ಕನ್ನಡ ಸೌರಭ.

ನುಡಿ ಮುತ್ತು.
೧)ಸಾಲ ಮಾಡ ಬೇಡ; ಸಾಲದೆನ ಬೇಡ;
ನಾಳೆಗಿಡ ಬೇಡ.–ಪುರಂದರದಾಸರು.
೨)ಕಂಸಾರಿಯ ಸ್ಮರಣೆಯ ಸೌಭಾಗ್ಯ
ವಿದ್ದವರು ಸಂಸಾರಕ್ಕೆ ಬೆದರ ಬೇಕಾಗಿಲ್ಲ.
೩)ಆವ ಕುಲವಾದೊಡೇನು, ದೇವನೊಲಿ
ದಾತನೆ ಕುಲಜ.
೪)ಹೇರನ್ನೊಪ್ಪಿಸಿದವಗೆ ಸುಂಕವೆಲ್ಲಿಯದು?
೫)ಕತ್ತಿಯಿಂದ ಶತ್ರುವನ್ನು ಗೆಲ್ಲ ಬಹುದು;
ಸಂಗೀತದಿಂದ ಶತ್ರುವನ್ನು ಮಿತ್ರನನ್ನಾಗಿ
ಮಾಡಿಕೊಳ್ಳ ಬಹುದು.–ರವೀಂದ್ರನಾಥ
ಟಾಗೋರ್.
೬)ಭಿತ್ತಿಯಿಲ್ಲದೆ ಬರೆಯ ಬಹುದೇ ಚಿತ್ತಾರವ?
೭)ಪಾಪಕ್ಕೆ ಮಡಿ ಇಲ್ಲ; ಪುಣ್ಯಕ್ಕೆ ಮೈಲಿಗೆ ಇಲ್ಲ.
೮)ಕಾಗದದ ಹೂವು ಎಷ್ಟು ಜನ ಮುಡಿದರೂ
ಬಾಡದು.
೯)ಕೋಗಿಲೆಗಳಿಗೆ ಸ್ವರವೇ ರೂಪ;
ಹೆಂಗಸರಿಗೆ ಶೀಲವೇ ರೂಪ.
೧೦)ಪರುಷ ಕೈಯಲ್ಲಿ ಉಳ್ಳವರಿಗೆ  ಸಿರಿಯ
ಹಂಗೇಕೆ?
ಚಿಂತನ.
೧)ಮೂಲ ಭೂತ ಹಕ್ಕು ಎಂದರೆ ತಮಗಿರುವ
ಹಕ್ಕುಗಳನ್ನು ಭೂತಗಳಂತೆ ಉಪಯೋಗಿಸಿ
ಇನ್ನೊಬ್ಬರಿಗೆ ತ್ರಾಸ ನೀಡುವುದೆಂದರ್ಥವಲ್ಲ.
೨)ಮನುಷ್ಯ ಸರಕಾರವಿಲ್ಲದೆಯೂ ಬದುಕ ಬಲ್ಲ;
ಆದರೆ ಸಂಸ್ಕೃತಿಯಿಲ್ಲದೆ ಬದುಕಲಾರ. ಉತ್ತಮ
ಸಂಸ್ಕೃತಿಯನ್ನು ಒದಗಿಸುವುದು ಸಾಹಿತ್ಯದ ಕಾರ್ಯ.
೩)ಭಗವಂತ  ”ಭಕ್ತಿ ಸುಲಭ” ನಿಜ.
ಆದರೆ ಭಕ್ತಿ ಅಷ್ಟು ಸುಲಭವಲ್ಲ.
೪)ಅಶಕ್ತನ ಅಹಿಂಸೆ ಹಿಂಸಾ ಪ್ರಚೋದಕ ವಾಗು
ವಂತೆಯೇ,  ಶಕ್ತನ ಅಹಿಂಸೆ ಮೈತ್ರಿ ಪ್ರಚೋದಕ
ವಾಗುವುದೂ ನಿಶ್ಚಯ.
೫)ಮಾನವರು ಭಗವಂತನಿಂದ ಬೇಕಾದಷ್ಟು
ಪಡೆದಿರುವಾಗ, ಅವನ ಸ್ಮರಣೆ ಮಾಡುವಷ್ಟು
ಕಾಲಾವಕಾಶವಿಲ್ಲ ಎಂದು ಹೇಳುವುದು ಸರಿಯಲ್ಲ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s