ದೀಪ.

ಬದುಕಿಗೆ ಒಲವೆ ದೀಪ. ಬೆಳಕಿಲ್ಲದೆ ಬದುಕಿಲ್ಲ;
ಜ್ಯೋತಿಯೇ ದೇವರು;
ಮಕ್ಕಳ/ಎಳೆಯರ ಕಣ್ಣಲ್ಲಿ ಸಂತಸದ ದೀಪ;
ಹೆಂಗಳೆಯರ ಮೊಗದಲ್ಲಿ ಕಿರುನಗೆಯ ದೀಪ;
ನೀಲಾಕಾಶದಲ್ಲಿ ನಕ್ಷತ್ರಗಳ ದೀಪ;
ದೇವರ ಮುಂದೆ ನಂದಾ ದೀಪ;
ಮನೆ ಮನೆಗಳ ಹೊಸ್ತಿಲಲ್ಲಿ ಹಣತೆಗಳ ದೀಪ;
ದೀಪ ಬೆಳಗಲಿ; ಬದುಕು ಅರಳಲಿ.
ಹೆಣ್ಣನ್ನು ದೀಪಕ್ಕೆ ಹೋಲಿಸುತ್ತಾರೆ.
ದೀಪಧಾರಿ ಹೆಣ್ಣು ಸಮಾಜದ ಕಣ್ಣು.
ದೀಪ ಹಿಡಿದ ಗಂಡಿನ ಚಿತ್ರ ಎಲ್ಲಿಯೂ
ಕಾಣ ಸಿಗದು.
ದೀಪಗಳಲ್ಲಿ ತುಪ್ಪದ ದೀಪ ಶ್ರೇಷ್ಠ. ಅದು
ಆನಂದ, ಜ್ಞಾನ ವರ್ಧಕ. ನೇತ್ರದ ದೋಷ
ಹೋಗಲಾಡಿಸಲು, ಏಕಾಗ್ರತೆ ಪಡೆಯಲು
ತುಪ್ಪದ ದೀಪ ಬೆಳಗುತ್ತಾರೆ. ತುಪ್ಪ ಲಕ್ಷ್ಮಿಯ
ಸನ್ನಿಧಿ.
ಶಕ್ತಿಯನ್ನೋ ಅಥವಾ ಭಗವಂತನನ್ನೋ ದೀಪ
ದಲ್ಲಿ ಆವಾಹನೆಗೊಳಿಸಿ ದೀಪ ಜ್ವಾಲೆಯನ್ನು
ನೋಡಿದರೆ ಪಾಪ ನಿವೃತ್ತಿ ಆಗುವುದು ಎಂದು
ಶಾಸ್ತ್ರ ವಾಕ್ಯವಿದೆ.
ದೀಪ ಪ್ರಕಾಶ ಪರಮೇಶ್ವರನ ಸ್ವರೂಪ.
ದೀಪ ಹಚ್ಚುವುದು ಕಗ್ಗತ್ತಲೆಯ ನಿರ್ಮೂಲಕ್ಕಾಗಿ;
ಬೆಳಕನ್ನು ಬಾಳಲ್ಲಿ ಮೂಡಿಸಿ ಕೊಳ್ಳುವುದಕ್ಕಾಗಿ.
”ತಮಸೋಮಾ ಜ್ಯೋತಿರ್ಗಮಯಾ”(ಅಂಧ
ಕಾರದಿಂದ ಬೆಳಕಿನತ್ತ ಪಯಣ) ಇದು ನಮ್ಮ
ಆಕಾಂಕ್ಷೆ. ಪ್ರೇಯಸ್ಸಿಗೆ, ಶ್ರೇಯಸ್ಸಿಗೆ ಮಾರ್ಗ.
ದೀಪ ಬೆಳಕೂ ಹೌದು,ಬದುಕೂ ಹೌದು.
ದೀಪ ಶಾಖವೂ ಹೌದು;ಸುಖವೂ ಹೌದು.
ಭಿನ್ನತೆಯ ನೋಟವನ್ನು ಏಕತೆಯ ಹಣತೆ
ಯಲ್ಲಿಟ್ಟು ಚಿನ್ನದ ಕಿರಣವನ್ನು ಹರಡುವ ದೀಪ
ಎಲ್ಲರೆದೆಯಲ್ಲಿ ಪ್ರೀತಿ, ಸೌಹಾರ್ದದ ಜ್ಯೋತಿ
ಬೆಳಗಿಸಲಿ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s