ಕನ್ನಡ ಸೌರಭ.

ಅಧ್ಯಾತ್ಮ ಚಿಂತನ.
ವಿಜ್ಞಾನದೊಂದಿಗೆ ಅಧ್ಯಾತ್ಮಿಕತೆಯ ಸಮನ್ವಯವಾದಾಗ

ಜಗತ್ತು ಪಾರಾಗಲು ಸಾಧ್ಯ.ಏಕೆಂದರೆ ವಿಜ್ಞಾನವು ವಿನಾಶ

ಕಾರಿಯಾದ ಭಯಂಕರ ಸಾಧನಗಳನ್ನು ನೀಡಿದ್ದು, ಅದರ

ದುರುಪಯೋಗವನ್ನು ಅಧ್ಯಾತ್ಮಿಕತೆಯಷ್ಟೇ ತಡೆಯಬಲ್ಲದು.

–ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ.
ಈ ಕಲಿಕಾಲದಲ್ಲಿ ದೇವರು ಶಂಖ, ಚಕ್ರ, ಕಿರೀಟಧಾರಿ

ಯಾಗಿ ಪ್ರತ್ಯಕ್ಷನಾಗುವುದಿಲ್ಲ.ಬದಲಾಗಿ ಯಾವುದೋ

ರೂಪದಲ್ಲಿ, ಕಷ್ಟದಲ್ಲಿರುವ ಭಕ್ತರಿಗೆ ಯಾವುದೋ ಒಂದು

ದಾರಿ ತೋರಿ ತೋರಿಸುತ್ತಾನೆ.
”ಇತರರ ಒಳ್ಳೆಯ ಗುಣಗಳನ್ನು ತಲೆಯ ಮೇಲೆ

(ಚಂದ್ರನಂತೆ) ಇರಿಸಿಕೊಂಡು ಎತ್ತಿ ತೋರಿಸುವುದು

ಹಾಗೂ ದೋಷಗಳನ್ನು ಕಂಠದಲ್ಲಿಯೇ(ವಿಷದಂತೆ)

ನುಂಗಿಟ್ಟುಕೊಂಡು ಸಮಾಜದ ಹಿತವನ್ನು ಸಾಧಿಸ ಬೇಕು.”

ಇದುವೇ ಶಿವನು ಜಗತ್ತಿಗೆ ನೀಡುವ ಸಂದೇಶ.

ಚಂದ್ರನಲ್ಲಿ ಕಲಂಕವಿಲ್ಲ.

ಲೋಕದ ಅಂಧಕಾರವನ್ನು ನುಂಗಿದುದರಿಂದ ಉಂಟಾದ

ಕಲೆಯದು–ಲೋಕದ ವಿಷವನ್ನೆಲ್ಲ ನುಂಗಿದ ವಿಷಕಂಠ(ಶಿವ)

ನಂತೆ–ಚಂದ್ರನ ಕಲೆ ಕಲಂಕವಲ್ಲ.

ಮೂಲ:ಸಂಗ್ರಹ.

ವಿಚಾರ ಸಂಪದ.

ಹಾಸ್ಯ ಪ್ರಜ್ಞೆಯಿಲ್ಲದ ವ್ಯಕ್ತಿ ಮೂಲಭೂತವಾದಿಯಾಗುತ್ತಾನೆ.

ಯಾತನೆ ಹೇಳಿಕೊಂಡು ವಾತಾವರಣ ಹುಳಿಯಾಗಿಸುವ

ಬದಲು ಜೀವನದ ಸಿಹಿ ಹಂಚಿಕೊಳ್ಳುವ ಹಾಸ್ಯ ಮನೋಧರ್ಮ

ಬೆಳೆಸಿಕೊಳ್ಳಬೇಕು.
ಓದುಗರಿಗೆ ಶೀಘ್ರ ಮಾಹಿತಿ ನೀಡುವುದು ಎಷ್ಟು ಮುಖ್ಯವೋ,

ಸರಿಯಾದ ಮಾಹಿತಿ ನೀಡುವುದೂ ಅಷ್ಟೇ ಮುಖ್ಯ.ಮಾಹಿತಿ

ನಿಷ್ಕೃಷ್ಟವಾಗಿರಬೇಕಾದರೆ ಮೂಲದಲ್ಲೇ ಅದು ವಿಕೃತಿಗೊಳ್ಳ

ದಂತೆ ನೋಡಿಕೊಳ್ಳಬೇಕು.ಗಂಗೆಯ ಉಗಮಸ್ಥಾನ ಗಂಗೊತ್ರಿಯೇ

ಕಲುಷಿತಗೊಂಡರೆ ಏನಾದೀತು?ಸಾಮಾಜಿಕ ಪರಿವರ್ತನೆಗೆ

ಮಾಹಿತಿ ಪ್ರಮುಖ ಆಯುಧ.

–ಅಟಲ್ ಬಿಹಾರಿ ವಾಜಪೇಯಿ.
ನಿಮಗೆ ಗೊತ್ತೇ?

ನಾರದ ಹೆಣ್ಣಾಗಿ,ವಿಷ್ಣು ಗಂಡಾಗಿ ಅವರ ದಾಂಪತ್ಯದಲ್ಲಿ

೬೦ ವರ್ಷಗಳಲ್ಲಿ ವರ್ಷಕ್ಕೊಂದರಂತೆ ಹುಟ್ಟಿದ ಮಕ್ಕಳ

ಹೆಸರೇ ೬೦ ಸಂವತ್ಸರಗಳು.
ಹನಿಗವನ.

ಅಂತರ.

ಮದುವೆಗೆ ಮುಂಚೆ–

ಗಂಡಿಗೆ ಮಾತಾಡುವ ತೆವಲು!

ಹೆಣ್ಣಿಗೆ?ಹೊರಸೂಸುವ ನಗೆಹೊನಲು!

ಅನಂತರ?ಛೂ ಮಂತ್ರ!

ಗಂಡಿನ ಗುಂಡಿಗೆ ಒಮ್ಮೆಲೇ ಸ್ತಬ್ಧ!

ಹೆಣ್ಣಿನ ಬಾಯಿಗೆ ಬಿಡುವಿಲ್ಲದ ಶಬ್ದ!

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s