ಕನ್ನಡ ಸೌರಭ.

ಲೋಕೋಕ್ತಿ ಸಂಗ್ರಹ.
೧)ಮಾಡಿದ್ದು ಹುಡುಗಾಟ; ಆದದ್ದು ಹೊಡೆದಾಟ.
೨)ಗಾಳಕ್ಕೆ ಒಂದೇ ಮೀನು;ಬಲೆಗೆ ನೂರಾರು ಮೀನು.
೩)ಆಲಾಪ  ೫ ನಿಮಿಷವಾದರೆ, ಕಾರ್ಯ ಕಲಾಪ
೫ ತಾಸು ಎಂಬಂತೆ.
೪)ಚಿಂತೆಗೂ ಚಿತೆಗೂ ಇರುವ ಸಾಮ್ಯತೆ
ವಿಳಂಬಕ್ಕೂ ವಿರೋಧಕ್ಕೂ ಇದೆ.
೫)ವಿಕಾರವಾದ ಚಿಪ್ಪಿನಲ್ಲಿ  ಒಳ್ಳೆಯ ಮುತ್ತುಗಳು
ಸಿಗುತ್ತವಂತೆ.
೬)ಕತ್ತೆಗೆ ಹೊರುವುದೇ ಕೆಲಸ.
೭)ಬೆಂಕಿ ಹಾಕೋದಿಕ್ಕೆ ಹೊರಟೋನಿಗೆ,
ಪಂಜು ಹೊತ್ತಿಸಿ ಕೊಟ್ಟಂತೆ.
೮)ಆಶ್ರಯವಿಲ್ಲದೇ  ಶೋಭಿಸದಿರುವ ವಸ್ತುಗಳೆಂದರೆ-
ಪಂಡಿತ, ವನಿತ, ಲತಾ .
೯)ಬುದ್ಧಿ ಹೇಳುವವರೊಡನೆ ಗುದ್ದಾಡ ಬಾರದು.
೧೦)ಗುಡಿಸಿದ ಮೇಲೆ ಕಸ ಇರ ಬಾರದು;
ಬಡಿಸಿದ ಮೇಲೆ ಹಸಿವಿರಬಾರದು.
ಚಿಂತನ.
ಪ್ರಾಣವಿದ್ದರೇನಂತೆ-ತ್ರಾಣವಿಲ್ಲದಿದ್ದರೆ?
ಗುರುವಿದ್ದರೇನಂತೆ-ಅರಿವಿಲ್ಲದಿದ್ದರೆ?
ಏನಿದ್ದರೇನಂತೆ-ತೃಪ್ತಿ ಇಲ್ಲದಿದ್ದರೆ?
ತಲೆ ಇದ್ದರೇನಂತೆ-ಬುದ್ಧಿ ಇಲ್ಲದಿದ್ದರೆ?
ಹಣವಿದ್ದರೇನಂತೆ-ಗುಣವಿಲ್ಲದಿದ್ದರೆ?
ಶಕ್ತಿ ಇದ್ದರೇನಂತೆ-ಯುಕ್ತಿ ಇಲ್ಲದಿದ್ದರೆ?
ವಿದ್ಯೆ ಇದ್ದರೇನಂತೆ-ವಿಚಾರ ಇಲ್ಲದಿದ್ದರೆ?
ಸುಖ ಇದ್ದರೇನಂತೆ-ಶಾಂತಿ ಇಲ್ಲದಿದ್ದರೆ?
ಗುಡಿ ಇದ್ದರೇನಂತೆ-ದೇವರಿಲ್ಲದಿದ್ದರೆ?
ದೇಶವಿದ್ದರೇನಂತೆ-ಸ್ವಾತಂತ್ರ್ಯವಿಲ್ಲದಿದ್ದರೆ?
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s