ಜೈನ ಮತ.

ಜೈನರ ಗಾಯತ್ರಿ ಮಂತ್ರ:
”ಣ ಮೇ ಅರಹಂತಾಣಂ,
ಣ ಮೋ ಸಿದ್ಧಾಣಾಂ,
ಣ  ಮೋ ಅಯಾರಿಯಾಣಂ,
ಣ ಮೋ ಉವ ಜ್ಞಾಯಾಣಂ,
ಣಮೋಳೋ ಏ ಸಬ್ಬಸಾಹೂಣಂ”
(ಪಂಚ ಪರಮೇಷ್ಠಿಗಳ ಹಾಗೂ ಲೋಕದಲ್ಲಿರುವ
ಸರ್ವ ಸಾಧುಗಳಿಗೆ ನಮಸ್ಕಾರವೆಂಬ ಈ ಮಂತ್ರ
ಜೈನರಿಗೆ ಅತಿ ಪವಿತ್ರ.)
ಜೈನರಲ್ಲಿ ಗೃಹಸ್ಥರು ಮತ್ತು ಸನ್ಯಾಸಿಗಳೆಂದು
೨ ಪಂಗಡ. ಗೃಹಸ್ಥರಲ್ಲಿ ಗಂಡಸರನ್ನು ಶ್ರಾವಕ,
ಉಪಾಸಕ ಎಂದು, ಹೆಂಗಸರನ್ನು ಶ್ರಾವಿಕೆ,
ಉಪಾಸಿಕೆ ಎಂದು ಕರೆಯುತ್ತಾರೆ. ಸನ್ಯಾಸ
ದೀಕ್ಷೆ ವಹಿಸಿದ ಗಂಡಸರನ್ನು ನಿರ್ಗಂಥರೆಂದು
ಕರೆಯುತ್ತಾರೆ.
ಜೈನರು ಪೂಜಿಸುವ ಪಂಚ ಪರಮೇಷ್ಟಿಗಳು:
ಅರ್ಹಂತ, ಸಿದ್ಧ, ಆಚಾರ್ಯ,ಉಪಾಧ್ಯಾಯ
ಮತ್ತು ಸಾಧು.
ಜಿನ/ ಕೇವಲಿನ—ಜಿನನಿಂದ ಉಪದೇಶಿಸಲ್ಪಟ್ಟ
ಧರ್ಮ ಜೈನಮತ ( ಜೀನರ ಮತ).
ಕರ್ಮ ಬಂಧನ ಕಳಚಿ, ಸಂಸಾರ ದಾಟಿ,
ಮುಕ್ತಿಯನ್ನು ಪಡೆದ ಜೀವರಿಗೆ ”ಜೀನರು” ಎಂದು
ಹೆಸರು.
ತೀರ್ಥಂಕರರು ಎಂದರೆ ಜೈನ ಧರ್ಮದ ಪ್ರವಚನ
ಕಾರರು. ಪಾರ್ಶ್ವನಾಥ ೨೩ನೇ ತೀರ್ಥಂಕರರು
ಮತ್ತು ಮಹಾವೀರರು ೨೪ನೇ ತೀರ್ಥಂಕರರು.
ಸಿದ್ಧಾರ್ಥ ಮತ್ತು ತ್ರಿಶಲರ ಮಗನಾಗಿ ಮಹಾವೀರನು
ವೈಶಾಲಿಯಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ
ತ್ರಯೋದಶಿಯಂದು ಜನಿಸಿದನು. ಯಶೋದೆ
ಎನ್ನುವ ರಾಜಕುಮಾರಿಯನ್ನು  ವಿವಾಹವಾಗಿ
ಕೆಲವು  ವರ್ಷ ಸುಖ ಜೀವನ ನಡೆಸಿದನು.
ಜೈನ ಮತದ ಬೋಧನೆ:
”ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ
ಎಂಬ ರತ್ನ ತ್ರಯಗಳ ತ್ರಿವೇಣೀ ಸಂಗಮದಲ್ಲಿ, ಸಾಧನಾ
ಸ್ನಾನ ಮಾಡಿದವನು ಕರ್ಮಬಂಧದಿಂದ ಮುಕ್ತನಾಗುತ್ತಾನೆ.
ಜಿನನೂ,ವೀರನೂ ಆಗುತ್ತಾನೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s