ನವರಾತ್ರಿ.

ದೇವಿಯ ಉಪಾಸಕರಿಗೆ  ಆಶ್ವೀಜ ಮಾಸವು
ಬಹು ಪುಣ್ಯಪ್ರದ.
ಮಧು-ಕೈಟಭರನ್ನು ಕೊಂದ ಮಹಾಕಾಳೀ,
ಮಹಿಷಾಸುರ ಮರ್ದಿನೀ ,
ಚಂಡ-ಮುಂಡರನ್ನು ಸಂಹರಿಸಿದ ಚಾಮುಂಡಿ,
ರಕ್ತಬೀಜಾಂತಕಳಾದ ಕಾಳಿ, ನಂದನ ಪುತ್ರಿ,
ಕಂಸನ ಮರಣಸೂಚಕಳೂ ಆದ ದುರ್ಗಾ,
ರಕ್ತದಂತಿ, ಕ್ಷಾಮ ನಿವಾರಕಳಾದ ಶಾಕಾಂಬರಿ,
ಅರುಣನೆಂಬ  ರಾಕ್ಷಸನನ್ನು ಕೊಂದ ಭ್ರಾಮರಿದೇವಿ,
ಈ ಒಂಭತ್ತು ರೂಪಗಳನ್ನು ನವರಾತ್ರಿಯ ಒಂಭತ್ತು
ದಿನಗಳಲ್ಲಿ ಪೂಜಿಸುತ್ತಾರೆ.
ಶರತ್ಕಾಲದ ಆರಂಭದ ಈ ದಿವಸಗಳಲ್ಲಿ
ಯಮ ದಂಷ್ಟ್ರಯ ಪೀಡಾ ನಿವಾರಣೆಗಾಗಿ,
ವಿಷ್ಣು, ಶಂಕರ,ಅಗ್ನಿಗಳ ತೇಜಸ್ಸಿನಿಂದ
ಉದ್ಭವಿಸಿದ ಮತ್ತು ದೇವತೆಗಳಿಂದ ವಿವಿಧ
ಆಯುಧಗಳನ್ನು ಪಡೆದಿರುವ, ದೈತ್ಯ ಸಂಹಾ
ರಿಣಿಯೂ, ಆಷಾಢ ಪೂರ್ಣಿಮೆಯದಿನ
ನಿದ್ರಿಸಿರುವವಳೂ ಆದ ದೇವಿಯನ್ನು ಒಂದೊಂದು
ದಿನದಲ್ಲೂ ಒಂದೊಂದು ಹೆಸರಿನಿಂದ ಪೂಜಿಸಿ
ಎಚ್ಚರಗೊಳಿಸುತ್ತಾ ಈ ಉತ್ಸವವನ್ನು ಆಚರಿಸುತ್ತಾರೆ.
ನವದುರ್ಗೆಯರಲ್ಲಿ, ಯೋಗನಿದ್ರಾ ದುರ್ಗಾದೇವಿ
ಪ್ರಥಮ ದಿನದಂದು ಪೂಜಿತಳು.
ಇವಳು ರಕ್ತವರ್ಣೆ, ಗಜವಾಹನೆ,ರಕ್ತ ಪುಷ್ಪ ಪ್ರಿಯೆ,
ಗದಾ ಶಕ್ತಿ, ಶೂಲಪಾಣಿ.
ದೇವಜಾತಾ ದುರ್ಗಾದೇವಿಯು ಎರಡನೇ ದಿನದಂದು
ಪೂಜಿಸಲ್ಪಡುವವಳು. ಇವಳು ಹಂಸವಾಹನೆ, ಶ್ವೇತ
ವರ್ಣೆ, ಶ್ವೇತ ಪುಷ್ಪ ಪೂಜಿತೆ.ಸೃಕ್ , ಸ್ರುವ, ಕಮಂಡಲು,
ಅಕ್ಷ ಮಾಲಿಕೆ ಗಳನ್ನು ಧರಿಸಿರುವ ಚತುರ್ಭುಜೆ.
ಮಹಿಷಾಸುರ ಮರ್ದಿನಿಯನ್ನು ಮೂರನೇ ದಿನ
ಪೂಜಿಸುತ್ತಾರೆ. ಇವಳು ಶುಭ್ರವರ್ಣೆ, ಕಮಲ ಹಸ್ತೆ,
ದ್ವಿಭುಜೆ,ಸಿಂಹವಾಹನೆಯಾಗಿರುತ್ತಾಳೆ.
ಶೈಲದುರ್ಗೆಯನ್ನು ನಾಲ್ಕನೇ ದಿನ ಪೂಜಿಸುತ್ತಾರೆ.
ಈಕೆ ರಕ್ತ ವರ್ಣೆ, ರಕ್ತ ವಸ್ತ್ರ ಧಾರಿಣಿ,ಪಾಶ-ಅಂಕುಶ
ಗಳನ್ನು ತನ್ನ ಕೈಗಳಲ್ಲಿ ಧರಿಸಿರುತ್ತಾಳೆ. ಮೂಷಕ
ವಾಹನೆ; ರಕ್ತಾಕ್ಷತೆ ಪ್ರಿಯಳು.
ಧೂಮ್ರಹಾಳನ್ನು ಐದನೇ ದಿನ ಪೂಜಿಸುತ್ತಾರೆ.
ಇವಳು ಮಕರ ವಾಹನೆ.ಚತುರ್ಭುಜೆ.ಶಂಖ,ಚಕ್ರ,
ಗದಾ, ಕಮಲ ಧಾರಿಣಿ.
ಚಂಡ ಮುಂಡಹಾ ದುರ್ಗೆಯನ್ನು ಆರನೇ ದಿನ
ಪೂಜಿಸುತ್ತಾರೆ. ಇವಳು ಮಯೂರ ವಾಹನೆ.
ಬಾಣ-ಕೋದಂಡ ಧಾರಿಣಿ.
ರಕ್ತ ಬೀಜಹಾ ದುರ್ಗೆಯನ್ನು ಏಳನೇ ದಿನ
ಪೂಜಿಸುತ್ತಾರೆ. ಈಕೆ ರಥಾರೂಢಳಾಗಿದ್ದು,
ತನ್ನ ಎರಡೂ ಕೈಗಳಲ್ಲಿ ಕಮಲವನ್ನು ಧರಿಸಿದ್ದಾಳೆ.
ಶುಭದಾಯಕಳು.ರಕ್ತ ವರ್ಣೆ, ರಕ್ತ ವಸ್ತ್ರ ಧಾರಿಣಿ.
ನಿಶುಂಭಹಾ ದುರ್ಗೆಯನ್ನು ಎಂಟನೇ ದಿನ
ಪೂಜಿಸುತ್ತಾರೆ.ಈಕೆ ತ್ರಿಶೂಲ-ಡಮರು-ಚರ್ಮ
ಖಟ್ಟಾಂಗ ಧಾರಿಣಿ. ಶ್ವೇತವಸ್ತ್ರ ಧಾರಿಣಿ.
ವೃಷ ವಾಹನೆ.
ಶುಂಭಾಸುರನನ್ನು ಸಂಹರಿಸಿದ ಶುಂಭಹಾ
ದುರ್ಗಾದೇವಿಯನ್ನು ಒಂಭತ್ತನೇ  ದಿನ ಪೂಜಿ
ಸುತ್ತಾರೆ. ಖೇಟ(ಗುರಾಣಿ), ಬಾಣ, ಕಮಂಡಲು
ಧಾರಿಣಿಯಾದ ಇವಳು ತ್ರಿನೇತ್ರೆ, ಸಿಂಹ ವಾಹನೆ,
ಚಂದ್ರ ನಿಂದ  ಅಲಂಕೃತಳಾಗಿ ಕೋಟಿ ಸೂರ್ಯನ
ಸಮಪ್ರಭೆ ಯಾಗಿರುವವಳು.
ದುರ್ಗಾಪೂಜೆಯಲ್ಲಿ  ಸಾತ್ವಕೀ (ಜಪ. ಹೋಮ,ನೈವೇದ್ಯ),
ತಾಮಸೀ(ಪ್ರಾಣಿಬಲಿ, ಸುರಾ ನೈವೇದ್ಯ),  ಮತ್ತು ರಾಜಸೀ
(ಬಲಿದಾನ) ಎಂದು ಮೂರು ವಿಧ.
ನವರಾತ್ರಿ ಎಂದರೆ ೯ ”ರಾತ್ರಿ”ಗಳಲ್ಲಿ ದೇವಿಯನ್ನು
ಪೂಜಿಸಬೇಕು ಎಂದಲ್ಲ.  ಅಶ್ವಿನ ಶುದ್ಧ ಪಾಡ್ಯದಿಂದ
ನವಮಿವರೆಗೆ ೯ ”ತಿಥಿ”ಗಳಲ್ಲಿ ಆರಾಧಿಸಬೇಕು ಎಂಬ
ಅಭಿಪ್ರಾಯ. ತಿಥಿಗಳು (ಘಳಿಗೆ ಕಡಿಮೆಯಾಗುತ್ತಾ
ಬರುವ ಸಂದರ್ಭದಲ್ಲಿ) ೮ (ರಾತ್ರಿ) ಇರ ಬಹುದು;
(ಘಳಿಗೆಗಳು ಹೆಚ್ಚುತ್ತಾ ಬರುವಲ್ಲಿ) ೧೦ (ರಾತ್ರಿ)
ಕೂಡಾ ಇರಬಹುದು. ಈ ಬಾರಿ ಸೆಪ್ಟೆಂಬರ್
೨೭ರ ಮಹಾಲಯ ಅಮಾವಾಸ್ಯೆ ಕೇವಲ
೨೫ ಘಳಿಗೆ ಮಾತ್ರ ಇದ್ದು, ಮಧ್ಯಾಹ್ನ ನಂತರ ಪಾಡ್ಯ
ಪ್ರಾರಂಭ. ತಿಥಿ ಪ್ರಕಾರ ನವರಾತ್ರಿ ಪಾಡ್ಯಕ್ಕೆ ಪ್ರಾರಂಭ
ವಾದರೆ ನವಮಿಗೆ ಕೊನೆಗೊಳ್ಳುತ್ತದೆ. ಈ ಬಾರಿ
ದ್ವಿತೀಯ ಮತ್ತು ತೃತೀಯ ತಿಥಿಗಳು ಒಂದೇ ದಿನ
(ಸೆಪ್ಟೆಂಬರ್ ೨೯ ರಂದು) ಬಂದಿರುವುದರಿಂದ  ೮ ನೇ
ದಿನಕ್ಕೆ ನವರಾತ್ರಿ ಕೊನೆಗೊಳ್ಳುತ್ತದೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s