ಚಷ್ಮಾದ ಚರಿಷ್ಮಾ.

ಎಡ ಬಲ ಗಳಲ್ಲಿ ಜಯ-ವಿಜಯರ ಹಾಗೆ
ನಿಂತಿರುವ ಕಿವಿಗಳೆರಡನ್ನೂ ಆಧಾರ ಸ್ತಂಭ
ಗಳನ್ನಾಗಿ ಬಳಸಿಕೊಂಡು, ಮೂಗನ್ನು ಪ್ರಶಸ್ತ
ವೇದಿಕೆಯನ್ನಾಗಿಸಿಕೊಂಡು ನಮ್ಮೆಲ್ಲರನ್ನೂ
ಸುನೇತ್ರರನ್ನಾಗಿಸಿರುವ ಈ ಕಾಂತ ಕನ್ಯೆಗೆ
ಶರಣಾಗದ ಕನ್ನಡಕದಣ್ಣರು ಯಾರಿದ್ದಾರು?
”ಕಣ್ಣಿಲ್ಲದವರಿಗೆ ನೀನೇ ಕನ್ನಡಕ ಶಿವಾ” ಅಂತ
ಕಣ್ಣಿಲ್ಲದವರೂ ಈ ಚಷ್ಮಾದ ಚರಿಷ್ಮಾಗೆ
ಒಳಗಾದವರೆ. ಇವರ (ಕನ್ನಡಕದಣ್ಣರ) ಕಣ್ಣಿಗೆ
ಮಣ್ಣೆರಚುವುದು ಅಸಾಧ್ಯ.ಎಲ್ಲವನ್ನೂ ಇವರು
ಕನ್ನಡಕದಲ್ಲಿ ಕಣ್ಣಿಟ್ಟು ಗಮನಿಸುತ್ತಿ ರುವುದರಿಂದ
ಕಣ್ಣಿನ ಜತೆಗೆ ಇವರ ಬದುಕೂ ಸುರಕ್ಷಿತ.
ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆ ಹಚ್ಚುವ
ನಯವಂಚಕರಿಂದ ಈ ಕನ್ನಡಕದಣ್ಣರು ಮುಕ್ತ
ರಾಗಿರುತ್ತಾರೆ.
ದೇವರು ಒಂದು ಶ್ರೀ ಮುಖಕ್ಕೆ ಎರಡು ಅಕ್ಷಿ
ಕರುಣಿಸಿದರೆ, ನೇತ್ರವೈದ್ಯ ದೃಷ್ಟಿ ಮಾಂದ್ಯರಿಗೆ
ಪುನರ್ ದೃಷ್ಟಿ ಒದಗಿಸುವ ಮಹಾಶಯ.
ಬುದ್ಧಿಜೀವಿಗಳಿಗೆ ಸಮ್ಯಕ್ ದೃಷ್ಟಿ ದಯಪಾಲಿ
ಸಿರುವ ಸುದರ್ಶಿನಿಯೇ  ಈ ಸುಲೋಚನೆಯೆಂಬ
ಸುಶೀಲಕನ್ಯೆ.
ಕಪ್ಪು ಕನ್ನಡಕದ ಕಪ್ಪು ವ್ಯವಹಾರ ಬಣ್ಣಿಸಲಸದಳ.
ಈ ಕಪ್ಪು ಬೆಡಗಿಯನ್ನಾಧರಿಸುವವರು ಸಭಾ ಮಂಟಪ/
ವೇದಿಕೆಯಲ್ಲಿ ಜೊಂಪುನಿದ್ದೆ ಸೊಂಪಾಗಿ ಸವಿಯುವರು.
ಈ ಕಪ್ಪು ಬೆಡಗಿಯ ಅಂತರ್ ಗಣ್ಣು ರಹಸ್ಯಮಯ.
ವಾರೆಗಣ್ಣಿನಿಂದ ಸೌಂದರ್ಯ ಸವಿಯುವ ಚಪಲ ಚಿತ್ತರಿಗೆ
ಪ್ರಾಣ ಮಿತ್ರೆ ಇವಳು.
ಕನ್ನಡಕಧಾರಿಗಳಾದ ಚತುರ್ಗಣ್ಣರು ಚತುರಮತಿಗಳು.
ಸುಲೋಚನಾಧಾರಿಗಳೆಲ್ಲ  ಆಲೋಚನಾಶೀಲರು.
ಬುದ್ಧಿಜೀವಿಗಳ ಪಾಂಡಿತ್ಯ, ಫ್ರೌಡಿಮೆ ಅವರವರ
ಸುಲೋಚನಗಳಲ್ಲಿ ಸಂಭ್ರಮಿಸುತ್ತಿರುತ್ತವೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s