ಕ್ಷೇತ್ರ ಪರಿಚಯ.

೧)ಕೊಳ್ನಾಡು(ವಿಟ್ಲದಲ್ಲಿದೆ)ಗ್ರಾಮದ ಕಟ್ಟತ್ತಿಲ(ಕಡೇ
ಸ್ಥಳ) ಶ್ರೀ ವೇಣು ಗೋಪಾಲ ಕೃಷ್ಣ ದೇವಸ್ಥಾನ –
ಆಚಾರ್ಯ ಮಧ್ವರು ಪ್ರತಿಷ್ಠಾಪಿಸಿದ ಕ್ಷೇತ್ರ.
ಅವರು ಸ್ವತಃ ಕಡೆದು ಕೆತ್ತಿ ಮಾಡಿದ ತನ್ನ
ಆರಾಧ್ಯ ದೇವರಾದ ವೇಣುಗೋಪಾಲ ಕೃಷ್ಣನ
ಭವ್ಯ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದರು.
ತಾನು ಬರೆದ ತಾಮ್ರ ಶಾಸನವನ್ನು ಇಲ್ಲೇ
ಭೂಗತ ಮಾಡಿ ”ಪುಸ್ತಕ ತೀರ್ಥ” ಎಂದು
ಆ ಸ್ಥಳಕ್ಕೆ ನಾಮಕರಣ ಮಾಡಿದರು. ಅವರು
ತಮ್ಮ ದೇಶ ಪರ್ಯಟನೆಯನ್ನು ಇಲ್ಲಿ ಮುಕ್ತಾಯ
ಗೊಳಿಸಿದ ಕಾರಣ ಈ ಸ್ಥಳಕ್ಕೆ ”ಕಡೇಸ್ಥಳ”
ಎಂಬ ಹೆಸರು ಬಂತು.ಕಾಲ ಕ್ರಮೇಣ ಅದು
ಕಡ್ತಿಲ, ಕಟ್ಟತ್ತಿಲ್ಲ ಎಂದು ಪರಿವರ್ತನೆಯಾಯಿತು
ಎಂಬ ಪ್ರತೀತಿ ಇದೆ.
೨)ಶಿಬರೂರಿನ(ಕಟೀಲಿನ ಸಮೀಪ) ”ಕೊಡಮಣಿ
ತ್ತಾಯ ದೈವ” ನಿಗೆ  ”ವೈದ್ಯನಾಥ ” ಎಂಬ
ಅಭಿದಾನವಿದೆ. ಈ ದೈವಕ್ಕೆ ವಿಷಾಪಹಾರ
ಮಾಡುವ ಪ್ರತ್ಯೇಕ ಶಕ್ತಿ ಇದೆ. ಆದ್ದರಿಂದ ”ವಿಷ
ವೈದ್ಯ” ನೆಂಬ ಅಭಿದಾನವಿದೆ.ಅಲ್ಲಿನ ಬಾವಿ
ಕಾರಣಿಕವಾಗಿದೆ. ಅದರಲ್ಲಿ ವಿಷ ಹೀರುವ ಕಲ್ಲು
ಇದೆ. ಈ ಬಾವಿಯ ತೀರ್ಥ ಸ್ನಾನದಿಂದ
ಬಾಧೆ ಮುಕ್ತಿ.
೩)ಬಾಬಾ ಬುಡಾನ್ ಗಿರಿ–ದತ್ತಾತ್ರೇಯ ಗುರು
ಕುಳಿತು ತಪಸ್ಸು ಮಾಡಿದ ಗುಹೆ. ಪಕ್ಕದಲ್ಲಿ
ಗುರುಗಳ ಮಾತೃ ಶ್ರೀ ಅನಸೂಯಾ ದೇವಿಯ
ಸಮಾಧಿ ಇದೆ. ಸನಿಹದಲ್ಲಿ ಇರುವ ಹೊಂಡದಲ್ಲಿ
ಗಂಧದ ಬಣ್ಣದ ಸುಗಂಧಯುಕ್ತ ಮೃತ್ತಿಕೆ ಇದೆ.
ಅದನ್ನು ಪ್ರಸಾದವಾಗಿ ಭಕ್ತರು ಸ್ವೀಕರಿಸುತ್ತಾರೆ.
ಹನ್ನೆರಡು ವರ್ಷಕ್ಕೊಮ್ಮೆ (೨೦೦೯ ರಲ್ಲಿ)ಅರಳುವ
ಕುಂಜಾಳ ಪುಷ್ಪಗಳಿಂದ ಬಾಬಾ ಬುಡಾನ್ ಗಿರಿ
ನೀಲಿಮಯವಾಗುತ್ತದೆ. ದತ್ತ ಗುರು ಪೀಠ
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s