ಕನ್ನಡ ಸೌರಭ.

ಸರಿಯುತ್ತರ.

೧)ಮುಪ್ಪಿನಿಂದ ನೆಲಕ್ಕೆ ಬಾಗಿದ್ದ ಮುದುಕಿಯನ್ನು

ಪರಿಹಾಸ್ಯ ಮಾಡಲು ಯುವಕ,” ಅಜ್ಜಿ, ನೆಲಕ್ಕೆ

ಬಾಗಿ ಏನನ್ನು ಹುಡುಕುತ್ತಿದ್ದಿ?” ಎಂದು ಕೇಳಿದ.

ಮುದುಕಿ,”ಮೂಢನೇ ಯೌವ್ವನ ಎಂಬ ಶ್ರೇಷ್ಠ

ಮುತ್ತನ್ನು ಕಳಕೊಂಡಿದ್ದೇನೆ. ಅದನ್ನು ಹುಡುಕು

ತ್ತಿದ್ದೇನೆ ಎಂಬುದನ್ನು ತಿಳಿದು ಕೋ ” ಎಂದಳು.

ಅಧ್ಯಾತ್ಮ ಸೌರಭ.

೨)ಶಿವನೆ, ನಿನಗೆ ಬೇಟೆಯ ಆನಂದ ಬೇಕೇ?

ಅಲ್ಲಿ ಇಲ್ಲಿ ಏಕೆ ಮೃಗಗಳನ್ನು ಹುಡುಕುತ್ತಿ?

ಬೇಕಾದಷ್ಟು ದುಷ್ಟ ಮೃಗಗಳು ನನ್ನೊಳಗೆ ಇವೆ.

ಆದಿ ಕಿರಾತನೆ,ಅವುಗಳನ್ನು ಬೇಟೆಯಾಡು .

-ಶಂಕರಾಚಾರ್ಯ.(ಶಂಕರ ಲಹರಿ)
ನುಡಿ ಮುತ್ತು.

೧)ನೆಟ್ಟಗೆ ನಿಂತವರು ತಮ್ಮ ಸೊಟ್ಟಗಿನ ನೆರಳಿಗೆ

ಅಂಜ ಬೇಕಾಗಿಲ್ಲ.

೨)ಮನುಷ್ಯರಾಗಿ ಹುಟ್ಟುವುದಕ್ಕಿಂತಲೂ ಮನುಷ್ಯರಾಗಿ

ಬದುಕುವುದು ತುಂಬಾ ಕಷ್ಟ.

೩)ದೊಡ್ಡವರು ‘ಆಡದೇ’ ಮಾಡುತ್ತಾರೆ. ಸಣ್ಣವರು

‘ಮಾಡದೇ’ ಆಡುತ್ತಾರೆ.-ಡೆಮೊಕ್ರೆಟಿಸ್.

೪)ಸಮಾಜ ಸುಂದರ ಸುಸಂಸ್ಕೃತವಾಗಿ ರೂಪು

ಗೊಳ್ಳಬೇಕಿದ್ದರೆ ನಮ್ಮ ಪೀಳಿಗೆಗೆ ಮೌಲಿಕ/ನೈತಿಕ

ಶಿಕ್ಷಣವೊಂದೇ ಪರ್ಯಾಯ.

೫)ಸಾಧಕರ ಹಿಂದೆ ಸಾಧ್ವಿಯೊಬ್ಬಳ ಸಾಹಚರ್ಯ

ವಿರುತ್ತದೆ.

ಆರೋಗ್ಯ ಚಿಂತನ.

ಹೊಟ್ಟೆಯ ಹುಣ್ಣಿನಿಂದ ಬಳಲುವವರ ನರಳಾಟಕ್ಕೆ

ಚಿಂತೆಯೇ ಕಾರಣ.ಚಿಂತಾಕ್ರೋಶದಿಂದ ಉಂಟಾಗುವ

ರಾಸಾಯನಿಕ ಬದಲಾವಣೆ ದೇಹಾರೋಗ್ಯ ಕೆಡಿಸುತ್ತದೆ.

“ಚಿಂತೆಯೆನ್ನುವ ಹಕ್ಕಿಗಳು ನಿನ್ನ ತಲೆಯ ಮೇಲೆ

ಹಾರಾಡಲಿ ಬಿಡು. ಆದರೆ ತಲೆಯ ಕೂದಲಿನಲ್ಲಿ ಗೂಡು

ಕಟ್ಟಲು ಮಾತ್ರ ಬಿಡಬೇಡ”.-ವಿನ್ಸೆಂಟ್ ಪೀಲೆ.

ಒಗಟು.

೧)ಸಾಗರ ಪುತ್ರ,ಸಾರಿಗೆ ಮಿತ್ರ.–“ಉಪ್ಪು”.

೨)ಮಳೆ ಇಲ್ಲ, ಬೆಳೆ ಇಲ್ಲ,ಮೈಯೆಲ್ಲ ಹಸಿರು.

ಎಲೆ ಇಲ್ಲ, ಸುಣ್ಣ ಇಲ್ಲ,ತುಟಿಯೆಲ್ಲ ಕೆಂಪು.

–“ಗಿಳಿ”.

ಮೂಲ:ಸಂಗ್ರಹ.

Advertisements