ಚಿಂತನ ಮಂಥನ.

೧)ಮಕ್ಕಳು ಸಮಾಜದ ಸಂಪತ್ತು ಎಂಬಂತಾಗ
ಬೇಕು; ಬದಲು ಅವರು ಒಂದು ಆಪತ್ತು ಆಗಬಾರದು.
೨)ಪ್ರತಿಯೊಂದು ವಸ್ತುವಿಗೂ , ವಿಷಯಕ್ಕೂ ತನ್ನದೇ
ಆದ ಸಮಯ ಇದೆ. ಬಿತ್ತುವುದಕ್ಕೊಂದು ಸಮಯ;
ಬೆಳೆಯುವುದಕ್ಕೊಂದು ಸಮಯ; ತಿನ್ನುವುದಕ್ಕೊಂದು
ಸಮಯ ಮತ್ತು ತಿನಿಸುವುದಕ್ಕೊಂದು ಸಮಯ.
ಹಾಗೇ ನಳನಳಿಸುವುದಕ್ಕೊಂದು, ಮುರುಟಿ ಮಣ್ಣಾ
ಗುವುದಕ್ಕೊಂದು ಸಮಯ. ಕಾಲ ಎಲ್ಲದಕ್ಕೂ ಕ್ಷಣ
ಕ್ಷಣದ ಪಾಲು ನೀಡಿದೆ. ಕಾಲ ಮೀರಿದರೆ ಎಲ್ಲವೂ
ಹಳಸುತ್ತದೆ.
೩)ಈ ಭ್ರಮಣಶೀಲ ಪ್ರಕೃತಿಯಲ್ಲಿ ಯಾವುದರ
ಅನುಪಸ್ಥಿತಿಯಲ್ಲೂ ಲೋಕ ಕ್ರಿಯೆ ನಡೆಯುತ್ತದೆ.
೪)”ಸತ್ತ” ಎಂಬುದಕ್ಕಿಂತ ”ಸಾಕೆನಿಸಿ ಕೊಂಡ”
ಎಂದು ಹೇಳುವುದರಲ್ಲಿ ಎಂಥ ಸೌಕುಮಾರ್ಯ !
೫)ಸಾವು–
ಚಿಕ್ಕ ಮಕ್ಕಳಿಗೆ ತಿಳಿಯದ ಸಂಗತಿ;
ಯುವಜನಾಂಗಕ್ಕೆ ದುಃಸ್ವಪ್ನ ;
ಮಧ್ಯ ವಯಸ್ಕರಿಗೆ ರಸಭಂಗ ;
ವೃದ್ಧರಿಗೆ ನಿರೀಕ್ಷೆಯ ಸಂಗತಿ ;
ಜೀವನದಲ್ಲಿ ಅಭಿರುಚಿಯುಳ್ಳವರಿಗೆ ಕಟುಕ ಸ್ವರೂಪಿ ;
ಜಿಗುಪ್ಸೆ ಹೊಂದಿದವರಿಗೆ ಜೀವ ತೊರೆಯುವ
ಸುಲಭೋಪಾಯ ;
ಅಂಜುಗುಳಿಗಳಿಗೆ  ಭೀಕರ ಭೂತ ;
ಧೈರ್ಯಶಾಲಿಗಳಿಗೆ ನಿಸರ್ಗ ನಿಯಮ ;
ವಿರಕ್ತರಿಗೆ ಅದೊಂದು ಸ್ಥಿತಿ .
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s