ತುಳಸಿ ಮಹಿಮೆ.

ತುಳಸಿಯ ಮಹಿಮೆ ಅನುಪಮ. ಸಾವು ಸಮೀಪಿಸಿ
ದಾಗ ತುಳಸೀ ಸಮೇತ ಗಂಗಾಜಲವನ್ನು ಬಾಯಿಗೆ
ಹಾಕುತ್ತಾರೆ. ಇದರಿಂದಾಗಿ ಕಾಲನ ಸೇವಕರು ಬಂದು
ತಲುಪುವ ಮೊದಲೇ ವಿಷ್ಣು ದೂತರು ಬಂದು ಆ ಜೀವಕ್ಕೆ
ವಿಷ್ಣು ಸಾಯುಜ್ಯವನ್ನೂ ಒದಗಿಸುವುದಾಗಿ ಪರಶಿವನು
ನಾರದನಿಗೆ ಹೇಳಿದ್ದಾನೆ. ದಹನ ಕಾಲದಲ್ಲಿ ನೂರು ಕಾಷ್ಠ
ಗಳ ನಡುವೆ ಒಂದೇ ಒಂದು ತುಳಸೀ ಕಾಷ್ಠ ಇದ್ದರೂ
ಕೂಡ ಕೋಟಿ ಪಾಪ ಮಾಡಿದವನೂ ಸಹ ಮುಕ್ತಿಯನ್ನು
ಪಡೆಯುತ್ತಾನೆ.
ತುಳಸಿ ಇಲ್ಲದೆ ಸಾಲಿಗ್ರಾಮ ಪೂಜೆ ಇಲ್ಲ.
ತುಳಸಿಯನ್ನು ಹಾಲಿನಿಂದ ಪೂಜಿಸಿದರೆ ಲಕ್ಷ್ಮಿ ಪ್ರಸನ್ನ
ಳಾಗುವಳು.ಶನಿ ಕಾಟ ನಿವಾರಣೆಗೆ ತುಳಸೀ ಪೂಜೆ ಸೂಕ್ತ.
ವೃಂದಾ/ತುಳಸಿ, ಜಲಂಧರನೆಂಬ ಅಸುರನ ಪತ್ನಿ.
ಮಹಾ ಪತಿವ್ರತೆ.ಜಾಂಬವತಿ ದೇವಿಯೇ ತುಳಸೀ ದೇವಿ
ಎಂಬ ನಂಬಿಕೆಯೂ ಇದೆ.
ತುಳಸಿ ಇಲ್ಲದ ಆಯುರ್ವೇದ ಇಲ್ಲ. ತುಳಸೀ ಗಿಡದ
ಮೇಲಿನಿಂದ ಬೀಸುವ ಗಾಳಿ ದಶ ದಿಕ್ಕುಗಳನ್ನು ವ್ಯಾಪಿಸಿ
ಭೂತ,ಪ್ರೇತ,ಪಿಶಾಚಿ, ವ್ಯಾಧಿ,ಬಾಧೆಗಳನ್ನು, ರೋಗ
ರುಜಿನಗಳನ್ನು ನಾಶ ಮಾಡುತ್ತದೆ. ಶರೀರದಾದ್ಯಾತ
ತುಳಸಿ ಮೃತ್ತಿಕೆಯನ್ನು ಲೇಪಿಸಿದಾಗ ಆಯುರ್ವೃದ್ಧಿಯಾಗು
ತ್ತದೆ.ನೈವೇದ್ಯದ ಮೇಲೆ ತುಳಸಿದಳ ಇಡುತ್ತಾರೆ.
ತುಳಸೀ ಮಾಲೆಯಲ್ಲಿ ರೋಗ ನಿವಾರಣಾ ಶಕ್ತಿಯ ಜೊತೆಗೆ
ಪವಿತ್ರೀಕರಣ ಶಕ್ತಿಯೂ ಅಪಾರವಿದೆ.
ತುಳಸಿ, ಅಗಸೆ, ಧಾತ್ರಿ ಇವು ಮೂರೂ ಶ್ರೀ ಹರಿಗೆ
ಪ್ರಿಯ. ತುಳಸಿಯ ಒಂದೇ ಒಂದು ಎಲೆಯನ್ನೂ  ವ್ಯರ್ಥ
ವಾಗಿಸದೆ ಶ್ರೀ ಹರಿಯನ್ನು ಪೂಜಿಸಿದುದರಿಂದ ಪಾರ್ವತೀ
ದೇವಿಗೆ ಅಪರ್ಣಾ ಎಂದು ಹೆಸರಿದೆ.
ಮೂಲ:ಸಂಗ್ರಹ.
Advertisements

ಶ್ರೀ ತುಳಸಿ.

ಹಿಂದೆ ಅಮೃತ ಮಂಥನ ಕಾಲದಲ್ಲಿ ಭಗವಂತನ
ಅಂಶರೂಪನಾದ ಧನ್ವಂತರಿಯು ಅಜರಾಮರತ್ವ
ವನ್ನು ದಯಪಾಲಿಸುವ ಅಮೃತ ಕಲಶದೊಡನೆ
ಪಾಲ್ಗಡಲಿಂದ  ಆವಿರ್ಭವಿಸಿದನು. ಆ ಅಮೃತ ಕಲಶ
ದೊಳಕ್ಕೆ ಶ್ರೀ ಹರಿಯ ಕಣ್ಣುಗಳಿಂದ ಆನಂದಾಶ್ರುಗಳು
ಉದುರಿದವು. ಅದರಿಂದ ತುಳಸಿ ಗಿಡ ಉತ್ಪತ್ತಿ
ಯಾಯಿತು ಎಂಬುದು ಪುರಾಣ ಕಥೆ.
ವೈಷ್ಣವ ಪಂಥದ ಅಭಿವೃದ್ಧಿಯೊಂದಿಗೆ ಪೂಜಾ
ವಿಧಾನಗಳಲ್ಲಿ ತುಳಸಿ ಅಮೂಲ್ಯ ಪುಷ್ಪವಾಗಿ
ಪರಿಗ್ರಹಿಸಲ್ಪಟ್ಟಿತು.
ಕಾರ್ತಿಕ ಮಾಸದ ಮೊದಲನೇ ದಿನ (ಪಾಡ್ಯ) ದಿಂದ
ಹನ್ನೆರಡನೇ ದಿನ ( ಉತ್ಥಾನ ದ್ವಾದಶಿ) ತನಕ ತುಳಸಿ
ಯನ್ನು ಪೂಜಿಸುತ್ತಾರೆ. ತುಳಸಿ ಕಟ್ಟೆಗೆ ಬಲವಂದು
(ಪ್ರದಕ್ಷಿಣೆ ಮಾಡು) ಭಕ್ತಿಯೊಳು ನಮಿಸುತ್ತಾರೆ.
ಉತ್ಥಾನ ಅಂದರೆ ಮೇಲಕ್ಕೆ ಏಳು.ಕಾರ್ತಿಕ ಮಾಸದ
ಹನ್ನೆರಡನೇ ದಿನ (ಉತ್ಥಾನ ದ್ವಾದಶಿ) ”ತುಳಸಿ ಹಬ್ಬ”
ವನ್ನು ಆಚರಿಸುತ್ತಾರೆ.
ನರಕ ಚತುರ್ದಶಿಯಂದು ನರಕಾಸುರನ ವಧಾನಂತರ
ಎಣ್ಣೆ ಸ್ನಾನ ಮಾಡಿದ ಭಗವಂತ ನಿದ್ದೆ ಮಾಡುತ್ತಾನಂತೆ.
ಉತ್ಥಾನ ದ್ವಾದಶಿಯಂದು ದೇವತೆಗಳೆಲ್ಲ ಬಂದು ಗರುಡ
ಧ್ವಜನನ್ನು ಎಬ್ಬಿಸುತ್ತಾರಂತೆ. ಉತ್ಥಾನ ದ್ವಾದಶಿಯಂದು
ತುಳಸಿ ಕಟ್ಟೆಯಲ್ಲಿ ಭಗವಂತನ ವಿಶೇಷ ಸಾನ್ನಿಧ್ಯವಿದೆ
ಎಂದು ಅನುಸಂಧಾನ. ತುಳಸಿ ಸಾನ್ನಿಧ್ಯ ಪಶ್ಚಿಮಾಭಿ
ಮುಖವಾಗಿದೆ.ತುಳಸಿಯ ಎದುರು ನಿಂತಾಗ ಕಾಣುವುದು
ಸೂರ್ಯ.
ನವ ವಿಧ ತುಳಸಿ ಪೂಜೆ :–ನೋಡುವುದು,ಸ್ಪರ್ಶಿಸುವುದು,
ಧ್ಯಾನಿಸುವುದು,ಗುಣಗಾನ ಮಾಡುವುದು, ನಮಿಸುವುದು,
ಸ್ತುತಿಸುವುದು,ನೀರೆರೆಯುವುದು,ಗಿಡ ನೆಡುವುದು,ನಿತ್ಯ
ಪೂಜಿಸುವುದು.
ಅತಿ ಹೆಚ್ಚು ಆಮ್ಲ ಜನಕವನ್ನು ಹೊರಗೆಡಹುವ ತುಳಸಿ
ಔಷಧೀಯ ಸಸ್ಯ. ತುಳಸಿ ಇದ್ದಲ್ಲಿ ಪಾವಿತ್ರ್ಯ ವಿದೆ.
ಮೂಲ:ಸಂಗ್ರಹ.

Do You Know?

1)Cow dung is accurate for carbon dating. It’s a

data set that typically disappears in the fossil record.

All we typically get are bones but with dung, we get

bio-chemistry. We can tell a lot about the climate by

analyzing what plants the animal ate.-Jim Mead(Scientist)

2)Philosophy=Philo-Sofia(Love of Knowledge).

3)Atlas, edited by Claudius Ptolemy, who lived

during the first and second centuries, was the first

atlas ever printed. Ptolemy was an astronomer and

geographer.

4)Honey is the only food that does not get spoilt.

In fact, honey found in the tombs of  pharaohs,

found edible-after all the years-by archaeologists.

5)Scholar plant/Chitwan/-evergreen, shady,cool,

scented and well known for increasing concentration.

6)Multiple Sclerosis is a degenerative disease of the

central nervous system, which results in patients slowly

losing control over their bodies. German remedy:-Betaferon,

injection of Interferon used in the treatment of  the disease.

7)Bom (good) Bahia (bay)=Bombay.(origin:Portuguese words)

8)When you smile, you use 53 facial muscles.

9)Just as fortified salt cures goitre, now we have

new fortified sugar which curbs the increasing cases

of xerophthalmia and night blindedness among kids.

Fortified sugar makes up for vitamin A deficiency.

10)Men look for facts(news, sports, stocks etc);

Women seek health and religious guidance.

–a survey of U.S.Web usage has found.

Source:Collection.

ಭಾರತೀಯ ಹಬ್ಬಗಳ ವೈಶಿಷ್ಟ್ಯ.

ಭಾರತೀಯ ಹಬ್ಬಗಳಲ್ಲಿ ಯೋಗ ಭೋಗ ಎರಡೂ ಸೇರಿವೆ.
ಋತುಗಳು, ಪ್ರಾದೇಶಿಕತೆ ಗಳಿಗನುಗುಣವಾಗಿ
ನಮ್ಮ ಹಬ್ಬಗಳು ವಿನ್ಯಾಸ ಗೊಂಡಿವೆ.
ಉಪವಾಸದ ಹಬ್ಬಗಳು ಋತುಮಾನ, ಕಾಲಕ್ಕನುಗುಣವಾಗಿ
ನಿಯುಕ್ತವಾಗಿವೆ. ಹೊಟ್ಟೆ ಹಸಿದಿದ್ದರೂ  ಆತ್ಮ ಸಂಯಮ,
ಆತ್ಮ ಸಂತೃಪ್ತಿಯನ್ನು ಪಡೆಯಬೇಕಾದ ದಿನಗಳಿವು. ಇವು
ಗಳಲ್ಲಿಯೂ ದಿವ್ಯಾನುಭವದ ದರ್ಶನವಿದೆ.
ಹಬ್ಬಗಳ ಆಚರಣೆಯಲ್ಲಿರುವ ವಿಧಿ, ವಿಧಾನಗಳು ಆಯುಷ್ಯ,
ಆರೋಗ್ಯ, ಆನಂದವನ್ನು ಕಾಲಾನುಗುಣಕ್ಕೆ ಅನುಕ್ರಮವಾಗಿ
ನೀಡುತ್ತವೆ. ದೀಪಾವಳಿ ಹಬ್ಬದ ದಿನ ಪ್ರಾತಃ ಕಾಲ
ತೈಲಾಭ್ಯಂಜನ ಮಾಡುವುದರಿಂದ ಮುಪ್ಪು, ಆಯಾಸ,
ವಾತದ ದೋಷ ನಿವಾರಣೆ ಇತ್ಯಾದಿ ಭೌತಿಕ ಲಾಭ
ಉಂಟಾಗುತ್ತದೆ. ಪ್ರಸನ್ನತೆ, ಪುಷ್ಟಿ, ನಿದ್ರೆಯ ಸೌಖ್ಯವನ್ನು
ನೀಡುವುದು; ಚರ್ಮದ ಆರೋಗ್ಯ, ಸೌಂದರ್ಯ, ದಾರ್ಡ್ಯ
ಗಳನ್ನು ತಂದು ಕೊಡುವುದು.
ಮಕರ ಸಂಕ್ರಾಂತಿ—ಕಾಲದ ಬದಲಾವಣೆಯ ಒಂದು
ಪ್ರಮುಖ ಘಟ್ಟ. ಈ ಹೊತ್ತಿಗೆ ಚಳಿ ಹೆಚ್ಚು. ಮೈ ಚರ್ಮ
ಬಿರಿಯುತ್ತದೆ. ಇದರ ಉಪಶಮನಕ್ಕಾಗಿ, ಸಂಕ್ರಾಂತಿ
ಆಚರಣೆ ವೇಳೆ ಎಳ್ಳು, ಬೆಲ್ಲ, ಕಡಲೆ ತಿನ್ನುವುದು ಸಂಪ್ರ
ದಾಯ. ಹಬ್ಬಗಳ ಆಚರಣೆಯಲ್ಲಿ, ಭಾವಾರ್ಥವನ್ನು
ಗ್ರಹಿಸಿ, ಯಾವ ರೀತಿ ಅನುಪಾಲನೆ ಮಾಡುತ್ತೇವೆ
ಎಂಬುದರ ಮೇಲೆ ನಮ್ಮ ಆರೋಗ್ಯ ಸ್ಥಿತಿ ನಿರ್ಧಾರ
ವಾಗುತ್ತದೆ.
ಉತ್ಸವ ಪ್ರಿಯಾಃ ಖಲು ಮನುಷ್ಯಾಃ (ಕಾಳಿದಾಸ).
ಜೀವನಕ್ಕೆ ಉತ್ಸಾಹ ತುಂಬಲು ಬಂದಂಥವು ಹಬ್ಬಗಳು
ಮತ್ತು ಉತ್ಸವ. ಹಬ್ಬಗಳು ಭಾರತೀಯ ಜೀವನ ಶೈಲಿಯ
ಪ್ರಧಾನ ಜೀವನಾಡಿ. ಹಬ್ಬಗಳಿಂದಾಗಿ ಬದುಕು ಬಣ್ಣ
ಪಡೆದು ಕೊಳ್ಳುತ್ತದೆ.
ಹಬ್ಬಗಳು ಚೈತನ್ಯ ಮೂಡಿಸುತ್ತವೆ. ಬದುಕಿನ
ಅಸ್ತವ್ಯಸ್ತವನ್ನು ನೇರ್ಪುಗೊಳಿಸುತ್ತವೆ. ಸಾವು
ನೋವಿನ ಘಾಯಕ್ಕೆ ಹಬ್ಬ-ಹರಿದಿನಗಳಂಥ
ಮದ್ದು ಬೇರೊಂದಿಲ್ಲ.ಅವು ಖಿನ್ನತೆಯನ್ನು
ಕಳೆಯುತ್ತವೆ.ಹತಾಶೆಯ ಸ್ಥಾನದಲ್ಲಿ
ಆಶಾವಾದವನ್ನು ತುಂಬುತ್ತವೆ. ವ್ಯಾಕುಲಚಿತ್ತರಿಗೆ
ಭಾವನೆಗಳ ಮೇಲೆ ಹತೋಟಿ ಸಾಧಿಸಲು ನೆರವು
ನೀಡುತ್ತವೆ.ವಿವಿದೆಡೆ ಚದುರಿ ಹೋಗಿರುವ ಕುಟುಂಬ
ಸದಸ್ಯರು ಹಬ್ಬದ ದಿನ ಗೂಡು ಸೇರುತ್ತಾರೆ.
ಹಬ್ಬದ ಕೆಲವು ಕ್ರಿಯಾ ವಿಧಿಗಳು ಕುಟುಂಬ, ಬಂಧು
ಬಳಗದ ಅನುಬಂಧವನ್ನು ವೃದ್ಧಿಸುತ್ತವೆ. ಮಧುರ
ಸ್ಮರಣೆಗಳನ್ನೂ ಉದ್ದೀಪಿಸುತ್ತವೆ.ಸಂಬಂಧಗಳನ್ನು
ನಿಕಟ ಗೊಳಿಸುತ್ತವೆ
ಮೂಲ:ಸಂಗ್ರಹ.

5th Day Of Diwali.

Sisters celebrate their bond with  brothers

on the second day of newmoon.(5th day of Diwali).

Legend says that  Yamaraj,the Lord of death and

custodian of Hell, visited his sister Yami, who put

Tilak (an ornamental mark) on his forehead and prayed

for his well being.So it is held that anyone who receives

a  Tilak  from his sister would never be hurled into Hell.

Another legend says that on this day, Lord Krishna, after

slaying the demon Narakasura, went to his sister Subhadra,

who welcomed him with a lamp, flowers and sweets and put

the auspicious Tilak on her brother’s forehead.

Source:Collection.

Diwali wishes to all my beloved viewers:

”Wish you the success as bright as gold,

friends as solid as diamonds, love as deep

as ocean, difficulty (if at all) as light as air

and happiness as much as Sun’s glow–not

today or througout the year but always, always….

May God Bless You All.”

Vani Hegde.

ದೀಪೋತ್ಸವ.

ದೀಪಾವಳಿ ಏಳುದಿನಗಳ ಹಬ್ಬ.ಆಶ್ವಯುಜ ಮಾಸದ
ಕೃಷ್ಣ ಪಕ್ಷದ ದ್ವಾದಶಿ(ವಸು ದ್ವಾದಶಿ)ಯಂದು ಪ್ರಾರಂಭ.
ಮರುದಿನ ಧನ ತ್ರಯೋದಶಿ. ದೀಪಾವಳಿಯ ಐದು ದಿನ
ಗಳು ಮನೆಗಳಲ್ಲಿ ದೀಪ ಹಚ್ಚಿಟ್ಟರೆ ಮನೆಯಲ್ಲಿ ಯಾರೂ
ಅಪಮೃತ್ಯುವಿಗೆ ಈಡಾಗುವುದಿಲ್ಲ ಎಂದು ಯಮಧರ್ಮನೇ
ಆಶ್ವಾಸನೆ ಕೊಟ್ಟಿದ್ದಾನೆ.
ಆಶ್ವಯುಜ ಬಹುಳ ಅಮವಾಸ್ಯೆಯಂದು ಲಕ್ಷ್ಮೀ ಪೂಜೆ.
ಮರುದಿನ (ಕಾರ್ತಿಕ ಮಾಸದ ಮೊದಲ ದಿನ) ಬಲಿ
ಪಾಡ್ಯಮಿ.ಅದೇ ದಿನ ಶ್ರೀ ರಾಮ ಪಟ್ಟಾಭಿಷೇಕ(ತ್ರೇತಾ
ಯುಗದಲ್ಲಿ); ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನೂ
ಗೊಲ್ಲರನ್ನೂ ಗೋಪಾಲ ಕೃಷ್ಣ ಮಳೆಯಿಂದ ಪೊರೆದ ದಿನ.
(ದ್ವಾಪರ ಯುಗದಲ್ಲಿ).
ಮರುದಿನ ಭಾವ ಬಿದಿಗೆ. ಸೋದರರು ದ್ವಿತೀಯೆ(ಸಹೋದರಿ)
ಯನ್ನು ತೌರಿಗೆ ಆಹ್ವಾನಿಸಿ ಉಪಚರಿಸುತ್ತಾರೆ.
ಮರುದಿನ ಅಕ್ಕನ ತದಿಗೆ. ಸೋದರಿಯರು ಸೋದರರನ್ನು
ಭೇಟಿಯಾಗಿ ಸತ್ಕಾರ ಪಡೆಯುತ್ತಾರೆ.(ಕಾರ್ತಿಕ ಶುದ್ಧ ತೃತೀಯೆ)
ದೀಪಾವಳಿ ಬೆಳಕನ್ನಷ್ಟೇ ತರಲಿ. ಸುಡುಮದ್ದಿನ ಬಳಕೆಯಲ್ಲಿ
ಎಚ್ಚರ ತಪ್ಪಿದರೆ ಬೆಳಕಿನ ಹಬ್ಬ ಕತ್ತಲೆ ತರ ಬಹುದು.
ಮೂಲ:ಸಂಗ್ರಹ.

What I likes In America.

I had  been to America 3 times, and each time

I had seen different tourist spots. Among countless

attractions there, I want to name a few:

Land is green. Environment is clean.

People are peaceful and affectionate.

People belonging to different communities

(Chinese, Japanese, Koreans, Indians etc)

live in different colonies peacefully.

We can see a garden in front of every house.

Houses are insect free and well maintained.

For women, cooking is a pleasure there.

Grated coconuts and cleanly packed cut

vegetables are available in grocery shops.

We have to prepare only seasoning and

add vegetables and cook. No need to clean

the dust on the floor with broomstick and wash,

because there is machine for dust cleaning.

We need not apply liquid soap and wash the

vessels because there is machine for dishwash.

Clothes are dried in washing machine after cleaning.

We find a lot of leisure  and relief from household works.

Hygiene is the essence of  every restaurant. No traffic jam

because of oneway traffic system. Spitting or throwing of

waste on road is not allowed. Cops are duty conscious and

keep sharp watch on those who violate traffic rules.

Security measures are strict at airports.

Weather is beautiful. Ice covered hill tops and

emarald green forests -everything is attractive.

Shops are away from housing colonies.Each

family owns a car.A lot of recreation spots are

there for children to enjoy. I really enjoyed my

stay there in the company of my children and

grandchildren.

By Vani Hegde.