ಕನ್ನಡ ಸೌರಭ.

ಕವಿ ವಾಣಿ.
೧)”ಭಾರತ ಒಂದು ವಿವಿಧ ಹೂಗಳ ತೋಟ;
ನೀನಾಗದಿರು ಹೂ ಕೊರೆವ ಕೀಟ.”
೨)”ಮೌನ ಒಂದು ಅತ್ತ್ಯುತ್ತಮ ಉತ್ತರ;
ನಗು ಒಂದು ಶ್ರೇಷ್ಠ ಪ್ರತಿಕ್ರಿಯೆ–ಎಲ್ಲಾ
ಸಂದರ್ಭ ಗಳಲ್ಲಿಯೂ!”
೩)”ಆಗಸದಿಂದ ಬಿದ್ದು ನದಿಯ ನೀರಿನೊಂದಿಗೆ
ಒಂದಾಗುವ ನೀರ ಹನಿಗೂ, ಮಣ್ಣಿನಲ್ಲಿ ಇಂಗಿ
ಹೋಗುವ ಹನಿಗೂ ಗುರಿ ಒಂದೇ ; ದಾರಿ ಬೇರೆ.”
೪)”ಕಾಲನೆಂಬ ಜೂಜುಗಾರ ರಾತ್ರಿ-ಹಗಲು ಗಳೆಂಬ
ದಾಳಗಳನ್ನೆಸೆಯುತ್ತ,  ಪ್ರಪಂಚವೆಂಬ ಹಲಗೆಯ
ಮೇಲೆ, ಪ್ರಾಣಿಗಳೆಂಬ ಕಾಯಿಗಳಿಂದ ಆಟವಾಡು
ತ್ತಿದ್ದಾನೆ.” –ಭರ್ತೃಹರಿ.
೫)”ಜೀವನಕ್ಕೆ ಎರಡು ಮುಖ; ಒಂದು ಸುಖ,
ಇನ್ನೊಂದು ದುಖ! ನಾಳಿನರಿವು ಯಾಕೆ ಸಖಾ?
ಇಂದಿಗಿಹುದು ತುಂಬು ಸುಖ!!”
-ಪೇಜಾವರ ಸದಾಶಿವ ರಾಯರು.
೬)”ಕದಿಯದ ಕವಿಯಿಲ್ಲ; ಯಾರು ಮುಚ್ಚಿಡಲು
ಬಲ್ಲನೋ, ಅವನು ಮಾತಿಗೆ ಸಿಕ್ಕದೆ ಬಾಳುತ್ತಾನೆ.”
–ರಾಜಶೇಖರ.
೭)”ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ?”
–ಡಿ.ವಿ.ಜಿ.
೮)”ಬೆಟ್ಟಕ್ಕೆ ಚಳಿ ಯಾದೊಡೆ ಏನ ಹೊದಿಸುವರಯ್ಯಾ?
ಬಯಲು ಬತ್ತಲೆಯಿದ್ದರೆ ಏನನ್ನು ಉಡಿಸುವರಯ್ಯಾ?”
-ಅಲ್ಲಮ ಪ್ರಭು.
೯)”ಜನಕೆ ರಂಜನೆ ಲೇಸು; ವನಕೆ ಪುಷ್ಪವು ಲೇಸು;
ಧನದಿಂದ ಬುದ್ಧಿ ನೆರೆ ಲೇಸು; ಬುದ್ಧಿಯಿಂ ಅನುಭವ
ಲೇಸು”—ಸರ್ವಜ್ಞ .
೧೦)”ಕಣ್ಣೆರಡು ದೃಷ್ಟಿಯೊಂದೇ; ಕಿವಿಯೆರಡು ಕೇಳುವು
ದೊಂದೇ; ಕಾಲೆರಡು ನಡಿಗೆಯೊಂದೇ.”
ಹನಿ ಗವನ.
”ಹಚ್ಚಿಟ್ಟು ಕೊಂಡೆ ಹಣತೆಯಂತೆ ಎದೆಯೊಳಗೆ
ನಿನ್ನ ನೆನಪನ್ನು ಮರೆಯದಂತೆ;
ಅದು ಬೆಳಕ ಕೊಡುವುದು ಬಿಟ್ಟು,
ಸುಡುತಿದೆ ಬೆಂಕಿಯಂತೆ!”
–ಜೀವ ಮುಳ್ಳೂರು.
ಲೋಕೋಕ್ತಿ ಸಂಗ್ರಹ.
೧)ಪಿಶಾಚಿಗಳು ಪಂಚಾಂಗ ಪಠಣದಲ್ಲಿ ತೊಡಗಿದಂತೆ.
೨)ನುಡಿಯ ಬಲ್ಲವಗೆ ಕಲಹವೆಂಬುದುಂಟೆ?
೩)ಉಂಡು ಸೊಕ್ಕ ಬೇಕು; ಚೆಲ್ಲಿ ಸೊಕ್ಕ ಬಾರದು.
೪)ಶೀಲವಂತನ ಭಕ್ತಿ ಶಂಕೆಯಲ್ಲಿ ಹೋಯಿತ್ತು.
೫)ಬೇಡುವ ಕಷ್ಟಕ್ಕಿಂತ ಸಾವುದೇ ವರ ಲೇಸು.
೬)ಯಾವ ಹಕ್ಕಿಯೂ ಒಂದೇ ರೆಕ್ಕೆಯಿಂದ ಹಾರ
ಲಾರದು.
೭)ಚಿನ್ನವನ್ನು ಒರೆಯ ಬಹುದಲ್ಲದೆ ಬಣ್ಣವನ್ನು
ಒರೆಯ ಬಹುದೇ ?
೮)ಮರದ ನೆಳಲಲಿ ಇದ್ದು, ತನ್ನ ನೆಳಲ ಅರಸ
ಬಹುದೇ?
೯)ಸ್ತ್ರೀಯ ಚರಿತ್ರೆಯೇ ಪುರುಷನ ಭಾಗ್ಯ.
೧೦)ಇರುವ ಊರಲ್ಲಿ ಹಗೆ ಕಟ್ಟಿ ಕೊಂಡರೆ
ನಡೆವ ದಾರಿಗೆ ಮುಳ್ಳು ಹಾಕಿ ಕೊಂಡಂತೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s