ಚಿಂತನ-ಮಂಥನ.

೧)ಮಾನವರಲ್ಲಿ  ನೂರೆಂಟು ಭಾಷೆಗಳು.
ಪ್ರಕೃತಿಯಲ್ಲಿರುವುದು ಒಂದೇ ಭಾಷೆ,
ಅದು ಬಣ್ಣದ ಭಾಷೆ.
೨)ನಿಂದನೆ  ಮನುಷ್ಯನನ್ನು ಮಾನಸಿಕವಾಗಿ
ಕುಗ್ಗಿಸುತ್ತದೆ.
೩)ಇಡೀ ಸೌಧ ನಿರ್ಮಾಣ ಗೊಂಡ ಬಳಿಕ
ಅಡಿಪಾಯ ಯಾರಿಗೂ ಕಾಣಿಸುವುದಿಲ್ಲ, ನಿಜ.
ಆದರೆ ಆ ಸೌಧಕ್ಕೆತಾನು ನಿಂತಿರುವುದೇ
ಅಡಿಪಾಯದ ಮೇಲೆ ಎನ್ನುವುದು ಗೊತ್ತಿರಬೇಕು.
೪)ಬೆನ್ನಿರುವುದೇ ಬಾಗುವುದಕ್ಕೆ, ನಾಲಗೆ ಇರುವುದೇ
ಹೊಗಳುವುದಕ್ಕೆ, ಕೈ ಇರುವುದೇ ಕಾಲು ಹಿಡಿದು
ನಮಸ್ಕರಿಸುವುದಕ್ಕೆ ಎಂದು ತಿಳಿದು ಬದುಕುವವರದ್ದು
ಒಂದು ರೀತಿ. ತಮಗೆ ಸತ್ಯ ಅನಿಸಿದ್ದನ್ನು ಎಂಥಾ
ಸಂದರ್ಭ ದಲ್ಲೂ ಹೇಳಲು ಅಂಜದವರದ್ದು ರೀತಿ
ಇನ್ನೊಂದು.
೫)ದೇವರ ರೀತಿಯೇ ವಿಚಿತ್ರವಾಗಿದೆ.ವಿಷಮಯ
ನಾಗರ ಹಾವಿನ ಹೆಡೆಯಲ್ಲಿ ರತ್ನವನ್ನು ಇಟ್ಟು ಬಿಡುತ್ತಾನೆ.
ಕೈಗೆಟುಕದ ಆಕಾಶದಲ್ಲಿ, ಯಾರೂ ನೋಡದ ಕಗ್ಗತ್ತಲೆಯಲ್ಲಿ
ಚಿಕ್ಕೆಗಳನ್ನು ಚೆಲ್ಲಿ ಬಿಡುತ್ತಾನೆ.
೬)ಸೀತೆಯ ವೃತವಿರಲಿ.ದ್ರೌಪದಿಯ ಛಲವಿರಲಿ.
(ಶತ್ರುವಿನ ನೆರಳಿನಲ್ಲಿದ್ದರೂ ಸೀತೆ ರಾಮನ ಧ್ಯಾನ ಮಾಡಿ
ಪಾತಿವ್ರತ್ಯ ಉಳಿಸಿಕೊಂಡಳು. ಆದರೆ ದ್ರೌಪದಿ ಛಲಗಾತಿ.
ತನ್ನನ್ನು ತೊಡೆಯ ಮೇಲೆ ಕೂರುವಂತೆ ಆಹ್ವಾನಿಸಿದ
ದುರ್ಯೋಧನನ ತೊಡೆಯನ್ನೇ ಮುರಿಸಿ ಹಾಕಿದಳು.)
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s