ದೀಪಾವಳಿ.

ಉತ್ತರ ಭಾರತದಲ್ಲಿ  ಶ್ರೀ ರಾಮಚಂದ್ರನು
ರಾವಣನನ್ನು ಸಂಹರಿಸಿ, ಅಯೋಧ್ಯೆಗೆ
ಹಿಂದಿರುಗಿದ ದಿನವಾಗಿ, ರಾಜಾ ವಿಕ್ರಮಾದಿತ್ಯ
ತನ್ನ ದೇಶವನ್ನಾಕ್ರಮಿಸಿದ  ಶಕರನ್ನು ಸೋಲಿ
ಸಿದ ದಿನವಾಗಿ, ಸಿಖ್ ಆರನೇ ಗುರು ಮೊಘಲರ
ಬಂಧನದಿಂದ ಬಿಡುಗಡೆ ಹೊಂದಿದ ದಿನವಾಗಿ,
ಜೈನರ ತೀರ್ಥಂಕರ ಮಹಾವೀರನು ನಿರ್ವಾಣ
ಹೊಂದಿದ ದಿನವಾಗಿ ದೀಪಾವಳಿ ರಾಷ್ಟ್ರೀಯ
ಹಬ್ಬವೆನಿಸಿದೆ.
ದೀಪಾವಳಿ ಪ್ರಕ್ರಿಯೆ ಆರಂಭ–ಅಶ್ವಿನ ಬಹುಳ
ತ್ರಯೋದಶಿ(ಧನ ತ್ರಯೋದಶಿ)ಯ ದಿನದಿಂದ.
ಅಂದು ಸಂಜೆ ದಕ್ಷಿಣಾಭಿಮುಖವಾಗಿ ಯಮನ
ಪ್ರೀತ್ಯರ್ಥವಾಗಿ ದೀಪ ಹಚ್ಚಿಡುವುದರಿಂದ ಮನೆ
ಮಂದಿಗೆ ಬರಬಹುದಾದ ಅಪಮೃತ್ಯು ದೂರ
ವಾಗುತ್ತದೆ ಎಂಬ ನಂಬಿಕೆ.
ದೀಪಾವಳಿ ಮೂರು ದಿನಗಳ ಹಬ್ಬ.
೧)ಪಿತೃ ಗಳ ಹಬ್ಬ (ನರಕ ಚತುರ್ದಶಿ); ೨)ದೀಪಾವಳಿ
(ಅಮಾವಾಸ್ಯೆ); ೩)ಬಲಿ ಪಾಡ್ಯ.
 ಈ ಮೂರೂ ದಿನಗಳಲ್ಲಿ ಮುಸ್ಸಂಜೆ ಹೊತ್ತಿನಲ್ಲಿ ಮನೆ
ಯಂಗಳ ದಲ್ಲಿ ದೀಪ ಹಚ್ಚಿಟ್ಟರೆ ಅಲಕ್ಷ್ಮಿ ದೂರವಾಗುತ್ತಾಳೆ.
ಭಾದ್ರಪದ ಕೃಷ್ಣ ಪಕ್ಷವನ್ನು ನಾವು ಪಿತೃ ಗಳ
ಪ್ರೀತ್ಯರ್ಥವಾಗಿ, ಮಹಾಲಯ/ಪಿತೃ/ಪಕ್ಷವನ್ನಾಗಿ
ಆಚರಿಸುತ್ತೇವೆ.(ಶುದ್ಧ ಪೈತೃಕ ಆಚರಣೆ)
ಆ ಕೂಡಲೇ ಆಶ್ವಿನ ಶುಕ್ಲಪಕ್ಷದಲ್ಲಿ ಶರನ್ನವ
ರಾತ್ರಿ (ಶುದ್ಧ ದೈವಿಕ ಆಚರಣೆ)ಯನ್ನು ಆಚ
ರಿಸುತ್ತೇವೆ.
ಪಿತೃಗಳನ್ನು ಸ್ಮರಿಸುತ್ತಾ, ಮೈ, ಮನಗಳ
ಕೊಳೆ ಕಳೆದು, ದೀಪಗಳನ್ನು ಬೆಳಗಿ  ಆ ಮೂಲಕ
ಶ್ರೀ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಹಬ್ಬ–ದೀಪಾವಳಿ.
ದೀಪಾವಳಿಯಲ್ಲಿ ಪೈತೃಕ ಹಾಗೂ ದೈವಿಕ
ಇವೆರಡರ ಮಿಶ್ರ ರೂಪದ ಬಗೆಯ ಆಚರಣೆಯಿದೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s