ಪ್ರಶ್ನೋತ್ತರ.

ಅನ್ನವಿದ್ದರೆ ಏನು ಹೆಚ್ಚು?
-ಮನ್ನಣೆ.
ರೊಕ್ಕವಿದ್ದರೆ?
–ಸೊಕ್ಕು.
ನೀರಿದ್ದರೆ?
-ನಿಯಮ.
ತ್ರಿಶೂಲ ಯಾವುದು?
-ಸಾಲ.
ಭವಮಾಲೆ?
-ಸಂಸಾರ.
ಸುವಾಸನೆ?
-ಸದ್ಗುಣ.
ಪುಷ್ಪ ಯಾವುದು?
-ಹೃದಯ.
ಮಂತ್ರ?
-ಹಿತ ವಚನ.
ರುದ್ರಾಕ್ಷಿ?
-ಸುಗುಣ.
ಯಾವುದು ದೈನ್ಯತೆ?
-ಭಿಕ್ಷೆ ಬೇಡುವುದು.
ಯಾವುದು ಸುಖ?
-ತೃಪ್ತಿಯಿಂದಿರುವುದು.
ಲಕ್ಷ್ಯ ಎಲ್ಲಿಡಬೇಕು?
-ಪರ ಲೋಕದಲ್ಲಿ.
ಜೀವಿಸುವುದೇಕೆ?
-ಪರಹಿತಕ್ಕೆ.
ಗಾಳಿಗಿಂತ ವೇಗವಾವುದು?
-ಮನಸ್ಸು.
ನೀರಿಗಿಂತ ಪಾರದರ್ಶಕ ಯಾವುದು?
-ಅಂತಃ ಕರಣ.
ಅತಿ ಪ್ರಿಯವಾದದ್ದು ಯಾವುದು?
-ಜೀವ.
ಎಂಜಲು ಯಾವುದು?
-ಪರರ ಗಂಟು ತಿನ್ನುವುದು.
ಪ್ರಸಾದ ಯಾವುದು?
-ಮಹಾತ್ಮರ ವಾಕ್ಯ.
ಸ್ನಾನ ಯಾವುದು?
-ಸತ್ಸಂಗ.
ಕರ್ಣಕ್ಕೇನು ಭೂಷಣ?
-ದಿವ್ಯ ಕತೆಯನ್ನು ಕೇಳುವುದು.
ನೇತ್ರಗಳಿಗೆ?
-ಸಜ್ಜನರ ದರ್ಶನ ಮಾಡುವುದು.
ನಾಲಿಗೆಗೆ?
-ದೇವರ ನಾಮಸ್ಮರಣೆ ಮಾಡುವುದು.
ಪಾಪಿ ಯಾರು?
-ಲಂಚ ತಿನ್ನುವವನು.
ಹುಂಬ?
-ಯೋಗ್ಯತೆ ಮೀರಿ ಆಡಂಬರ ಪ್ರದರ್ಶಿಸುವವನು.
ಮೂರ್ಖ?
-ಮುಪ್ಪಿನಲ್ಲಿ ಮದುವೆಯಾಗುವವನು.
ಪಾಪ ಯಾವುದು?
-ಪರ ನಿಂದೆ.
ಬಂಧನ ಯಾವುದು?
–ಮೋಹ.
ಭೂಮಿ ಯಾವುದಕ್ಕೆ ನಡುಗುವುದು?
-ಪಾಪಿ ಜನರಿಗೆ.
ಕಾಟದಲ್ಲಿ ಯಾವ ಕಾಟ ಹೆಚ್ಚು?
-ತಗಣಿ ಕಾಟ.
ಭಂಡರು ಯಾರು?
–ಹೆಂಗಸರ ಕೂಡ ಜಗಳಾಡುವವರು.
ಚಂಡಿಯು ಯಾರು?
–ಗಂಡಸರಿಗೆ ಹೆದರದವಳು.
ದೀಡ ಪಂಡಿತನಾರು?
-ಮದುವೆಯಾಗಿ ಸಾಲೆ ಕಲಿಯುವವನು.
ತಾಪ ಯಾವುದು?
–ಹಾಳು ಬಡತನ.
ಮುಕ್ತಿ ?–ಜನನ, ಮರಣ ರಹಿತ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s