ಕನ್ನಡ ಸೌರಭ.

ಮನಸ್ಸಿನ ಹದ.
ಹಾಲು ಹೆಚ್ಚು ಕುದಿಸಿದಾಗ ಉಕ್ಕುತ್ತದೆ.
ಕಡಿಮೆ ಕುದಿಸಿದರೆ ವಾಸನೆ ಬರುತ್ತದೆ.
ಕೆದಕಿದರೆ ಒಡೆಯುತ್ತದೆ. ಸೂಕ್ಷ್ಮ ಅದರ ಹದ.
ಹಾಗೆಯೇ ಮನಸ್ಸಿನ ಹದವನ್ನೂ ಕಾಪಾಡಿ
ಕೊಳ್ಳಬೇಕು.-ಡಾ.ರಮೇಶ್ ಹೆಬ್ಬಾರ್.
ದುಡ್ಡಿನ ಮದ.
ಒಂದು ಕಪ್ಪೆಗೆ ಒಂದು ರೂಪಾಯಿ ನಾಣ್ಯ ಸಿಕ್ಕಿತು.
ಅದನ್ನು ತನ್ನ ಬಿಲದಲ್ಲಿ ಭದ್ರವಾಗಿ ಇಟ್ಟು ಕೊಂಡಿತು.
ಒಂದು ದಿನ ಒಂದು ಆನೆ ಆ ಬಿಲವನ್ನು ದಾಟಿ
ಹೋಗುತ್ತಿತ್ತು. ಆಗ ಕಪ್ಪೆ ಕೋಪದಿಂದ ಬಿಲದ ಹೊರಕ್ಕೆ
ಬಂದು ತನ್ನ ತೊಡೆ ತಟ್ಟುತ್ತ ಆನೆಯನ್ನು ಗದರಿಸಿತು:
”ಏ ಆನೆ,ಏನಿದು? ನನ್ನ ಬಿಲ ದಾಟಿ ಹೋಗುವಷ್ಟು
ಪೊಗರೇ ನಿನಗೆ!” ಎಂದು.
-ಶ್ರೀ ರಾಮಕೃಷ್ಣ ಪರಮಹಂಸರು.
ನಿಮಗೆ ಗೊತ್ತೇ?
೧)ಕಲಾವಿದ Michael Angelo ಚರ್ಚ್ ನ ಮೇಲೆ
ಉಯ್ಯಾಲೆ ಕಟ್ಟಿ ಮಲಗಿ ಕೆಲವು ವರ್ಷಗಳ ಕಾಲ
ಚಿತ್ರ ಬರೆದ.ಅನಂತರ ಬದುಕಿನಾದ್ಯಂತ ಬೆನ್ನು
ನೋವಿನಿಂದ ನರಳಿ ಅಂಗವಿಕಲನಾದ.
೨)ಮೇಲುಕೋಟೆ=ದಕ್ಷಿಣದ ಬದರಿ.ಖ್ಯಾತ ಕವಿ ಪು.ತಿ.ನ.
ಮತ್ತು ಖಾದ್ರಿ ಶಾಮಣ್ಣ ಹಾಗೂ ತಮಿಳ್ನಾಡಿನ ಮುಖ್ಯ
ಮಂತ್ರಿ ಜಯಲಲಿತಾ ಸೇರಿದಂತೆ ಹಲವಾರು ದಿಗ್ಗಜಗಳು
ಜನಿಸಿದ ಊರು ಮೇಲುಕೋಟೆ.ಹಾಳುಬಿದ್ದ ಮೇಲುಕೋಟೆ
ಯನ್ನು ಉದ್ಧರಿಸಲು ರಾಮಾನುಜರಿಗೆ ನೆರವಾದವರು
ಹರಿಜನರು.ಜಾನಪದ ಸಂಸ್ಕೃತಿ ಇಂದು ಉಳಿದಿರುವುದೇ
ಹರಿಜನರಲ್ಲಿ.
೩)ರಾಜಗಿರ್(ಬಿಹಾರ)ದಲ್ಲಿ ಚರ್ಮರೋಗಗಳನ್ನು ಗುಣಪಡಿ
ಸುವಂತಹ ಬಿಸಿನೀರಿನ ಬುಗ್ಗೆ ಗಳಿವೆ.
೪)ಮೊಳ=cubit ;ಗೇಣು=span ;ಗಜ= yard;ಅಡಿ=ruler; ;
ಅಂಗುಲ=inch.
ನಗೆ ಹನಿ.
”ನನ್ನ ಕಾವ್ಯ ರಸ ನಿರ್ಭರ.”-ಕವಿ.
”ಅಲ್ಲ ಎಂದವರಾರು? ರಸಗೊಬ್ಬರ!”-ವಿಮರ್ಶಕ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s