ಕನ್ನಡ ಸೌರಭ.

ಲೋಕೋಕ್ತಿ ಸಂಗ್ರಹ.
೧)ಋತು ಬದಲಾದರೂ ಕತೆ ಬದಲಾಗದು.
೨)ಕಂಪಿರುವಲ್ಲಿ ಕಾವಲಿದೆ ಸಹಜ;
ಕಾಳೋರಗದ ನೆರಳೂ ಇದೆ.
೩)ಬೇರಿಲ್ಲದ ಮರವನ್ನು ಆಧಾರಕ್ಕೆ ನಂಬಿದಂತೆ.
೪)ಕಾಮನ ಬಿಲ್ಲಿಗೆ ಬೇರೆ ಅಲಂಕಾರವೇಕೆ?
೫)ಆಕಾಶದಲ್ಲಿ ಚಿತ್ರ ಬಿಡಿಸಲು ಹವಣಿಸಿದಂತೆ.
೬)ದೊಡ್ಡವರ ಕಣ್ಣೀರಿನಂತೆ ಈ ಕನಿಕರ–ಕುಡಿ
ಯಲಿಕ್ಕೂ ಇಲ್ಲ; ಸ್ನಾನಕ್ಕೂ ಸಲ್ಲ.
೭)ತಾಯಿ ಬೇಕು; ಇಲ್ಲ ಬಾಯಿ ಬೇಕು;
ಇಲ್ಲ ಸಾಯ ಬೇಕು.
೮)ಗುಣವರಿತು ಗುಟ್ಟು ಮಾತು ಹೇಳು.
೯)ಮುಂದೆ ಹೊಗಳ ಬೇಡ; ಹಿಂದೆ ತೆಗಳ ಬೇಡ.
೧೦)ಮಮತೆಯಿಂದ ನೀಡಿದ್ದು ಅಮೃತ.
ಒಗಟು
೧)ಕಿತ್ತರೆ ಬಾಡುವುದಿಲ್ಲ;ಯಾವ ಪ್ರಾಣಿಯೂ
ತಿನ್ನುವುದಿಲ್ಲ.—-ಕೂದಲು.
೨)ಎಲ್ಲೆಲ್ಲೂ ನಾನೇ; ಕಣ್ಣಿಗೆ ಮಾತ್ರ ಕಾಣೆ.
–ಗಾಳಿ.
೩)ಅಂಗಿ ಮೇಲೆ ಅಂಗಿ,ಶಾನುಭೋಗರ ತಂಗಿ.
–ನೀರುಳ್ಳಿ
೪)ದಂತ ಪಂಜರದಲ್ಲಿ ಮಾತನಾಡುವ ಗಿಣಿ ರಾಮ.
–ನಾಲಗೆ.
೫)ಮುಳ್ಳು ಮುಳ್ಳಿನ ಚಕ್ರ; ಗಾಡಿಗಾಗದ ಚಕ್ರ;
ಮುರಿದು ತಿನ್ನುವ ಚಕ್ರ.—-ಚಕ್ಕುಲಿ.
೬)ಊರ ನೆತ್ತಿಯ ಮೇಲೆ ಉರಿ ಬಿಸಿಲ ಮಡಕೆ.
–ಸೂರ್ಯ.
ಕವಿ ವಾಣಿ
೧)”ಆಂತರಿಕವಾದ ಯಾವುದೋ ಒಂದು ಕಾರಣವು
ಪ್ರೇಮಾಭಿವ್ಯಕ್ತಿಗೆ ಕಾರಣವಲ್ಲದೆ, ಪ್ರೀತಿ ಎಂದೂ
ಬಾಹ್ಯೋಪಾಧಿಗಳನ್ನವಲಂಬಿಸಿಲ್ಲ. ಸೂರ್ಯೋ
ದಯವಾದಾಗ ಕಮಲ ಅರಳುವುದು. ಚಂದ್ರೋ
ದಯವಾದಾಗ  ಚಂದ್ರಕಾಂತ ದ್ರವಿಸುತ್ತದೆ.
ಇದಕ್ಕೆ ಗೂಢವಾದ ಪ್ರಾಕೃತಿಕ ಸ್ನೇಹವೇ ಕಾರಣ.
ಬೇರೇನೂ ಅಲ್ಲ.”—ಭವಭೂತಿ.
೨)”ಮಂಥರೆಯ ಮಹಾಮಮತೆ ಎಂಬ ವಾಸುಕಿ (ಹಗ್ಗ)
ಕೈಕೆಯೆಂಬ ಮಂದರ ಪರ್ವತ (ಕಡೆಗೋಲು) ದಿಂದ
ತ್ರೇತಾ ಸಮುದ್ರವನ್ನು ಕಡೆಯದೆ ಇರುತ್ತಿದ್ದರೆ
ರಾಮಾಯಣವೆಂಬ ಮಹಾರತ್ನವೇ ಮೂಡುತ್ತಿರಲಿಲ್ಲ.”
–ಕುವೆಂಪು(ರಾಮಾಯಣ ದರ್ಶನಂ)
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s