ನಿಮಗೆ ಗೊತ್ತೇ?

೧)ನಮ್ಮಲ್ಲಿನ ಹಿಮಾಲಯ ಸಂಸ್ಕೃತಿಯ ಆಯುರ್ವೇದದಂತೆ
Brazil ನ amazon (tropical rainforest ) ಆಶ್ರಯದ
ಗಿಡಮೂಲಿಕೆಗಳನ್ನು ಆಧರಿಸಿದ Phytotherapy ಎಂಬ
ಪ್ರಾಚೀನ ವೈದ್ಯಶಾಸ್ತ್ರವಿದೆ.
೨)ಏಲಕ್ಕಿ ಬೆಳೆ ಹೆಚ್ಚಿಸಲು ಜೇನುದುಂಬಿಗಳ ನೆರವು
ಮಹತ್ತ್ವದ್ದು.
೩)ಹೊಂಗೆಮರ ಪರಿಸರ ರಕ್ಷಣೆಗೆ ಪೂರಕ.
೪)ತಂಬಾಕನ್ನು ಬಿಳಿನೊಣ, ಸಸ್ಯ ಹೇನುಗಳ ಹತೋಟಿ
ಯಲ್ಲಿ ಬಳಸಲಾಗುತ್ತದೆ.
೫)ಸೇವಂತಿಗೆ, ಅನನಾಸು,ಸೀತಾಫಲ ಸಸ್ಯಗಳಲ್ಲಿ
ಸಸ್ಯಜನ್ಯ ಕೀಟನಾಶಕ ವಿಷವಸ್ತುಗಳಿವೆ.
೬)ಕಾಫಿ ಗಿಡದ ಬುಡಕ್ಕೆ citronella ಹುಲ್ಲನ್ನು ಕಟ್ಟಿ
ಇರುವೆಗಳಿಂದ ರಕ್ಷಣೆ ಒದಗಿಸುತ್ತಾರೆ.
೭)ಬೇವನ್ನು ಸೋಪು, ಚರ್ಮರೋಗಕ್ಕೆ ಮುಲಾಮು,
Toothpaste ಮುಂತಾದುವುಗಳ ತಯಾರಿಕೆಯಲ್ಲಿ,
ಮತ್ತು ದಂತಕ್ಷಯ ನಿವಾರಣೆಗೆ ಹಾಗೂ ಕಾಮಾಲೆ
ರೋಗದ ಚಿಕಿತ್ಸೆಯಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ.
೮)ಕ್ಷಯರೋಗದಿಂದ ನರಳುತ್ತಿರುವ ಆಕಳಿನ ಹಾಲು
ಕುದಿಸದೆ ಅಥವಾ ಆ ಹಾಲಿನಿಂದ ತಯಾರಿಸಲ್ಪಟ್ಟ
ಮೊಸರು, ತುಪ್ಪವನ್ನು ಸೇವಿಸಿದರೆ ನಮಗೂ ಆ ರೋಗ
ಬರುವುದು.
೯)ಜಲಭಯ ರೋಗವನ್ನು ಉಂಟುಮಾಡುವ ನಂಜು
ಪದಾರ್ಥ ಸಾಮಾನ್ಯವಾಗಿ ನಾಯಿ ಮತ್ತು ಬೆಕ್ಕಿನ
ಜೊಲ್ಲಿನಲ್ಲಿದೆ. ಮಾನವನು ಈ ಪ್ರಾಣಿಗಳಿಂದ ಕಡಿಯ
ಲ್ಪಟ್ಟರೆ ಅಥವಾ ಮಾನವನ ತೆರೆದ ಘಾಯವನ್ನು ನಾಯಿ
ಅಥವಾ ಬೆಕ್ಕು ನೆಕ್ಕಿದರೆ, ಆ ನಂಜು ಪದಾರ್ಥ ನಮ್ಮ
ಶರೀರವನ್ನು ಸೇರುವವು.Anti Rabies injection
ತಕ್ಷಣ ತಗೊಂಡರೆ ಈ ರೋಗವನ್ನು ನಿಯಂತ್ರಿಸಬಹುದು.
೧೦)ಬೇವು ಕೀಟನಾಶಿನಿ ಅಲ್ಲ;ಕೀಟಗಳಿಗೆ ಸುಗ್ರಾಸ.
ಸಾಗರ ಕಾಷ್ಠ ಕೀಟಗಳ ದಾಳಿಯನ್ನು ಬೇವಿನ ಹಲಗೆ
ಎದುರಿಸಲಾರದು.ಬೇವಿನ ಮರದೊಳಗಿರುವ ಬಯೋ ಸೈಡ್ (biocide)
ರಾಸಾಯನಿಕವು ಕೀಟಗಳಿಗೆ ವಿಷದಂತೆ ವರ್ತಿಸುವ ಬದಲು
ಸುಗ್ರಾಸವಾಗಿದೆ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s