ಕನ್ನಡ ಸೌರಭ.

ಸ್ಥಳ ಪುರಾಣ.
೧)ಏಳು ಶಿವಲಿಂಗಗಳ ಸನ್ನಿಧಾನ ಇರುವ ಗ್ರಾಮ-ಎಳತ್ತೂರು,
ಭಗವಾನ್ ಪರಶುರಾಮರ ತಪೋಭೂಮಿ ಎಂಬ ಪ್ರತೀತಿ ಇದೆ.
೨)ಜಂತರ್ ಮಂತರ್(ಹೊಸ ದಿಲ್ಲಿ )ನ್ನು,ಕ್ರಿ.ಶ.೧೭೨೪ರಲ್ಲಿ
ಜೈಪುರದ ಮಹಾರಾಜ ಜೈ ಸಿಂಗ್ ಕಟ್ಟಿಸಿದ.
ಸುಭಾಷಿತ:ಸಂಸಾರ(ಕುಟುಂಬ)ದಲ್ಲಿ ಸಾಮರಸ್ಯ ಇದ್ದವರು
ವೃತ್ತಿ ಪ್ರಪಂಚದಲ್ಲಿ ಸಾಧಿಸಿದಷ್ಟು, ಸಂಸಾರಕ್ಕೆ ಬೆಲೆ ಕೊಡ
ದವರು ಸಾಧಿಸಿಲ್ಲ ಎಂಬುದು ಸತ್ಯ.
ಅನರ್ಥ ಕೋಶ-
ನ.ಮೋ.=ನಂಬಿದವರಿಗೆ ಮೋಸ.
ನಾ.ನು.ಸೇವಕ=ನಾಡು ನುಡಿ ಸೇವಕ.
ತಾತ. ದಾ. ಧ.ನ.=ತಾತನ ಕಾಲದಿಂದಲೂ ದಾನ ಧರ್ಮ
ಗಳು ನಡೆಯುವುದಿಲ್ಲ.
ಚಿಂತನ:ಬಿರುಗಾಳಿಗೆದುರಾಗಿ ಎದೆಯುಬ್ಬಿಸಿ ನಿಂತ ಮರ
ಮುರಿದು ಬಿತ್ತು.ತಲೆ ಬಾಗಿಸಿ ನಿಂತ ಹುಲ್ಲು ಗರಿಕೆ ಗಾಳಿ
ಹಾದುಹೋದ ಬಳಿಕ ತಲೆ ಎತ್ತಿ ಸುತ್ತ ನೋಡಿತು.
ಲೋಕೋಕ್ತಿ.
ದೂರ ಶಿಕ್ಷಣದಲ್ಲಿ ಈಜು ಕಲಿತ ಹಾಗೆ.
ನಂಟು ಒಳ್ಳೆಯದೆಂದು ಗಂಟು ತೋರಿಸುವುದುಂಟೆ?
ಕ್ಷಣ ಚಿತ್ತ, ಕ್ಷಣ ಪಿತ್ತ.
ಕಾವಿ ಉಟ್ಟವ ಸನ್ಯಾಸಿಯಲ್ಲ;ಬೂದಿ ಬಳಿದವ
ಭೈರಾಗಿಯಲ್ಲ.
ಗಾಣಗಿತ್ತಿ ಅಯ್ಯೋ ಎಂದರೆ ನೆತ್ತಿ ತಂಪಾದೀತೆ?
ಮಾನ ಹೋದ ಮೇಲೆ ಮರಣ ಬಂದಂತೆ.
ಬೆಂಕಿ ಬಿದ್ದಾಗ ಬಾವಿ ತೋಡಿದಂತೆ.
ಅರುವತ್ತಕ್ಕೆ ಅರಳು(ವಿಕಸಿಸು);
ಎಪ್ಪತ್ತಕ್ಕೆ ಮರುಳು(ಬುದ್ಧಿ ಮಂದ).
ಹನಿಗವನ-”ಸರಿ.”
ಅಂದು ಆ ಸಭೆಯಲ್ಲಿ ಹಾಗೆ ಹೇಳಿದ್ದು ‘ಸರಿ’;
ಇಂದು ಈ ಸಭೆಯಲ್ಲಿ ಹೀಗೆ ಹೇಳಿದ್ದೂ ‘ಸರಿ’;
ನಾಳೆ ಎರಡನ್ನೂ ನಿರಾಕರಿಸಿದರೆ ಅದೂ ‘ಸರಿ’;
ರಾಜಕಾರಣದಲ್ಲಿ ಸುಳ್ಳು ಕಂಪಲ್ ‘ಸರಿ’.
-ಡುಂಡಿರಾಜ್.
ನಗೆಹನಿ:
ಹುಡುಗ:ಇಷ್ಟು ಸುಂದರವಾಗಿದ್ದೀಯಲ್ಲಾ….
ಏನ್ ಹಾಕ್ಕೊಂಡು ಸ್ನಾನ ಮಾಡ್ತೀ ?
ಹುಡುಗಿ:ಬಾಗಿಲು ಹಾಕ್ಕೊಂಡು ಸ್ನಾನ ಮಾಡ್ತೀನಿ.
ನಿಮಗೆ ಗೊತ್ತೇ?
೧)ಸಚಿನ್ ತೆಂಡೂಲ್ಕರ್,ಅಮಿತಾಭ್ ಬಚ್ಚನ್,ಗಾಂಧೀಜಿ,
ಸೌರವ್ ಗಂಗೂಲಿ,ಅಭಿಷೇಕ್, ಯುವರಾಜ್,ಇರ್ಫಾನ್ ಪಠಾಣ್
ವಿಷ್ಣುವರ್ಧನ್ ಇವರೆಲ್ಲ ಎಡಚರು.(ಎಡ ಕೈ ಬರಹಗಾರರು)
೨)ಮಹಾಭಾರತದ ಕಾಲ-ಕ್ರಿ.ಪೂ.1493-1443 ರ ನಡುವೆ.
(ಬೆಂಗಳೂರಿನ Indian Institute of Scienceನ
ವಿಜ್ಞಾನಿ Prof .R .ನಾರಾಯಣ ಅಯ್ಯಂಗಾರ್ ಅವರ ಪ್ರಕಾರ ).
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s