ಕನ್ನಡ ಸೌರಭ.

ಚಿಂತನ-
೧)ನೋವಿಲ್ಲದ ಮನಸ್ಸು ಶಬ್ದವನ್ನು ಮಾಡ ಬಹುದೇ ಹೊರತು
ಧ್ವನಿಯನ್ನು ಮೂಡಿಸುವುದಿಲ್ಲ.
೨)”ನಿನ್ನೆ” ಇಂದಿನ ನೆನಪು; ”ನಾಳೆ” ಇಂದಿನ ಕನಸು.
-ಖಲೀಲ್ ಗಿಬ್ರಾನ್.
೩)ಚಿಂತೆ ಬೇಡ; ಚಿಂತನೆ ಮಾಡಿ.
೪)ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಉತ್ತಮ ಸಂವಹನ
ಕಲೆ (communication )ಮುಖ್ಯ.
೫)ಬೈಗುಳಕ್ಕೆ ಕಾರಣ-ಸಿಟ್ಟು,ಅಸಹನೆ,ಕೆಲಸದ ಒತ್ತಡ,ಖಿನ್ನತೆ,
ವಿರಸ, ಅಸೂಯೆ,ಈರ್ಷ್ಯೆ ಹಾಗೂ ಮಾನಸಿಕ ಅಸ್ವಸ್ಥತೆ.
ಸಾಮಾಜಿಕ, ಆರ್ಥಿಕ ಅಸಮಾನತೆ ಕೂಡ ಸ್ಥಾನ ಪಡೆಯುತ್ತದೆ.
ಸುಭಾಷಿತ-
ವಿನಯದಲ್ಲಿ ಇರುವೆಗಿಂತ ಚಿಕ್ಕವನಾಗಿರು.ಕರ್ತವ್ಯದಲ್ಲಿ
ಎರೆಹುಳುವಿಗಿಂತ ಉಪಕಾರಿಯಾಗು.(ಝೆನ್ ವಿಚಾರ ಧಾರೆ)
ನಗೆ ಗುಳಿಗೆ-
ಪ್ರ:ವಾರದ ಯಾವ ದಿನವನ್ನು ಕಂಡರೆ ಮೀನಿಗೆ ಆಗುವುದಿಲ್ಲ?
ಉ:”Fry Day .”
ಗೃಹಸ್ಥ: ಮನೆ ಮನೆಗೆ ಬಂದು ಭಿಕ್ಷೆ ಬೇಡಲು ನಿನಗೆ ನಾಚಿಕೆ
ಆಗೋದಿಲ್ವೇ?
ಭಿಕ್ಷುಕ:ನಾಚಿಕೆ ಆಗುತ್ತೆ.ಆದ್ರೆ ಏನು ಮಾಡಲಿ? ನನ್ನ ಮನೆಗೇ
ಬಂದು ಭಿಕ್ಷೆ ಹಾಕಿ ಅಂತ ಹೇಳಿದ್ರೆ ಯಾರೂ ಒಪ್ಪೋಲ್ಲ.
ಅಧ್ಯಾತ್ಮ ಚಿಂತನ:
೧)ಅಶುದ್ಧ ವಿಚಾರಗಳ ನಿಗ್ರಹವೇ ನಿಜಭಕ್ತಿ.ಜಲ,ವಾಯು,ಶಬ್ದ
ಮಾಲಿನ್ಯಕ್ಕಿಂತಲೂ ಮನಸ್ಸಿನ ಮಾಲಿನ್ಯ ಹೆಚ್ಚು ಹಾನಿಕಾರಕ.
-ಮುನಿ ಶ್ರೀ ತರುಣ ಸಾಗರ.
೨)ಬಾಗಿದವರೆಲ್ಲ ಸಣ್ಣವರಲ್ಲ; ಬಾಗುವುದರಿಂದ ಸಣ್ಣವರಾಗು
ವುದೂ ಇಲ್ಲ.ಮಾವಿನ ಹಣ್ಣುಗಳ ಗೊಂಚಲಿರುವ ಕೊಂಬೆ
ಯೊಂದು ಬಾಗಿದೆ ಎಂದರೆ ಅದು ಅವಮಾನದ ಸಂಕೇತವೇ?
ನೇರವಾಗಿ ನಿಂತಿದ್ದರೂ ಒಂದೂ ಹಣ್ಣನ್ನು ಪಡೆಯದ ಗಾಳಿ
ಮರದ್ದೆಂಥ ಬದುಕು!
೩)ನಮಗೆ ಪ್ರೀತಿಸುವ ಸಾಮರ್ಥ್ಯ ಎಷ್ಟಿದೆ ಎಂದು ನಮಗೇ
ತಿಳಿಸುವುದಕ್ಕಾಗಿ ದೇವರು ರೂಪಿಸಿದ ತಂತ್ರ-ಮಗು.
ತೆಂಗಿನಕಾಯಿ ವೃತ್ತಾಂತ-
ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಪ್ರಧಾನ ವಸ್ತು.ಜುಟ್ಟು
ಇರುವ ತೆಂಗಿನಕಾಯಿ (ಸ್ವಸ್ತಿಕ) ಗಣಪತಿ; ವಿಷ್ಣುವೂ ಆಗುತ್ತದೆ.
ಕಲಶದ ಮೇಲಿಟ್ಟಾಗ ಶಕ್ತಿಯಾಗುತ್ತದೆ.ದೇವರ ಮುಂದೆ ಮೆಟ್ಟಿಲಿ
ಗೆಸೆದು ಒಡೆದಾಗ,ಹೋಳುಗಳು ಅಂಗಾತ ಬಿದ್ದರೆ ನೆನೆಸಿದ
ಕಾರ್ಯ ನಡೆಯುತ್ತದೆ.ಬೋರಲಾಗಿ ಬಿದ್ದರೆ ನಡೆಯುವುದಿಲ್ಲ.
ಗೆರಟೆ ಬಿಸಿಮಾಡಿ ತೆಗೆದ ಎಣ್ಣೆ ಘಾಯಗಳಿಗೆ ಹಚ್ಚಲು
ಪರಮೌಷಧ.
ಗಾದೆ-
೧)ನಾಲಗೆ ಕೊರಳನ್ನು ಕತ್ತರಿಸದಿರಲಿ.
೨)ಹೆತ್ತವರಷ್ಟೇ ಹೊರಲು ಬಲ್ಲರು.
೩)ತಗ್ಗಿದವ ಎಂದೂ ನುಗ್ಗಾಗ.
೪)ಒದ್ದೆ ಪಟಾಕಿ ಸಿಡಿಸಲು ವ್ಯರ್ಥ ಪ್ರಯತ್ನ ಯಾಕೆ?
೫)ಯಾವುದಕ್ಕೂ ಬಗ್ಗದವನು ದುಡ್ಡಿಗೆ ಬಗ್ತಾನೆ.
ಆರೋಗ್ಯ ಸಂಪದ.
ಮಾವಿನ ಕಾಯಿಗಳನ್ನು ಮರದಿಂದ ಕಿತ್ತಾಗ, ಅದರ ತೊಟ್ಟಿ
ನಿಂದ ಒಸರುವ ಬಿಳಿಯ ಅಂಟು ದ್ರವವನ್ನು ಹಚ್ಚಿದರೆ ಹುಳುಕಡ್ಡಿ
ಮತ್ತು ಇಸುಬು ದೂರವಾಗುತ್ತದೆ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s