ದೀಪಾವಳಿಯ ಆಚರಣೆ ಮತ್ತು ಮಹತ್ತ್ವ.

ನಾವು ವರ್ಷಂಪ್ರತಿ ಆಚರಿಸುವ ಹಬ್ಬಗಳಲ್ಲಿ
ನಾಗರ ಪಂಚಮಿ ಮೊದಲನೆಯದು. ತುಳಸಿ
ಹಬ್ಬ ಕೊನೆಯದು.ದೀಪಾವಳಿ ಕೃಷಿಕರಿಗೆ
ಸುಗ್ಗಿಯ ಕಾಲದಲ್ಲಿ ಬರುತ್ತದೆ.ನರಕ ಚತುರ್ದಶಿ
ದಿನ ಎಳ್ಳೆಣ್ಣೆ ಹಚ್ಚಿ ಸ್ನಾನ.ಏಕೆಂದರೆ ಅಂದು
ಎಣ್ಣೆಯಲ್ಲಿ ಲಕ್ಷ್ಮಿಯೂ ನೀರಿನಲ್ಲಿ ಗಂಗೆಯೂ
ಸನ್ನಿಹಿತರಾಗಿರುತ್ತಾರೆ. ಆದ್ದರಿಂದ ಅಂದು ತಿಲ
ತೈಲಾಭ್ಯಂಜನ/ಅಭ್ಯಂಗ ಮಾಡಿದವನು
ಯಮಲೋಕವನ್ನು ಹೊಂದುವುದಿಲ್ಲ.
ಚಂದ್ರೋದಯ(ಅಂದರೆ ಸುಮಾರಾಗಿ
ಸೂರ್ಯೋದಯಕ್ಕೆ ಮೊದಲು)ಕಾಲ ಅಭ್ಯಂಗಾ
ನಂತರ ಯಮ ತರ್ಪಣ ಕೊಡಬೇಕು(ತಂದೆ
ಇರುವವರು ಕೂಡ ).ಇದರಿಂದ ವರ್ಷವಿಡೀ
ಮಾಡಿದ ಪಾಪಗಳು ನಶಿಸುತ್ತವೆ. ಯಮನು
ನೀತಿ-ನ್ಯಾಯಗಳ ಶಾಸಕ(ಧರ್ಮರಾಜ)
ಎಂಬುದರಿಂದ ದೇವತ್ವ.ಪ್ರೇತಾಧಿಪತಿ  ಎಂಬು
ದರಿಂದ  ಪಿತೃತ್ವ.
ದೀಪಾವಳಿ ವ್ಯಾಪಾರಿಗಳಿಗೆ ಹೊಸ ವರ್ಷದ
ಗುರುತು.ಅಂದು ದೇಹ ಗೇಹಗಳನ್ನು ಸಿಂಗರಿಸಿ
ಕೊಂಡು ಲಕ್ಷ್ಮಿ ಪೂಜೆ ಮಾಡಿ ಹೊಸ ಲೆಕ್ಕ
ಪ್ರಾರಂಭಿಸುತ್ತಾರೆ.
ಬಲಿಪಾಡ್ಯ ದಿನ ಅಸುರ ರಾಜ ಬಲೀಂದ್ರನಿಗೆ
ಗದ್ದೆ ಬದಿಯಲ್ಲಿ ದೀಪ ಹಚ್ಚಿ ಬಲಿ ಸಮರ್ಪಿಸಿ
ಪೊಲಿ(ಸಮೃದ್ಧಿ)ಯನ್ನು ಬೇಡುವ ವಾಡಿಕೆ ಇದೆ.
ಕೇರಳದ ಮಾವೇಲಿ (ಓಣಂ ದೇವರು) ಸಹಾ
ಮಹಾಬಲಿಯೇ.
ನಾಗರ ಪಂಚಮಿ ಪರಿಸರ ರಕ್ಷಣೆಯ ಮಹತ್ತ್ವವನ್ನು
ಪ್ರತಿನಿಧಿಸುತ್ತದೆ.ನಮ್ಮ ಕರ್ಮಕ್ಷೇತ್ರ ಭೂಮಿಯನ್ನು
ರಕ್ಷಿಸುವ ನಾಗಾರಾಧನೆಯ ಮೂಲಕ ಪ್ರಕೃತಿಯನ್ನು
ಆರಾಧಿಸುತ್ತೇವೆ.ನಾಗರ ಪಂಚಮಿಯನ್ನು ಆಚರಿಸು
ವುದು ಮಳೆಗಾಲ ಆರಂಭವಾಗಿ ಬೇಸಾಯದ ಕೆಲಸಕ್ಕೆ
ತೊಡಗುವ ಸಮಯದಲ್ಲಿ.
ಹಾಗೆಯೇ ದೀಪಾವಳಿಯಲ್ಲಿ ಆಚರಿಸುವುದು ಧನ-ಧಾನ್ಯ
ಪೂಜೆ.ಕೃಷಿ ಸಂಪತ್ತಿನ ಅನಿವಾರ್ಯ ಅಂಗಗಳಾದ
ಭೂಮಿ ಪೂಜೆ, ಗೋ ಪೂಜೆ ಇತ್ಯಾದಿ.
ಸೂರ್ಯ ದಕ್ಷಿಣಕ್ಕೆ ಸರಿಯುವ ಸಂದರ್ಭಕಾಲ ದೀಪಾವಳಿ,
ಅಂದರೆ ಕಾರ್ತಿಕ ಮಾಸದ ಒಂದು ತಿಂಗಳು  ದೀಪೋತ್ಸವ
ನಡೆಯುತ್ತದೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s