ಭಾರತೀಯ ಹಬ್ಬಗಳ ವೈಶಿಷ್ಟ್ಯ.

ಭಾರತೀಯ ಹಬ್ಬಗಳಲ್ಲಿ ಯೋಗ ಭೋಗ ಎರಡೂ ಸೇರಿವೆ.
ಋತುಗಳು, ಪ್ರಾದೇಶಿಕತೆ ಗಳಿಗನುಗುಣವಾಗಿ
ನಮ್ಮ ಹಬ್ಬಗಳು ವಿನ್ಯಾಸ ಗೊಂಡಿವೆ.
ಉಪವಾಸದ ಹಬ್ಬಗಳು ಋತುಮಾನ, ಕಾಲಕ್ಕನುಗುಣವಾಗಿ
ನಿಯುಕ್ತವಾಗಿವೆ. ಹೊಟ್ಟೆ ಹಸಿದಿದ್ದರೂ  ಆತ್ಮ ಸಂಯಮ,
ಆತ್ಮ ಸಂತೃಪ್ತಿಯನ್ನು ಪಡೆಯಬೇಕಾದ ದಿನಗಳಿವು. ಇವು
ಗಳಲ್ಲಿಯೂ ದಿವ್ಯಾನುಭವದ ದರ್ಶನವಿದೆ.
ಹಬ್ಬಗಳ ಆಚರಣೆಯಲ್ಲಿರುವ ವಿಧಿ, ವಿಧಾನಗಳು ಆಯುಷ್ಯ,
ಆರೋಗ್ಯ, ಆನಂದವನ್ನು ಕಾಲಾನುಗುಣಕ್ಕೆ ಅನುಕ್ರಮವಾಗಿ
ನೀಡುತ್ತವೆ. ದೀಪಾವಳಿ ಹಬ್ಬದ ದಿನ ಪ್ರಾತಃ ಕಾಲ
ತೈಲಾಭ್ಯಂಜನ ಮಾಡುವುದರಿಂದ ಮುಪ್ಪು, ಆಯಾಸ,
ವಾತದ ದೋಷ ನಿವಾರಣೆ ಇತ್ಯಾದಿ ಭೌತಿಕ ಲಾಭ
ಉಂಟಾಗುತ್ತದೆ. ಪ್ರಸನ್ನತೆ, ಪುಷ್ಟಿ, ನಿದ್ರೆಯ ಸೌಖ್ಯವನ್ನು
ನೀಡುವುದು; ಚರ್ಮದ ಆರೋಗ್ಯ, ಸೌಂದರ್ಯ, ದಾರ್ಡ್ಯ
ಗಳನ್ನು ತಂದು ಕೊಡುವುದು.
ಮಕರ ಸಂಕ್ರಾಂತಿ—ಕಾಲದ ಬದಲಾವಣೆಯ ಒಂದು
ಪ್ರಮುಖ ಘಟ್ಟ. ಈ ಹೊತ್ತಿಗೆ ಚಳಿ ಹೆಚ್ಚು. ಮೈ ಚರ್ಮ
ಬಿರಿಯುತ್ತದೆ. ಇದರ ಉಪಶಮನಕ್ಕಾಗಿ, ಸಂಕ್ರಾಂತಿ
ಆಚರಣೆ ವೇಳೆ ಎಳ್ಳು, ಬೆಲ್ಲ, ಕಡಲೆ ತಿನ್ನುವುದು ಸಂಪ್ರ
ದಾಯ. ಹಬ್ಬಗಳ ಆಚರಣೆಯಲ್ಲಿ, ಭಾವಾರ್ಥವನ್ನು
ಗ್ರಹಿಸಿ, ಯಾವ ರೀತಿ ಅನುಪಾಲನೆ ಮಾಡುತ್ತೇವೆ
ಎಂಬುದರ ಮೇಲೆ ನಮ್ಮ ಆರೋಗ್ಯ ಸ್ಥಿತಿ ನಿರ್ಧಾರ
ವಾಗುತ್ತದೆ.
ಉತ್ಸವ ಪ್ರಿಯಾಃ ಖಲು ಮನುಷ್ಯಾಃ (ಕಾಳಿದಾಸ).
ಜೀವನಕ್ಕೆ ಉತ್ಸಾಹ ತುಂಬಲು ಬಂದಂಥವು ಹಬ್ಬಗಳು
ಮತ್ತು ಉತ್ಸವ. ಹಬ್ಬಗಳು ಭಾರತೀಯ ಜೀವನ ಶೈಲಿಯ
ಪ್ರಧಾನ ಜೀವನಾಡಿ. ಹಬ್ಬಗಳಿಂದಾಗಿ ಬದುಕು ಬಣ್ಣ
ಪಡೆದು ಕೊಳ್ಳುತ್ತದೆ.
ಹಬ್ಬಗಳು ಚೈತನ್ಯ ಮೂಡಿಸುತ್ತವೆ. ಬದುಕಿನ
ಅಸ್ತವ್ಯಸ್ತವನ್ನು ನೇರ್ಪುಗೊಳಿಸುತ್ತವೆ. ಸಾವು
ನೋವಿನ ಘಾಯಕ್ಕೆ ಹಬ್ಬ-ಹರಿದಿನಗಳಂಥ
ಮದ್ದು ಬೇರೊಂದಿಲ್ಲ.ಅವು ಖಿನ್ನತೆಯನ್ನು
ಕಳೆಯುತ್ತವೆ.ಹತಾಶೆಯ ಸ್ಥಾನದಲ್ಲಿ
ಆಶಾವಾದವನ್ನು ತುಂಬುತ್ತವೆ. ವ್ಯಾಕುಲಚಿತ್ತರಿಗೆ
ಭಾವನೆಗಳ ಮೇಲೆ ಹತೋಟಿ ಸಾಧಿಸಲು ನೆರವು
ನೀಡುತ್ತವೆ.ವಿವಿದೆಡೆ ಚದುರಿ ಹೋಗಿರುವ ಕುಟುಂಬ
ಸದಸ್ಯರು ಹಬ್ಬದ ದಿನ ಗೂಡು ಸೇರುತ್ತಾರೆ.
ಹಬ್ಬದ ಕೆಲವು ಕ್ರಿಯಾ ವಿಧಿಗಳು ಕುಟುಂಬ, ಬಂಧು
ಬಳಗದ ಅನುಬಂಧವನ್ನು ವೃದ್ಧಿಸುತ್ತವೆ. ಮಧುರ
ಸ್ಮರಣೆಗಳನ್ನೂ ಉದ್ದೀಪಿಸುತ್ತವೆ.ಸಂಬಂಧಗಳನ್ನು
ನಿಕಟ ಗೊಳಿಸುತ್ತವೆ
ಮೂಲ:ಸಂಗ್ರಹ.
Advertisements

2 thoughts on “ಭಾರತೀಯ ಹಬ್ಬಗಳ ವೈಶಿಷ್ಟ್ಯ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s