ಕನ್ನಡ ಸೌರಭ.

ಅಧ್ಯಾತ್ಮ ಚಿಂತನ.
ಪ್ರಾಪಂಚಿಕ ಪ್ರೇಮವನ್ನು ಬೆಳೆಸಿ ಕೊಳ್ಳುವುದಕ್ಕಿಂತ
ದೈವೀ ಪ್ರೇಮವನ್ನು ಬೆಳೆಸಿಕೊಳ್ಳಬೇಕು.
ಭಗವಂತನನ್ನು ಸ್ಮರಿಸದ ಬದುಕು ಬದುಕೇ ಅಲ್ಲ.
ನೀತಿ ನಡತೆಗಳೇ ನಿರ್ವಾಣಕ್ಕೆ ಸೋಪಾನಗಳು.
ಅವುಗಳಿರುವವನು ಅವಧೂತ; ಇಲ್ಲದವನು ಯಮದೂತ.
ನಮ್ಮ ಹೃದಯವು ಸುಗಂಧ, ದುರ್ಗಂಧಗಳಿಲ್ಲದ
ಕಾಗದದ ಹೂವಿನಂತೆ. ಇದರಲ್ಲಿ ಯಾವ ರೀತಿಯ
ಭಾವನೆಗಳನ್ನು ಬೆಳೆಸಿ ಕೊಳ್ಳುತ್ತೇವೆಯೋ, ಆ ರೀತಿಯ
ಸಂಸ್ಕಾರ ವ್ಯಕ್ತ ಆಗುತ್ತದೆ. ಪ್ರಪಂಚದ ಒಳಿತು ಕೆಡುಕು
ಗಳೆಲ್ಲವೂ ಮಾನವನ ವರ್ತನೆಯನ್ನು ಹೊಂದಿ ಕೊಂಡಿವೆ.
ಮಾತಿನಿಂದ ಆದ ಘಾಯವನ್ನು ಯಾವ ವೈದ್ಯನೂ ಗುಣ
ಪಡಿಸಲಾರ.ಪಾಪ ಭೀತಿ ಹಾಗೂ ದೈವ ಪ್ರೀತಿ ಇದ್ದರೆ
ಜೀವನ ಸುಖಮಯ ವಾಗಲು ಸಾಧ್ಯ.
ಕವಿ ವಾಣಿ
”೧)ಸತ್ತೆನೆಂದೆನ ಬೇಡ; ಸೋತೆನೆಂದೆನ ಬೇಡ;
ಬತ್ತಿತೆನ್ನೊಳು ಸತ್ತ್ವದೂಟೆ ಎನಬೇಡ.”
೨)”ಒಲ್ಲದ ಹೆಣ್ಣಿ (ಗಂಡಿ?)ನೊಂದಿಗೆ ಸಂಸಾರ ಹೂಡು
ವುದಕ್ಕಿಂತಲೂ, ಜಯ ಸಿಗದ ಜೂಜಿನಲ್ಲಿ ಸೆಣಸುವುದ
ಕ್ಕಿಂತಲೂ,ಅಯೋಗ್ಯ ರಾಜರ ದರ್ಬಾರಿನಲ್ಲಿ ಇರುವುದ
ಕ್ಕಿಂತಲೂ ವೈರಿಯಿಂದ ಇರಿಸಿ ಕೊಂಡು ಸಾಯುವುದು
ಲೇಸು.”
೩)”ಕೆಳೆ ಹೊಲ್ಲ ಕೋಡಗನ (ಕೋಡಗ/ಮಂಗನೊಂದಿಗೆ
ಸಲಿಗೆ ಸಲ್ಲದು).
ಮೂರ್ಖನ ಗೆಳೆತನ ಹೊಲ್ಲ.”(ಮೂರ್ಖರ ಸ್ನೇಹ ಮಾಡಬಾರದು)
೪)”ಬೆಂದ ಮನೆ ಬಾಗಿಲಿಗೆ ಮುಂದೆ ತೋರಣವೇಕೆ?”
೫)”ವ್ಯಾಯಾಮದಿಂದ ದೇಹ ಬಲ; ಪೂಜೆ-ಭಜನೆಯಿಂದ ಆತ್ಮಬಲ.”
೬)”ಇದ್ದದ್ದ ರುಚಿ ಮಾಡಿ ಉಣ್ರೀ ಜನ” (ಬೇಂದ್ರೆ)
೭)”ಅರಿತು ಬಳಸಿದರೆ ವಿಷವೂ ಅಮೃತ ವಾದೀತು;
ಇಲ್ಲವಾದರೆ ಅಮೃತವೂ  ವಿಷವಾದೀತು.”
೮)”ಕುರುಡರೆಲ್ಲ ಸೇರಿ ಕಣ್ಣಿದ್ದವರ  ಪ್ರಪಂಚವೆಲ್ಲ ಡೋಂಗಿ
ಎನ್ನುತ್ತಾರೆ.”
೯)”ಶಬ್ದಕ್ಕಿಂತ ನಿಶ್ಶಬ್ಧ ಬಲು ಭೀಕರ.”
೧೦)”ಮನುಕುಲದ ಗೋಕುಲದ ಕನಸು ಮುರಿಯದಿರಿ
ಸೆರೆ ಕುಡಿದ ಯಾದವರ ರೀತಿ ನಡೆದು.”
ಕಾವ್ಯ ಬಿಂದು.
ಗೇಣೊಡಲು ಪೊರೆವುದಕೆ ಪೋಗಿ ಪರರನ್ನು|
ಪಂಚಬಾಣ ಸಮರೂಪನೆಂದು ಪೊಗಳೆ |
ಆಣೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು|
ಗಾಣ ತಿರುಗುವ ಎತ್ತಿನಂತೆ ಬಳಲುವುದು.
ಚುಟುಕು.
ಮಾಡಿ ತಿಂದ್ರ ಮಂದಿ ಕಾಟ;
ಬೇಡಿ ತಿಂದ್ರ ನಾಯಿ ಕಾಟ;
ಮನಿಗೆ ಬಂದ್ರ ಮಡದಿ ಕಾಟ;
ಮಲಗಿದ್ರ ತಗಣಿ ಕಾಟ.
ಚಿಂತನ
ಅನೇಕ ವೇಳೆ  ನಾವು ಇತರರಿಗೆ ತೋರುವ
ನಮ್ಮ ಚಿತ್ರ ಅಸಹಜವಾಗಿರಬಹುದು. ಆದರೆ
ಜನ ಹೆಚ್ಚಾಗಿ ನಾವು ನಮ್ಮ ಬಗ್ಗೆ ಸೃಷ್ಟಿಸುವ
ಭ್ರಮೆಗಳ, ಮೋಸಗಳ ಮೂಲಕ ಇಣಿಕಿ ನಮ್ಮ
ನಿಜರೂಪ ನೋಡಬಲ್ಲವರಾಗಿರುತ್ತಾರೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s