Is God Male Or Female?

Answers:
God doesn’t have any shape but in the form
of ‘micro-cosmic energy’. God is sexless.
-Suguna T.S.
God existed even before Adam and Eve. So no
question of male or female.
-Anupama S.
Male. Because you have to ask so many times
to get Him to do what you want.
-Karthika Sasikumar.
Depends upon whether God is creating or destroying.
-Seeta Rattan.
Obviously female because of Her unpredictability
-no one knows what will come next.
-Onkar Jain.
Female. Because God too, is always right.
-Shashank Shekhar.
Only God knows.
-Onkar Jain.
Female. Only a female can sit back and enjoy
after creating so much chaos.
Gaurav Malhotra.
Source: Collection.

Collection Of Quotes.

A strict belief in fate is the worst
kind of slavery.On the other hand,
there is comfort in the thought that
God will be moved by our prayers.
-Epicurus.
Vegetarianism scores on grounds of
morality, ecology and health.
Diplomacy is to do and say the nastiest
thing in the nicest way.
Speak to their(criminals) hearts, not
their heads.
Go to Pakistan or to Afghanistan but
don’t forget friends in Hindustaan.
A man travels the world in search of
what he needs and returns home to find it.
The wise make proverbs and fools repeat
them.
The more one looks, the more one finds
-to revive, to rediscover or dream about.
It is better to be standing on the brink
than to fall from it.
Women do not want confrontation but justice.
Source:Collection.

ಕನ್ನಡ ಸೌರಭ.

ನುಡಿ ಸಂಪದ.

ಉಂಡು ನಗದಿಹ ಮೋರೆ-ಅದು ಕಹಿಯ ಸೋರೆ.

-ಕನಕದಾಸ.

ಕಾಗೆ ಒದರಿದ್ದಕ್ಕೆ ಉತ್ತರಿಸಬಾರದು; ಏಕೆಂದರೆ

ಅದಕ್ಕೆ ಭಾಷೆ, ಅರ್ಥ ಎರಡೂ ಇಲ್ಲ.

ಅಹಿತವಾದದ್ದು,ಪ್ರಮುಖವಲ್ಲದ್ದನ್ನು ಮನಸ್ಸು

ತಾನಾಗಿ ಮರೆಯುತ್ತದೆ.

Police , Doctor ಮತ್ತು Lawyer , ”ಬರ್ತೀನಿ”

ಅನ್ಬಾರ್ದು; ”ಹೋಗ್ತೀನಿ” ಅನ್ಬೇಕು.

ಬಡವನ ಸಿಟ್ಟು ದವಡೆಗೆ ಪೆಟ್ಟು.(ನಾಣ್ಣುಡಿ).

ಖಂಡಿತವಾದಿ ಲೋಕ ವಿರೋಧಿ.(ನಾಣ್ಣುಡಿ ).

ಹರ್ಷಭರಿತವಾದ ಮನಸ್ಸು ಸಾಮಾನ್ಯವಾದ

ಆಹಾರವನ್ನೂ ಪರಮಾನ್ನವಾಗಿಸುತ್ತದೆ.

ಗುಂಡಗಿರುವ ಪ್ರಪಂಚವನ್ನು ಗೆಲ್ಲಲು

ಗುಂಡಗಿರುವ ಬುರುಡೆ(ತಲೆ) ಉಪಯೋಗಿ

ಸಬೇಕು.

ಸಂವಾದ.

(ಶೈವ) ಗುರು:ನಾಗ ಭೂಷಣಾಯ ನಮಃ (ಹರ

ಪ್ರಹ್ಲಾದ (ಹರಿ ಭಕ್ತ):ನಾಗ ಶಯನಾಯ ನಮಃ (ಹರಿ)

ಗುರು:ಪಾರ್ವತೀ ರಮಣಾಯಃ ನಮಃ

ಪ್ರಹ್ಲಾದ:ಲಕ್ಷ್ಮೀ ರಮಣಾಯಃ ನಮಃ

ಗುರು:ನಮಃ ಶಿವಾಯಃ

ಪ್ರಹ್ಲಾದ:ನಮೋ ನಾರಾಯಣಾಯಃ

ಅಧ್ಯಾತ್ಮ ಚಿಂತನ

ವೃಕ್ಷರಾಜ ಅಶ್ವತ್ಥದಲ್ಲಿ ತ್ರಿಮೂರ್ತಿಗಳ ಸಾನ್ನಿಧ್ಯವಿದೆ.

ಸೃಷ್ಟಿ,ಸ್ಥಿತಿ,ಲಯಗಳ ಸಂಕೇತವಾಗಿ ಹಿಂದೂ ಸಮಾಜ

ಈ ಮರಕ್ಕೆ ಉಪನಯನವನ್ನು ನಡೆಸುತ್ತದೆ.

ಹನಿಗವನ

೧)ನೋಡು ಬಕದ ಮೌನ

ಮಾಡುತ್ತಿಲ್ಲ ಧ್ಯಾನ

ಹೊಂಚುತಿಹುದು ಹಿಡಿಯಲೆಂದು

ಬಳಿಗೆ ಬರುವ ಮೀನ.

೨)ನನ್ನ ನಿನ್ನ ಬದುಕು ಆಗುವುದು

ಬೇಕಿಲ್ಲ ಹಾಲು-ಜೇನು;

ಆಗದಿರೆ ಸಾಕು ಬಾನು-ಭೂಮಿ

ನಾನು–ನೀನು.

ಚಿಂತನ.

ಮಹಿಳಾ ಸ್ವಾತಂತ್ರ್ಯವೆಂದರೆ ಪುರುಷರ

ಅನುಕರಣೆಯಲ್ಲ; ತನ್ನದೇ ಆದ ಸ್ವಂತಿಕೆ

ಬೆಳೆಸಿ ಕೊಳ್ಳುವುದು.–ವೈದೇಹಿ(ಲೇಖಕಿ).

ಮೂಲ:ಸಂಗ್ರಹ.

ಕನ್ನಡ ಸೌರಭ.

ಅಧ್ಯಾತ್ಮ ಚಿಂತನ.

ಜ್ಞಾನ ಒಂದು ಕಾಲಕ್ಕಾಗಲೀ, ಜನಾಂಗಕ್ಕಾಗಲೀ

ಸೀಮಿತವಲ್ಲ.ಕ್ರಿ.ಪೂ.೬೦೦ರ ದಶಕದಲ್ಲಿ ಕಪಿಲ

ಮುನಿಗಳು ಬರೆದಿಟ್ಟಿರುವ ಶಾಸ್ತ್ರದಲ್ಲಿ ಮನುಷ್ಯನ

ಜೀವಾಣುಗಳ ವಿವರ ಸವಿಸ್ತಾರವಾಗಿದೆ. ಆಗಿನ

ಸುಜ್ಞಾನ ನಮ್ಮ ವಿಜ್ಞಾನದಿಂದ ತುಂಬಾ ಮುಂದು

ವರಿದಿತ್ತು.

ಕಪಿಲ ಮುನಿಗಳು-ನಮ್ಮ ಎಲ್ಲಾ ರೋಗಗಳಲ್ಲಿ ಬೀಜ

(chromosome) ಅಥವಾ ಬೀಜ ಭಾಗ (genes)

ಗಳ ಪಾತ್ರ ಖಂಡಿತ ಇದೆಯಾದರೂ ಮನುಷ್ಯನ ”ದುಃಖ

ತ್ರಯ”ಗಳಿಗೆ (ಅಧ್ಯಾತ್ಮಿಕ,ಆಧಿಭೌತಿಕ ಹಾಗೂ ಆಧಿದೈವಿಕ)

ಬೀಜ ಮಾತ್ರ ಕಾರಣವಲ್ಲ ವೆಂದೂ ಪರಿಸರ ಹಾಗೂ ಮನಸ್ಸಿನ

ಪಾತ್ರವಿದೆ- ಎಂದೂ ಒತ್ತಿ ಹೇಳಿರುವರು.

ಮನಸ್ಸಿನಲ್ಲಿ ಪ್ರೀತಿ,ವಾತ್ಸಲ್ಯ ಕೂಡಿಕೊಂಡರೆ ರಾಕ್ಷಸ ಜೀವಾಣುಗಳು

ತಮ್ಮ ಪರಾಕ್ರಮ ತೋರಿಸಲಾರವು.

ಪ್ರೊ| ಬಿ.ಎಂ.ಹೆಗ್ಡೆ.

ಸೂಕ್ತಿ.

”ಒಂದು ಹೆಣ್ಣಿನಿಂದಾಗಿ ಗಂಡು ತಲೆ ಎತ್ತಿ ತಿರುಗುವಂತಾಗಬೇಕು

ಹೊರತು ತಲೆ ತಗ್ಗಿಸುವಂತಾಗಬಾರದು.”

ಮೂಲ:ಸಂಗ್ರಹ.

Love Your Body.

Body is the temple where the soul resides in;
respect it. It is God’s gift to you; if you
cannot improve it, at least maintain it.
You are what you eat. Junk food, unhealthy and
stale food can only generate anger, conceit
and below average, garbage thoughts.
Osho says it beautifully:”the body is your
friend; it is not your enemy. Listen to it’s
language, decode it’s language, enter into
the books of the body and turn its pages;
you will become aware of the whole mystery
of life.”
Sedentary life style harbours negative
thoughts and boredom.
Eat right food, behave right and think right.
Explanations are given that, the soul we carry
in our next life and the perishable body we
leave behind. However, purifying the soul just
by sitting and praying blindly is harped.
Love your body and feel good.
Source:Collection.

ಕನ್ನಡ ಸೌರಭ.

ಚಿಂತನ-ಮಂಥನ.

”ಬಚ್ಚಿಟ್ಟ ಸಂಪತ್ತನ್ನು ಬಹಿರಂಗ ಪಡಿಸುವಲ್ಲಿ ರಾಜಕಾರಣಿಗಳು

ವಿಫಲರಾಗಿದ್ದಾರೆ. ಬಚ್ಚಿಟ್ಟ ಮಾನವೀಯತೆಯನ್ನು ಹೊರತೆಗೆ

ಯುವಲ್ಲಿ ಧರ್ಮಕಾರಣಿಗಳು ಅಸಮರ್ಥರಾಗಿದ್ದಾರೆ.

ಧರ್ಮಕಾರಣ, ರಾಜಕಾರಣ ಸಾಹಿತ್ಯಕ್ಕೆ ಅನಿವಾರ್ಯ.

ಧರ್ಮಕಾರಣ ತೂಕ ನೀಡಿದರೆ ರಾಜಕಾರಣ ಪ್ರಚಾರ

ನೀಡುತ್ತದೆ.ಸಾಹಿತ್ಯ ಕಾಗೆಗಳು ಮೀಯುವ ಕೊಳಕು

ನೀರಾಗ ಬಾರದು. ಹಂಸಗಳು ಮೀಯುವ ಮಾನಸ

ಸರೋವರದಂತೆ ನೀತಿ ನಿಯಮಗಳನ್ನು ಉತ್ತೇಜಿಸು

ವಂತಿರಬೇಕು.”

–ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ.

”ತನ್ನ ದುಃಖವೇ ತನಗೆ ನರಕ.”

”ರಾಮ, ರಾಮಾ” ಎಂದು ಪ್ರಾರ್ಥಿಸಿದಾಗ ಕಣ್ಣೀರನ್ನು

ಒರೆಸುತ್ತಾನೆ. ಹಾಗಿಲ್ಲದೆ, ವಿಷಯ ಸುಖಗಳತ್ತ ಮನಸ್ಸು

ಹರಿಸಿದಾಗ ಅವನೇ ಕಣ್ಣೀರು ತರಿಸುತ್ತಾನೆ.

ಮಾತಾ ಪಿತರಿಗೆ ಕೃತಜ್ಞರಾಗಿರಬೇಕಾದುದು ಮಕ್ಕಳ

ಧರ್ಮ. ನಿಮ್ಮ Food ,Blood ,Head , ದುಡ್ಡು

ಎಲ್ಲವೂ ಅವರ ಕೊಡುಗೆ.

ನುಡಿ ಸೌರಭ.

”ಕತ್ತಲಲ್ಲಿ ಕರಿಮಣಿ ಹುಡುಕಿದ ಹಾಗೆ.”

”ಕೆಂಡಕ್ಕೆ ಇರುವೆ ಮುಟ್ಟುವುದೇ?”

”ಕಲೆಗೆಲ್ಲಿಯ ವೈಕಲ್ಯ?”

”ದುಡಿಮೆಗೆ ದಾರಿ ಹಲವು.”

”ವೇಗದ ಆವೇಶ, ಸ್ಮಶಾನಕ್ಕೆ ಪ್ರವೇಶ.”

”ಕೈಯಲ್ಲಿರುವ ಎಲೆ ಅಡಿಕೆಯನ್ನು ಕೊಟ್ಟು

ಬೇರೆಯವರ ಬಾಯಲ್ಲಿರುವ ತಾಂಬೂಲಕ್ಕೆ

ಕೈಯೊಡ್ಡಿದಂತೆ.”

ಮೂಲ:ಸಂಗ್ರಹ.

ಜೈಹನುಮಾನ್ .

ಹನುಮಾನ್ ಅರ್ಥಾತ್ ಮುಖ್ಯಪ್ರಾಣ ದೇವರು

೭೨,೦೦೦ ನಾಡಿಗಳ ಮೂಲಕ ನಮ್ಮ ದೇಹದಲ್ಲಿ

ಅಂತರ್ಗತನಾಗಿದ್ದು, ಅವಸಾನಕಾಲದಲ್ಲಿ ನೆತ್ತಿಯನ್ನು

ಸೀಳಿಕೊಂಡು ಜೀವನನ್ನು ಮೇಲಿನ ಲೋಕಕ್ಕೆ ಒಯ್ಯುತ್ತಾನೆ.

ಪಾಪಿಗಳಾಗಿದ್ದಲ್ಲಿ ನಮ್ಮನ್ನು ಕೆಳಗಿನ ಲೋಕಕ್ಕೆ ಒಯ್ಯುತ್ತಾನೆ.

ವಿಷ್ಣುಸಹಸ್ರನಾಮದಲ್ಲಿ ಇರುವ ಅಕ್ಷರಗಳು ೭೨,೦೦೦.

ಹನುಮಾನ್ ಶ್ರೀ ರಾಮನ ದೂತ. ಅವನು ಹುಟ್ಟಿದ ದಿನ

ಚಿತ್ರಾ ಪೂರ್ಣಿಮೆ. ಅವನ ಕಾರ್ಯ ನಿಷ್ಠೆ ಅನುಪಮ.

ಹರಿಯುವ ನೀರು ಬಂಡೆಕಲ್ಲು ಅಡ್ಡ ಬಂದರೆ ಹಿಂದೆ ಸರಿಯುವುದೇ?

ಇದಿರಾದ ಕಲ್ಲುಗಳ ಸಂದು ಗಳಲ್ಲಿ ನುಸುಳಿ ಮುಂದಕ್ಕೆ ಹರಿಯು

ವುದಿಲ್ಲವೇ? ಹನುಮಾನ್ ಕೂಡ ಅಡೆ ತಡೆ ಗಳನ್ನು ಲೆಕ್ಕಿಸದೆ

ಲಂಕಿಣಿಯನ್ನು ಸಂಹರಿಸಿ ಲಂಕೆಯನ್ನು ಪ್ರವೇಶಿಸುತ್ತಾನೆ.

ಪ್ರತಿಯೊಂದು ಮನೆಯನ್ನೂ ಪರೀಕ್ಷಿಸುತ್ತಾ ಸೀತೆಯನ್ನು

ಹುಡುಕುತ್ತಾನೆ.ವಾಯುದೇವರ ಪುತ್ರ ಹನುಮಾನ್ ಗೆ

ಸೀತೆಯನ್ನು ಹುಡುಕುವುದು ಅಸಾಧ್ಯವೇನಲ್ಲ. ಆದರೆ

ಸ್ವಾಮಿಕಾರ್ಯವನ್ನು ಶ್ರಮವಹಿಸಿ ಮಾಡಿದಾಗ ಮಾತ್ರ

ಭಕ್ತಿಯು ಸಾರ್ಥಕ. ಸೀತೆಯನ್ನು ಹುಡುಕಿ ಶ್ರೀ ರಾಮನ

ಉಂಗುರ ತಲುಪಿಸಿದ ಬಳಿಕ ಅಶೋಕವನವನ್ನು ಹಾಳು

ಗೆಡವುತ್ತಾನೆ. ದೂತನ ಸಾಹಸಕ್ಕೆ ಬೆದರಿದ ರಾವಣ ತನ್ನ

ಮಗ ಅಕ್ಷಕುಮಾರನನ್ನು ಕಳುಹಿಸುತ್ತಾನೆ. ಮನುಷ್ಯ ಮೊದಲು

ಪ್ರೀತಿಸುವುದು ತನ್ನನ್ನು;ನಂತರ ತನ್ನವರನ್ನು. ಅಂತೆಯೇ

ರಾವಣ ತಾನು ಸಾಯಲು ಇಷ್ಟವಿಲ್ಲದೆ ಮಗನನ್ನು ಕಳುಹಿಸುತ್ತಾನೆ.

ಹನುಮಾನ್ ಅಕ್ಷ ಕುಮಾರನನ್ನು ಸಂಹರಿಸುತ್ತಾನೆ.ರಾವಣ

ಹನುಮಾನ್ ನ ಬಾಲಕ್ಕೆ ಬಟ್ಟೆ ಸುತ್ತಿ ಬೆಂಕಿಹಚ್ಚಿದಾಗ ಅಗ್ನಿಯ

ಸಹಕಾರದಿಂದ ಇಡೀ ಲಂಕೆಗೆ ಬೆಂಕಿ ಹಚ್ಚುತ್ತಾನೆ.

ವಾಯು ಮೇಲಿನ ದೇವತೆ.ಅಗ್ನಿ ಕೆಳಗಿನ ದೇವತೆ.

ಕೆಳಗಿನ ದೇವತೆಗೆ ಮೇಲಿನ ದೇವತೆಯನ್ನು ನಾಶ

ಪಡಿಸಲು ಸಾಧ್ಯವಾಗದು.

ಇದು ಉಡುಪಿಯ ಶ್ರೀ ಕೃಷ್ಣಮಂದಿರದಲ್ಲಿ ಹನುಮಜ್ಜಯಂತಿ

ದಿನ (ಮಾರ್ಚ್ ತಾ|೬ ರಂದು) ನಾನು ಕೇಳಿದ ಪ್ರವಚನದ
ಕೆಲವು ಅಂಶಗಳು.
ವಾಣಿ ಹೆಗ್ಡೆ.