ಶ್ರೀ ತುಳಸಿ.

ಹಿಂದೆ ಅಮೃತ ಮಂಥನ ಕಾಲದಲ್ಲಿ ಭಗವಂತನ
ಅಂಶರೂಪನಾದ ಧನ್ವಂತರಿಯು ಅಜರಾಮರತ್ವ
ವನ್ನು ದಯಪಾಲಿಸುವ ಅಮೃತ ಕಲಶದೊಡನೆ
ಪಾಲ್ಗಡಲಿಂದ  ಆವಿರ್ಭವಿಸಿದನು. ಆ ಅಮೃತ ಕಲಶ
ದೊಳಕ್ಕೆ ಶ್ರೀ ಹರಿಯ ಕಣ್ಣುಗಳಿಂದ ಆನಂದಾಶ್ರುಗಳು
ಉದುರಿದವು. ಅದರಿಂದ ತುಳಸಿ ಗಿಡ ಉತ್ಪತ್ತಿ
ಯಾಯಿತು ಎಂಬುದು ಪುರಾಣ ಕಥೆ.
ವೈಷ್ಣವ ಪಂಥದ ಅಭಿವೃದ್ಧಿಯೊಂದಿಗೆ ಪೂಜಾ
ವಿಧಾನಗಳಲ್ಲಿ ತುಳಸಿ ಅಮೂಲ್ಯ ಪುಷ್ಪವಾಗಿ
ಪರಿಗ್ರಹಿಸಲ್ಪಟ್ಟಿತು.
ಕಾರ್ತಿಕ ಮಾಸದ ಮೊದಲನೇ ದಿನ (ಪಾಡ್ಯ) ದಿಂದ
ಹನ್ನೆರಡನೇ ದಿನ ( ಉತ್ಥಾನ ದ್ವಾದಶಿ) ತನಕ ತುಳಸಿ
ಯನ್ನು ಪೂಜಿಸುತ್ತಾರೆ. ತುಳಸಿ ಕಟ್ಟೆಗೆ ಬಲವಂದು
(ಪ್ರದಕ್ಷಿಣೆ ಮಾಡು) ಭಕ್ತಿಯೊಳು ನಮಿಸುತ್ತಾರೆ.
ಉತ್ಥಾನ ಅಂದರೆ ಮೇಲಕ್ಕೆ ಏಳು.ಕಾರ್ತಿಕ ಮಾಸದ
ಹನ್ನೆರಡನೇ ದಿನ (ಉತ್ಥಾನ ದ್ವಾದಶಿ) ”ತುಳಸಿ ಹಬ್ಬ”
ವನ್ನು ಆಚರಿಸುತ್ತಾರೆ.
ನರಕ ಚತುರ್ದಶಿಯಂದು ನರಕಾಸುರನ ವಧಾನಂತರ
ಎಣ್ಣೆ ಸ್ನಾನ ಮಾಡಿದ ಭಗವಂತ ನಿದ್ದೆ ಮಾಡುತ್ತಾನಂತೆ.
ಉತ್ಥಾನ ದ್ವಾದಶಿಯಂದು ದೇವತೆಗಳೆಲ್ಲ ಬಂದು ಗರುಡ
ಧ್ವಜನನ್ನು ಎಬ್ಬಿಸುತ್ತಾರಂತೆ. ಉತ್ಥಾನ ದ್ವಾದಶಿಯಂದು
ತುಳಸಿ ಕಟ್ಟೆಯಲ್ಲಿ ಭಗವಂತನ ವಿಶೇಷ ಸಾನ್ನಿಧ್ಯವಿದೆ
ಎಂದು ಅನುಸಂಧಾನ. ತುಳಸಿ ಸಾನ್ನಿಧ್ಯ ಪಶ್ಚಿಮಾಭಿ
ಮುಖವಾಗಿದೆ.ತುಳಸಿಯ ಎದುರು ನಿಂತಾಗ ಕಾಣುವುದು
ಸೂರ್ಯ.
ನವ ವಿಧ ತುಳಸಿ ಪೂಜೆ :–ನೋಡುವುದು,ಸ್ಪರ್ಶಿಸುವುದು,
ಧ್ಯಾನಿಸುವುದು,ಗುಣಗಾನ ಮಾಡುವುದು, ನಮಿಸುವುದು,
ಸ್ತುತಿಸುವುದು,ನೀರೆರೆಯುವುದು,ಗಿಡ ನೆಡುವುದು,ನಿತ್ಯ
ಪೂಜಿಸುವುದು.
ಅತಿ ಹೆಚ್ಚು ಆಮ್ಲ ಜನಕವನ್ನು ಹೊರಗೆಡಹುವ ತುಳಸಿ
ಔಷಧೀಯ ಸಸ್ಯ. ತುಳಸಿ ಇದ್ದಲ್ಲಿ ಪಾವಿತ್ರ್ಯ ವಿದೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s