ಕನ್ನಡ ಸೌರಭ.

ಚಿಂತನ.
೧)ಚಿರಂಜೀವಿಯಾಗಿ ಜಗತ್ತಿನಲ್ಲಿ ಯಾವ ಅವತಾರ
ಪುರುಷನೂ ಉಳಿಯಲಿಲ್ಲ ಎನ್ನುವುದು ಚಿರ ಸತ್ಯ.
ವೇದ ಓದಿದರೇನು, ವಾದ ಹೂಡಿದರೇನು, ವಾದ್ಯ
ನುಡಿಸಿದರೇನು,ಎಷ್ಟು ಗಳಿಸಿದರೇನು,ಕೊನೆಗೊಮ್ಮೆ
ಕದ ಮುಚ್ಚಿ ತೆರಳಲೇ ಬೇಕು;ನಗು ನಗುತ ಬಾಳು
ಇರುವಷ್ಟು ದಿನ ನೀನು.–ಎಚ್.ಕಣ್ಣನ್.
೨)ಹಾಸ್ಯ  ಹಾಸ್ಯಾಸ್ಪದವಾಗಬಾರದು. ಹಾಸ್ಯಕ್ಕೆ
ಅದರದ್ದೇ ಆದ ದೃಷ್ಟಿಕೋಣ, ಗುಣಮಟ್ಟ,ದರ್ಜೆ ಇದೆ.
ಮತ್ತೊಬ್ಬರನ್ನು ಅಪಹಾಸ್ಯಕ್ಕೀಡು ಮಾಡಿ ನೋಯಿ
ಸುವುದು ಹಾಸ್ಯವಾಗಲಾರದು.
ನಗೆ ಹನಿ.
೧)ರಾಜಕಾರಣಿಯೊಬ್ಬ ಬಹಿರಂಗ ಸಭೆಯಲ್ಲಿ ಗುಡುಗು
ತ್ತಿದ್ದ:”ಅಂತ ಕೆಟ್ಟ ಭೂಗತ ಪಾತಕಿಯನ್ನು ನಾವು
ಸುಮ್ಮನೆ ಬಿಡುವುದಿಲ್ಲ.” ಸಭಿಕರಲ್ಲೊಬ್ಬ ಕೂಗಿದ :
”ಸ್ವಾಮೀ, ಮೊದಲು ಹಿಡಿಯಿರಿ;ಆ ಮೇಲೆ ಬಿಡುವ
ಮಾತು.”
೨)ನಲ್ಲೆ: ”ಪ್ರಿಯಾ, ನಾನು ಎಂದೆಂದೂ ನಿನ್ನ ನೆರಳಿ
ನಲ್ಲಿಯೇ ಇರಬೇಕು ಎಂದು ಬಯಸುತ್ತೇನೆ.”
ನಲ್ಲ: ”ಹಾಗಾದರೆ ನಾನು ಎಂದೆಂದೂ ಬಿಸಿಲಿನಲ್ಲೇ
ಇರಬೇಕು  ಎಂದು ಬಯಸುತ್ತೀಯಾ?”
ನಲ್ಲೆ: ”ಯಾಕೆ ಹಾಗೆ ಕೇಳುತ್ತೀಯಾ?”
ನಲ್ಲ: ”ನೀನು ನೆರಳಿನಲ್ಲಿರಬೇಕಾದರೆ, ನಾನು
ಬಿಸಿಲಿನಲ್ಲಿ ಇದ್ದರೆ ತಾನೇ ನೆರಳು ಬರಲು ಸಾಧ್ಯ?”
ಅಧ್ಯಾತ್ಮ ಸೌರಭ.
ಪೃಥ್ವಿಯಲ್ಲಿ ಜನಿಸಿದ ನಾವೆಲ್ಲಾ ಪಾರ್ಥರು.
ಧರ್ಮ, ಅರ್ಥ, ಕಾಮ, ಮೋಕ್ಷ ಗಳಲ್ಲಿ  ಬರೇ
”ಅರ್ಥ”(ಧನ ಸಂಪಾದನೆ)ದ  ಪಾಲನೆಯಲ್ಲಿ
ತೊಡಗಿರುವುದರಿಂದಲೂ ನಾವು ಪಾರ್ಥರು.
”ಕ್ಷುದ್ರಂ ಹೃದಯ ದೌರ್ಬಲ್ಯಂ |
ತ್ಯಕ್ತೋತ್ತಿಷ್ಠ  ಪರಂ ತಪಃ |
(ದೌರ್ಬಲ್ಯವನ್ನು ತ್ಯಜಿಸಿ ಎದ್ದೇಳು. ಕರ್ತವ್ಯ
ಕರ್ಮ ಮಾಡು )—ಶ್ರೀ ಕೃಷ್ಣ.
ಸುಭಾಷಿತ.
೧)ಜೀವನವಿದು ನೌಕಾ ವಿಹಾರ, ಗಾಳಿಯೊಡ
ನೋಲಾಟ, ತೆರೆ ಚಲಿಸಿದೆಡೆಗೆ ಪಯಣ.
೨)ಮಾನವರಿಗೆ ದೊಡ್ಡವರಾಗಿ, ದೇವರಿಗೆ ಸಣ್ಣವರಾಗಿ
ಬಾಳಿರಯ್ಯ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s