ಕನ್ನಡ ಸೌರಭ.

ನುಡಿ ಸಂಪದ.

ಉಂಡು ನಗದಿಹ ಮೋರೆ-ಅದು ಕಹಿಯ ಸೋರೆ.

-ಕನಕದಾಸ.

ಕಾಗೆ ಒದರಿದ್ದಕ್ಕೆ ಉತ್ತರಿಸಬಾರದು; ಏಕೆಂದರೆ

ಅದಕ್ಕೆ ಭಾಷೆ, ಅರ್ಥ ಎರಡೂ ಇಲ್ಲ.

ಅಹಿತವಾದದ್ದು,ಪ್ರಮುಖವಲ್ಲದ್ದನ್ನು ಮನಸ್ಸು

ತಾನಾಗಿ ಮರೆಯುತ್ತದೆ.

Police , Doctor ಮತ್ತು Lawyer , ”ಬರ್ತೀನಿ”

ಅನ್ಬಾರ್ದು; ”ಹೋಗ್ತೀನಿ” ಅನ್ಬೇಕು.

ಬಡವನ ಸಿಟ್ಟು ದವಡೆಗೆ ಪೆಟ್ಟು.(ನಾಣ್ಣುಡಿ).

ಖಂಡಿತವಾದಿ ಲೋಕ ವಿರೋಧಿ.(ನಾಣ್ಣುಡಿ ).

ಹರ್ಷಭರಿತವಾದ ಮನಸ್ಸು ಸಾಮಾನ್ಯವಾದ

ಆಹಾರವನ್ನೂ ಪರಮಾನ್ನವಾಗಿಸುತ್ತದೆ.

ಗುಂಡಗಿರುವ ಪ್ರಪಂಚವನ್ನು ಗೆಲ್ಲಲು

ಗುಂಡಗಿರುವ ಬುರುಡೆ(ತಲೆ) ಉಪಯೋಗಿ

ಸಬೇಕು.

ಸಂವಾದ.

(ಶೈವ) ಗುರು:ನಾಗ ಭೂಷಣಾಯ ನಮಃ (ಹರ

ಪ್ರಹ್ಲಾದ (ಹರಿ ಭಕ್ತ):ನಾಗ ಶಯನಾಯ ನಮಃ (ಹರಿ)

ಗುರು:ಪಾರ್ವತೀ ರಮಣಾಯಃ ನಮಃ

ಪ್ರಹ್ಲಾದ:ಲಕ್ಷ್ಮೀ ರಮಣಾಯಃ ನಮಃ

ಗುರು:ನಮಃ ಶಿವಾಯಃ

ಪ್ರಹ್ಲಾದ:ನಮೋ ನಾರಾಯಣಾಯಃ

ಅಧ್ಯಾತ್ಮ ಚಿಂತನ

ವೃಕ್ಷರಾಜ ಅಶ್ವತ್ಥದಲ್ಲಿ ತ್ರಿಮೂರ್ತಿಗಳ ಸಾನ್ನಿಧ್ಯವಿದೆ.

ಸೃಷ್ಟಿ,ಸ್ಥಿತಿ,ಲಯಗಳ ಸಂಕೇತವಾಗಿ ಹಿಂದೂ ಸಮಾಜ

ಈ ಮರಕ್ಕೆ ಉಪನಯನವನ್ನು ನಡೆಸುತ್ತದೆ.

ಹನಿಗವನ

೧)ನೋಡು ಬಕದ ಮೌನ

ಮಾಡುತ್ತಿಲ್ಲ ಧ್ಯಾನ

ಹೊಂಚುತಿಹುದು ಹಿಡಿಯಲೆಂದು

ಬಳಿಗೆ ಬರುವ ಮೀನ.

೨)ನನ್ನ ನಿನ್ನ ಬದುಕು ಆಗುವುದು

ಬೇಕಿಲ್ಲ ಹಾಲು-ಜೇನು;

ಆಗದಿರೆ ಸಾಕು ಬಾನು-ಭೂಮಿ

ನಾನು–ನೀನು.

ಚಿಂತನ.

ಮಹಿಳಾ ಸ್ವಾತಂತ್ರ್ಯವೆಂದರೆ ಪುರುಷರ

ಅನುಕರಣೆಯಲ್ಲ; ತನ್ನದೇ ಆದ ಸ್ವಂತಿಕೆ

ಬೆಳೆಸಿ ಕೊಳ್ಳುವುದು.–ವೈದೇಹಿ(ಲೇಖಕಿ).

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s