ) ವಾಗಿದ್ದು

ಮತ್ತೊಂದು ಲಘುವಾಗಿರಬೇಕು.

ಹೊಟ್ಟೆಯ ಅರ್ಧಭಾಗವನ್ನು ಘನಾಹಾರದಿಂದಲೂ, ಕಾಲುಭಾಗ

ವನ್ನು ದ್ರವಾಹಾರದಿಂದಲೂ ತುಂಬಿ ಉಳಿದ ಕಾಲು ಭಾಗವನ್ನು

ಆಕಾಶ, ವಾಯು, ಅಗ್ನಿ ಇತ್ಯಾದಿಗಳಿಗಾಗಿ ಖಾಲಿ ಬಿಡಬೇಕೆಂದು

ಆಯುರ್ವೇದದಲ್ಲಿ ವಾಗ್ಭಟನು ತಿಳಿಸಿದ್ದಾನೆ.

ಊಟದ ಪ್ರಮಾಣವು ಸದಾ ಮಿತವಾಗಿಯೇ ಇರಬೇಕು.

ರುಚಿಕರವಾಗಿದೆಯೆಂದು ಮಿತಿಮೀರಿ ತಿಂದಲ್ಲಿ ಹೊಟ್ಟೆಯು

ಅದಷ್ಟನ್ನೂ ಸಮರ್ಪಕವಾಗಿ ಜೀರ್ಣಿಸಲಾಗದೆ, ಅದರ ಬಹು

ಭಾಗವು ಕೊಳೆತು ದೂಷಿತ ವಾಯುವಾಗಿ ಪರಿಣಾಮ ಗೊಳ್ಳುತ್ತದೆ.

ಚೆನ್ನಾಗಿ ಹಸಿವಾದಾಗಲೇ ಊಟ ಮಾಡಬೇಕು.ಮನಸ್ಸಿನ ಏರು

ಪೇರುಗಳು ಜೀರ್ಣಕ್ರಿಯೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನು

ಉಂಟು ಮಾಡುತ್ತವೆ.ಮನಸ್ಸಿನಲ್ಲಿ ಕ್ರೋಧ, ಉದ್ವೇಗ ಮುಂತಾದ

ವಿಕಾರಗಳಿರುವಾಗ ಊಟ ಮಾಡಬಾರದು.

ಮೂಲ:ಪ್ರಕೃತಿ ಆರೋಗ್ಯ ಮಾಲೆ-೮(ಲೇಖಕರು:K.B.Chikkanaaraayanappa.)

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s