ಕನ್ನಡ ಸೌರಭ.

ಗಾದೆ
೧)ಭಾಗ್ಯ ಬಂದಾಗ ಬೀಗ ಬೇಡ.
೨)ಕಳ್ಳನ ಕೈಗೆ ಗಂಟು ಕೊಟ್ಟ ಹಾಗೆ.
೩)ಗೊತ್ತಿದ್ದರೆ ಮದ್ದು;ಇಲ್ಲದಿದ್ದರೆ ಸೌದೆ.
(ತೆಲುಗು ಗಾದೆ)
೪)ಕೊನೆಯ ಮಗನಿಗೆ ಮೊಂಡಾಟ ಹೆಚ್ಚು.
೫)ನೆನಪು ಶಕ್ತಿ ಇಲ್ಲದವನು ಸುಳ್ಳು ಹೇಳ ಬಾರದು.
೬)ಏರುವುದಕ್ಕಿಂತಲೂ ಜಾರುವುದು ಬೇಗ.
೭)ಬೀಡಿಯ ಹೊಗೆ ಎದೆಗೆ ಯಾವತ್ತೂ ಹಗೆ.
೮)ರುಚಿ ಬೇರೆಬೇರೆಯಾದರೂ ನಾಲಗೆ ಒಂದೇ.
೯)ದುಡಿದು ತಿನ್ನ ಬೇಕು.ತಿಳಿದು ಹೇಳಬೇಕು.
೧೦)ತಾಯಿಯೇ ಸತ್ಯ;ತಂದೆಯೇ ನಂಬಿಕೆ.
ಚಿಂತನ.
೧)ಜೀವನವೆಂದರೆ ಬಣ್ಣವಿಲ್ಲದ ಚಿತ್ರ.ನಮಗೆ
ಬೇಕಾದಂತೆ ನಾವು ಬಣ್ಣವನ್ನು ತುಂಬಬಹುದು.
೨)ಬದುಕು ಬಿಸಿ ಕಾವಲಿ ಮೇಲಣ ನೀರ ಹನಿಯಂತೆ.
ಇರುವಷ್ಟೂ ಸಮಯ ಕುಣೀತೇವೆ. ಕುಣೀತಲೇ
ಮಾಯವಾಗುತ್ತೇವೆ .
ಮೂಲ:ಸಂಗ್ರಹ.

Advertisements